- ಮೇ 15 ಕ್ಕೆ ರಿಲೀಸ್ ಆಗ್ತಿದೆ ಮ್ಯೂಸಿಕಲ್ ಲವ್ ಸ್ಟೋರಿ “ರಿದಂ”
- ಈಗಾಗಲೇ ಬಿಡುಗಡೆ ಆಗಿದೆ ಸಂಗೀತ ಪ್ರಧಾನ ಚಿತ್ರ “ರಿದಂ” ಟ್ರೇಲರ್
- ಮಂಜು ಮಿಲನ್ ನಾಯಕತ್ವದಲ್ಲಿ ಮೂಡಿಬರ್ತಿದೆ ವಿಭಿನ್ನ ಲವ್ ಸ್ಟೋರಿ
ಮಂಜು ಮೂವೀಸ್ Manju Movies ಬ್ಯಾನರ್ ಅಡಿಯಲ್ಲಿ ಎನ್. ಆರ್. ಮಂಜುನಾಥ್ N.R.Manjunath ನಿರ್ಮಾಣ ಮಾಡ್ತಿರೋ, ಮಂಜು ಮಿಲನ್ Manju Milan ಸ್ವತಃ ನಿರ್ದೇಶಕ ಹಾಗೂ ನಾಯಕನಾಗಿ ಮಿಂಚಿರುವ ಚಿತ್ರ “ರಿದಂ” Rhythm ಮೇ 15 ಕ್ಕೆ ತೆರೆ ಮೇಲೆ ಬರಲಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಆನಂದ್ ಆಡಿಯೋ Anand Audio ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಹೆಸರೇ ಹೇಳುವಂತೆ ಇದೊಂದು ಸಂಗೀತಕ್ಕೆ ಪ್ರಾಶಸ್ತ್ಯ ನೀಡಿರುವ ಸಿನಿಮಾವಾಗಿದ್ದು, ಮ್ಯೂಸಿಕಲ್ ಲವ್ ಸ್ಟೋರಿ ಜಾನರ್ ಗೆ ಸೇರುತ್ತದೆ ಈ ಚಿತ್ರ.
ಚಿತ್ರಕ್ಕೆ ಶ್ರಮಿಸಿದ್ದಾರೆ ಇವರೆಲ್ಲಾ
ಮಂಜು ಮಿಲನ್ ಗೆ ಜೋಡಿಯಾಗಿ ಮೇಘಶ್ರೀ Meghashree ಕಾಣಿಸಿಕೊಂಡಿದ್ದು, ಉಳಿದಂತೆ ಸುಮನ್, ವಿನಯಾ ಪ್ರಸಾದ್ Vinaya Prasad, ಭವ್ಯ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಎ.ಟಿ.ರವೀಶ್ A.T. Raveesh ಸಂಗೀತ ಸಂಯೋಜನೆಯಿದ್ದು, ವಿಭಿನ್ನವಾಗಿ ಮೂಡಿಬಂದಿದೆ ಚಿತ್ರ.