ಈ ಕಾಲದ ಪ್ರೇಮಿಗಳನ್ನು ಮೋಡಿ ಮಾಡಿದ ಹೈವೋಲ್ಟೇಜ್ ಲವ್ಸ್ಟೋರಿ “31 ಡೇಸ್”

Date:

  • ಈ ಕಾಲದ ಪ್ರೇಮಿಗಳನ್ನು ಮೋಡಿ ಮಾಡಿದ ಹೈವೋಲ್ಟೇಜ್ ಲವ್ಸ್ಟೋರಿ “31 ಡೇಸ್”
  • 31 ದಿನ ಟಾಸ್ಕ್ ಕತೆಯಲ್ಲಿದೆ ಪ್ರೀತಿಯ ಮಧುರ ಭಾವನೆ
  • ಯುವ ಸಮೂಹಕ್ಕೆ ಕನೆಕ್ಟ್ ಆಗೋ ಸುಂದರ ಪ್ರೇಮಕತೆ

ಮೂಡಿದ ಪ್ರೀತಿಯನ್ನು ಉಳಿಸಿಕೊಳ್ಳುವುದೇ ಈ ಕಾಲದ ಸಾಹಸ, ಬರೀ ಆಕರ್ಷಣೆಯಾಗುತ್ತಿರುವ ಈ ಕಾಲದ ಪ್ರೀತಿಯ ಬಗ್ಗೆ ಸುಂದರವಾದ ಕತೆ ಹೆಣೆದು ಈ ಕಾಲದ ಯೂತ್ ಗಳನ್ನು ಕಾಡಿಸಿದೆ “31 ಡೇಸ್” 31 days ಚಿತ್ರ. ಇಲ್ಲಿ ಪ್ರೀತಿಗಾಗಿ 31 ದಿನಗಳ ಟಾಸ್ಕ್ ಇದೆ, ನವಿರು ಭಾವನೆಯಿದೆ, ಭಾವನೆಗಳ ಜೊತೆ, ಒಂದಷ್ಟು ಕಾಮಿಡಿ ಕೂಡ ಇದೆ. ಕಳೆದ ವಾರವಷ್ಟೇ ಬಿಡುಗಡೆಯಾದ “31 ಡೇಸ್” ಚಿತ್ರ, ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರಿಗೆ ತೋರಿಸುವ ಮೂಲಕ ಸುದ್ದಿಯಲ್ಲಿದೆ. ಚಿತ್ರದ ಹೈವೋಲ್ಟೇಜ್ ಲವ್ಸ್ಟೋರಿ ಈಗಿನ ಯೂತ್ ಗೆ ಇಷ್ಟವಾಗುವ ರೀತಿಯಲ್ಲಿದೆ.

ರಾಜ ರವಿಕುಮಾರ್ Raja ravikumar ನಿರ್ದೇಶನದ, ಎನ್ ಸ್ಟಾರ್ ಬ್ಯಾನರ್ ನಲ್ಲಿ N star banner ನಾಗವೇಣಿ ಎನ್ ಶೆಟ್ಟಿ Nagaveni shetty ನಿರ್ಮಿಸಿರುವ ಸಿನಿಮಾ ಇದಾಗಿದ್ದು, “ಜಾಲಿಡೇಸ್” ಖ್ಯಾತಿಯ ನಿರಂಜನ್ ಶೆಟ್ಟಿ Niranjan shetty ಹಾಗು ಪ್ರಜ್ವಲಿ ಸುವರ್ಣ Prajwali suvarna ನಾಯಕ – ನಾಯಕಿಯಾಗಿ ನಟಿಸಿದ್ದಾರೆ.

ಸೌಂಡ್ ಮಾಡಿದ ಸಾಂಗ್ಸ್

ಚಿತ್ರದಲ್ಲಿ ಹಾಡುಗಳು ಕೂಡ ಎಮೋಷನಲ್ ಫೀಲ್ ನೀಡಿದ್ದು ಮ್ಯೂಜಿಕಲ್ ಮೂವಿ ಕೂಡ ಇದಾಗಿದೆ. ವಿ.ಮನೋಹರ್ v manohar ಸಂಗೀತ ನಿರ್ದೇಶನದ 150 ನೇ ಚಿತ್ರವಿದು. ಹಾಗಾಗಿ ಚಿತ್ರದಲ್ಲಿ ಹಾಡುಗಳು ಕೂಡ ಸೌಂಡ್ ಮಾಡಿವೆ. ಇನ್ನು ಚಿತ್ರದಲ್ಲಿ ವಿನುತ್. ಕೆ. ಛಾಯಾಗ್ರಹಣ, ಧನು ಕುಮಾರ್, ತ್ರಿಭುವನ್ ನೃತ್ಯ ನಿರ್ದೇಶನ, ಸನತ್, ರವಿತೇಜ್ , ನಿಶ್ಚಿತ್ ಪೂಜಾರಿ ರವರ ಸಂಕಲನ, ಲಕ್ಕಿ ನಾಗೇಶ್ ಅವರ ನಿರ್ಮಾಣ ನಿರ್ವಹಣೆ ಕೂಡ ಚಿತ್ರಕ್ಕೆ ವಿನೂತನ ಸ್ಪರ್ಶ ನೀಡಿದೆ. ಒಟ್ಟಾರೆಯಾಗಿ 31 ದಿನದ ಮೋಜು ಮಸ್ತಿ ಎಲ್ಲವನ್ನೂ ತೋರಿಸುವಲ್ಲಿ ಚಿತ್ರತಂಡ ಭರ್ಜರಿಯಾಗಿ ಕೆಲಸಮಾಡಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...