- ಜೂನ್ 13 ರಂದು ರಾಜ್ಯಾದ್ಯಂತ “ಎಡಗೈಯೇ ಅಪಘಾತಕ್ಕೆ ಕಾರಣ”
- ದಿಗಂತ್ ನಟನೆಯ, ನಿರ್ದೇಶಕ ಸಮರ್ಥ್ ಕಡ್ಕೋಲ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ
- ವಿಶಿಷ್ಟ ಪರಿಕಲ್ಪನೆಯೊಂದಿಗೆ ಕ್ರೈಮ್ ಥ್ರಿಲ್ಲರ್ ಮೂವೀ “ಎಡಗೈಯೇ ಅಪಘಾತಕ್ಕೆ ಕಾರಣ”
ಬ್ಲಿಂಕ್ ಚಿತ್ರದ ನಿರ್ಮಾಪಕ ರವಿಚಂದ್ರನ್ ಎ. ಜೆ. ಮತ್ತು ಶಾಖಾಹಾರಿ ಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ ಬೆಂಬಲದಲ್ಲಿ, ಸಮರ್ಥ್ ಕಡ್ಕೋಲ್ Samarth Kadkol ಚೊಚ್ಚಲ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರ “ಎಡಗೈಯೇ ಅಪಘಾತಕ್ಕೆ ಕಾರಣ” Edagaiye Apaghathakke Karana ಚಿತ್ರ ರಾಜ್ಯಾದ್ಯಂತ ಜೂನ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದಿಗಂತ್ Diganth ಮುಖ್ಯ ಪಾತ್ರದಲ್ಲಿ ನಟಿಸಿದ್ದು ಅವರೊಂದಿಗೆ ನಿಧಿ ಸುಬ್ಬಯ್ಯ Nidhi Subbayya ಮತ್ತು ಧನು ಹರ್ಷ Dhanu Harsha ಮಿಂಚಿದ್ದಾರೆ. ನಟ ನಿರೂಪ್ ಭಂಡಾರಿ Niroop Bhandary ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಲವು ಸವಾಲುಗಳ ಮಧ್ಯೆ ಚಿತ್ರ ನಿರ್ದೇಶನ
ವಿಶಿಷ್ಟ ಪರಿಕಲ್ಪನೆಯೊಂದಿಗೆ ಮೂಡಿಬಂದಿರು ಈ ಚಿತ್ರ ಕ್ರೈಮ್ ಥ್ರಿಲ್ಲರ್ ಆಗಿದ್ದು, ಬಲಗೈ ಜಗತ್ತಿನಲ್ಲಿ ಎಡಗೈ ವ್ಯಕ್ತಿಗಳ ಜೀವನ ಮತ್ತು ಹೋರಾಟಗಳ ಕುರಿತು ಹೇಳುತ್ತದೆ. ಹಲವು ಸವಾಲುಗಳನ್ನು ಮೆಟ್ಟಿ ನಿಂತು ಈ ಚಿತ್ರವನ್ನು ನಿರ್ದೇಶಿಸಿರುವ ನಿರ್ದೇಶಕರು ಹೀಗೆನ್ನುತ್ತಾರೆ. “ಸ್ವತಂತ್ರ ಚಲನಚಿತ್ರ ನಿರ್ಮಾಣದ ಹೋರಾಟಗಳು ಮತ್ತು ಅನಿಶ್ಚಿತತೆಗಳು ವಿಶೇಷವಾಗಿ ನಮ್ಮಂತಹ ಹೊಸಬರಿಗೆ ತುಂಬಾ ಕಷ್ಟ. ಕೋವಿಡ್ ನಂತರ ಸವಾಲುಗಳು ಮತ್ತಷ್ಟು ಹೆಚ್ಚಿದವು. ಆದರೆ, ನನ್ನ ಪ್ಯಾಶನ್ ಚಿತ್ರದ ಮೇಲಿನ ಉತ್ಸಾಹವನ್ನು ಜೀವಂತವಾಗಿರಿಸಿತು. ನಿರ್ಮಾಪಕರು ಬದಲಾದರು, ಚಿತ್ರವನ್ನು ನೋಡಿದ ನಂತರ ಈಗಿನ ಚಿತ್ರ ನಿರ್ಮಾಪಕರು ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟರು ಮತ್ತು ಅದಕ್ಕೆ ಅಗತ್ಯವಾದ ಪ್ರೋತ್ಸಾಹವನ್ನು ನೀಡಿದರು. ಅವರ ಬೆಂಬಲವು ಯೋಜನೆಗೆ ಹೊಸ ಜೀವ ತುಂಬಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಚಿತ್ರಕ್ಕೆ ಪ್ರದ್ಯೋತ್ತನ್ ಸಂಗೀತ ಸಂಯೋಜಿಸಿದ್ದಾರೆ, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣವಿದೆ.