- ಪ್ರಶಸ್ತಿ ಪಡೆದು ಸದ್ದು ಮಾಡಿದ ತುಳು ಚಿತ್ರ “ಪಿದಾಯಿ” ಮೇ 9 ರಂದು ತೆರೆಗೆ
- ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿಬಂದಿದೆ “ಪಿದಾಯಿ”
- ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಬಾಚಿಕೊಂಡ ಚೊಚ್ಚಲ ತುಳು ಚಿತ್ರ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಸಂತೋಷ್ ಮಾಡ Santhosh Mada ನಿರ್ದೇಶನದ, ನಮ್ಮ ಕನಸು Namma Kanasu ಬ್ಯಾನರ್ ನಲ್ಲಿ ಕೆ.ಸುರೇಶ್ K. Suresh ಅವರು ನಿರ್ಮಾಣ ಮಾಡಿದ ತುಳು ಸಿನಿಮಾ “ಪಿದಾಯಿ” Pidayi ಇದೇ ಮೇ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಹಲವಾರು ಕಾರಣಗಳಿಂದ ಕುತೂಹಲ ಮೂಡಿಸಿದೆ. ಮುಖ್ಯವಾಗಿ ಈ ತುಳು ಸಿನಿಮಾ ಈಗಾಗಲೇ ಕೊಲ್ಕತ್ತ, ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗಿರುವುದು ಮಾತ್ರವಲ್ಲ, 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚೊಚ್ಚಲ ಬಾರಿಗೆ ತುಳು ಚಿತ್ರವೊಂದು ಭಾರತೀಯ ಹಾಗೂ ಕನ್ನಡ ಚಲನಚಿತ್ರದ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವುದು ವಿಶೇಷ.
ಚಿತ್ರ ತಂಡದಲ್ಲಿ ಶ್ರಮಿಸಿದ್ದಾರೆ ಪ್ರತಿಭಾವಂತರು
ಈ ಚಿತ್ರದಲ್ಲಿ ಮಹಾಮಾಯಿ ಪಾತ್ರಿಯಾಗಿ ಖ್ಯಾತ ನಟ ಶರತ್ ಲೋಹಿತಾಶ್ವ ನಟಿಸಿದ್ದು, ಉಳಿದಂತೆ ದೀಫರ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ ಮಿಂಚಿದ್ದಾರೆ. ಇನ್ನು ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ಧ್ರುವ, ನಿಹಾ, ಖುಷಿ, ಅನಿತಾ ಚಂದ್ರಶೇಖರ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಉಣ್ಣೆ ಮಾಡವೂರ್ ಅವರ ಕ್ಯಾಮರಾ ಕೈಚಳಕವಿದೆ, ಸುರೇಶ್ ಅರಸ್ ಸಂಕಲನ, ರಮೇಶ್ ಶೆಟ್ಟಿಗಾರ್, ಡಿಬಿಸಿ ಶೇಖರ್ ಸಂಭಾಷಣೆ ಇದೆ. ಅಜಯ್ ನಂಬೂದಿರಿ ಸಂಗೀತವಿದ್ದು, ಡಾ. ವಿದ್ಯಾಭೂಷಣ್ ಚೊಚ್ಚಲ ಬಾರಿಗೆ ಸಿನಿಮಾಗಾಗಿ ಹಾಡಿದ್ದಾರೆ. ದೀಪಾಂಕುರನ್ ಹಿನ್ನೆಲೆ ಸಂಗೀತವಿದ್ದು ಹಿನ್ನೆಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮೊದಲಾದವರು ಕಂಠದಾನ ಮಾಡಿದ್ದಾರೆ.
ಸಿನಿಮಾದಲ್ಲಿ ತುಳುನಾಡಿನ ಸಾಂಪ್ರದಾಯಿಕ ಸ್ವಾದವಿದ್ದು ಮೇ. 9 ರಂದು ಆ ಸ್ವಾದ ಸಿನಿಪ್ರಿಯರಿಗೆ ಸಿಗಲಿದೆ.