- ಮಕ್ಕಳ ಬಾಳಿಗೆ ಬೆಳಕನು ನೀಡುವ “ಲೈಟ್ ಹೌಸ್” ಮೇ 16ರಂದು ತೆರೆಗೆ
- ಇತ್ತೀಚೆಗಷ್ಟೇ ರಿಲೀಸ್ ಆಗಿದೆ ಸಂದೀಪ್ ಕಾಮತ್ ಅಜೆಕಾರ್ ನಿರ್ದೇಶನದ ಈ ಚಿತ್ರದ ಟ್ರೇಲರ್
- ನಟ ಶೋಭರಾಜ್ ಪಾವೂರ್ ಮತ್ತು ಮಾನಸಿ ಸುಧೀರ್ ಮುಖ್ಯಪಾತ್ರದಲ್ಲಿ ನಟಿಸಿರುತ್ತಾರೆ.
ಅಮ್ಚೆ ಕ್ರಿಯೇಷನ್ಸ್ ಹಾಗೂ ಅಸ್ತ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ದತ್ತಾತ್ರೇಯ ಪಾಟ್ಕರ್ ಬಂಟಕಲ್ಲು ನಿರ್ದೇಶನ ಇರುವ “ಲೈಟ್ ಹೌಸ್” ಕನ್ನಡ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು, ಮೇ 16 ರಂದು ಚಿತ್ರ ಬಿಡುಗಡೆಯಾಗಲಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಸಂದೀಪ್ ಕಾಮತ್ ಅಜೆಕಾರು. ಈ ಚಿತ್ರದ ಒಂದೆರಡು ಹಾಡುಗಳು ಕೂಡಾ ಈಗಾಗಲೇ ರಿಲೀಸ್ ಆಗಿದ್ದು ಫುಲ್ ಫೇಮಸ್ ಆಗ್ತಿದೆ. ವಾಸುಕಿ ವೈಭವ್, ಪೃಥ್ವಿ ಭಟ್ ಮುಂತಾದವರ ಸ್ವರಗಳಲ್ಲಿ ಹಾಡು ಮೂಡಿಬಂದಿವೆ.
ಚಿತ್ರದ ಯಶಸ್ಸಿಗೆ ಶ್ರಮಿಸಿದ್ದಾರೆ ಇವರೆಲ್ಲಾ
ಶೋಭರಾಜ್ ಪಾವೂರ್, ಮಾನಸಿ ಸುಧೀರ್, ಪ್ರಕಾಶ್ ತುಮಿನಾಡು, ಪೃಥ್ವಿ ಅಂಬರ್, ದೀಪಕ್ ರೈ ಪಾಣಾಜೆ, ರಾಹುಲ್ ಅಮಿನ್, ಶೀತಲ್ ನಾಯಕ್, ಚಂದ್ರಕಲಾ ರಾವ್, ಶೈಲಶ್ರೀ ಮುಲ್ಕಿ, ಅಚಲ್ ಜಿ ಬಂಗೇರ, ಅಪೂರ್ವ ಮಾಳ, ತಿಮ್ಮಪ್ಪ ಕುಲಾಲ್, ನಮಿತಾ ಕಿರಣ್ ಮುಂತಾದವರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಜ್ವಲ್ ಸುವರ್ಣ ಛಾಯಾಗ್ರಹಣ ಹಾಗೂ ಸಂಕಲನವಿದೆ. ಕ್ಲಿಂಗ್ ಜಾನ್ಸನ್, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಗಿರಿಧರ ದಿವಾನ್ ಹಾಗೂ ಕಾರ್ತಿಕ್ ಮುಲ್ಕಿ ಸಂಗೀತ ಸಂಯೋಜನೆಯಿದೆ.