- ಮೇ 9 ರಂದು “ಸೂತ್ರಧಾರಿ” ಯಾರೆಂಬ ಕುತೂಹಲಕ್ಕೆ ತೆರೆಬೀಳಲಿದೆ
- ಚಂದನ್ ಶೆಟ್ಟಿ ಚೊಚ್ಚಲ ನಾಯಕತ್ವ, ಕಿರಣ್ ಕುಮಾರ್ ನಿರ್ದೇಶನದ ಚಿತ್ರ
- ಇತ್ತೀಚೆಗಷ್ಟೇ ಟ್ರೇಲರ್ ಹೊರಬಂದಿದ್ದು ಸೂತ್ರಧಾರಿ ಯಾರೆಂಬ ಕೌತುಕ ಮೂಡಿಸಿದೆ
ಈಗಲ್ ಮೀಡಿಯಾ ಕ್ರಿಯೇಷನ್ಸ್ Eagle Media Creations ಮೂಲಕ ನವರಸನ್ Navarasan ನಿರ್ಮಾಣ ಮಾಡಿರುವ ಚಿತ್ರ “ಸೂತ್ರಧಾರಿ” Suthradhari. ಚಿತ್ರಕ್ಕೆ ಕಿರಣ್ ಕುಮಾರ್ Kiran Kumar ಆಕ್ಷನ್ ಕಟ್ ಹೇಳಿದ್ದು, ಪ್ರಸಿದ್ಧ ರ್ಯಾಪರ್ ಚಂದನ್ ಶೆಟ್ಟಿ Chandan Shetty ಮೊದಲ ಬಾರಿಗೆ ನಾಯಕನಾಗಿ ಈ ಚಿತ್ರದಲ್ಲಿ ಮಿಂಚಿದ್ದಾರೆ. ಅಪೂರ್ವ Apoorva ನಾಯಕಿಯಾಗಿ ಕೈ ಜೋಡಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ Dhruva Sarja ಅವರಿಂದ ಬಿಡುಗಡೆಗೊಂಡಿದ್ದು ಸೂತ್ರಧಾರಿ ಯಾರೆಂಬ ಕೌತುಕವನ್ನು ಹುಟ್ಟಿಸುತ್ತಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಮೇ 9 ರವರೆಗೆ ಕಾಯಬೇಕಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ
ಟ್ರೇಲರ್ ನೋಡ್ತಿದ್ದಂತೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಎಂಬುದು ಹಮನಕ್ಕೆ ಬರುತ್ತದೆ. ಈ ಚಿತ್ರದಲ್ಲಿ ನಾಯಕ ಚಂದನ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಟ್ರೇಲರ್ ಪೂರ್ತಿ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಚಿತ್ರದಲ್ಲಿ ಸಂಜಯ್ ಗೌಡ, ನಟನ ಪ್ರಶಾಂತ್, ಲೋಹಿತ್, ರಮೇಶ್ ಮಾಸ್ಟರ್, ಗಣೇಶ್ ನಾರಾಯಣ್, ಸುಶ್ಮಿತಾ, ಮೀರಾ, ಪಲ್ಲವಿ ಮುಂತಾದವರ ನಟನೆಯಿದೆ. ಸಂಗೀತ ಸಂಯೋಜನೆ ಸ್ವತಃ ಚಂದನ್ ಶೆಟ್ಟಿ ಮಾಡಿದ್ದು, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ.