ಟೈಟಲ್ ನಿಂದಲೇ ಕುತೂಹಲ ಕ್ರಿಯೇಟ್ ಮಾಡ್ತಿದೆ “ಎಲ್ಟು ಮುತ್ತಾ”

Date:

  • ಟೈಟಲ್ ನಿಂದಲೇ ಕುತೂಹಲ ಕ್ರಿಯೇಟ್ ಮಾಡ್ತಿದೆ “ಎಲ್ಟು ಮುತ್ತಾ”
  • ಹೈ5 ಸ್ಟುಡಿಯೋಸ್ ನ ಚೊಚ್ಚಲ ಚಿತ್ರ “ಎಲ್ಟುಮುತ್ತಾ”
  • ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.

ಕೆಲವು ಸಮಯಗಳ ಹಿಂದೆ ಪೋಸ್ಟರ್ ಬಿಡುಗಡೆಗೊಳಿಸಿ ಸಿನಿ ಪ್ರೇಮಿಗಳ ಗಮನ ಸೆಳೆದಿದ್ದ “ಎಲ್ಟು ಮುತ್ತಾ” Eltu Muttha ಸಿನಿಮಾ ತಂಡ ಇದೀಗ ಚಿತ್ರೀಕರಣ ಮುಕ್ತಾಯಗೊಳಿಸಿದೆ. 50 ದಿನಗಳ ಕಾಲ ಕೊಡಗು ಹಾಗೂ 2 ದಿನ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿದೆ ಚಿತ್ರತಂಡ. ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುತ್ತಾ ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಮಹತ್ತರ ಉದ್ದೇಶದಿಂದ ಆರಂಬವಾಗಿರುವ ಹೈ5 ಸ್ಟುಡಿಯೋಸ್ Hifi Studios ತನ್ನ ಚೊಚ್ಚಲ ಚಿತ್ರ “ಎಲ್ಟು ಮುತ್ತಾ”ವನ್ನು ತೆರೆಯ ಮೇಲೆ ತೆರೆದಿಡಲು ಸನ್ನದ್ಧವಾಗಿದೆ.

ನೈಜ ಘಟನೆ ಆಧರಿತ ಸಿನಿಮಾ

ಸತ್ಯ ಶ್ರೀನಿವಾಸನ್ Sathya Srinivasan ಚಿತ್ರ ನಿರ್ಮಾಣ ಮಾಡಿದ್ದು, ರಾ ಸೂರ್ಯ Ra Soorya ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹೊಸ ಪ್ರತಿಭೆಗಳಿಂದ ಕೂಡಿರುವ ಸಿನಿಮಾ ಇದಾಗಿದ್ದು ಶೌರ್ಯ ಪ್ರತಾಪ್ Shourya Prathap ಚಿತ್ರದ ನಾಯಕತ್ವ ವಹಿಸಿಕೊಂಡಿದ್ದಾರೆ. ನಾಯಕಿಯಾಗಿ ಕೈ ಜೋಡಿಸಿದ್ದಾರೆ ಪ್ರಿಯಾಂಕಾ ಮಾಲಲಿ Priyanka Malali. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡೀಲ್ ಮುಂತಾದವರು ತಾರಾಗಣದಲ್ಲಿದ್ದಾರೆ. ಇದೊಂದು ನೈಜ ಕಥೆ ಆಧರಿತ ಸಿನಿಮಾವಾಗಿದ್ದು, ಎಲ್ಟೂ, ಮುತ್ತಾ ಎಂಬ ಎರಡು ಪಾತ್ರಗಳ ಸುತ್ತ ಇದರ ಕಥೆ ಸುತ್ತುತ್ತದೆ. ಪ್ರಸನ್ನ ಕೇಶವ ಸಂಗೀತ, ಮೈಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ.ಯೇಸು ಸಂಕಲನ, ಜ್ಞಾತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಸೆಟ್ಟೇರಲಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ”

ಸೆಟ್ಟೇರಲಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ" ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಆರ್.ಕೆ.ಗಾಂಧಿ ನಿರ್ದೇಶಿಸಲಿರುವ ಚಿತ್ರ ಉದಯ್...

“ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ

“ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ ಕನ್ನಡದ “ಲವ್...

ಬಿಡುಗಡೆ ಆಯ್ತು ಹೊಸಪ್ರತಿಭೆಗಳ “ವಿಕ್ಕಿ” ಟ್ರೇಲರ್

ಬಿಡುಗಡೆ ಆಯ್ತು ಹೊಸಪ್ರತಿಭೆಗಳ “ವಿಕ್ಕಿ” ಟ್ರೇಲರ್ ದೀಪಕ್ ಎಸ್ ಅವಂದಕರ್ ನಿರ್ದೇಶನದಲ್ಲಿ ಮೂಡಿ...

ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ “ಯುದ್ಧಕಾಂಡ”

ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ “ಯುದ್ಧಕಾಂಡ" ಪವನ್ ಭಟ್ ಆಕ್ಷನ್ ಕಟ್ ಹೇಳಿರುವ,...