ಹಿಟ್ ಆಗ್ತಿದೆ “ಕಾಲೇಜ್ ಕಲಾವಿದ” ಹಾಡುಗಳು

Date:

  • ಹಿಟ್ ಆಗ್ತಿದೆ “ಕಾಲೇಜ್ ಕಲಾವಿದ” ಹಾಡುಗಳು
  • ಟೈಟಲ್ ನಿಂದಲೇ ಸಿನಿ ಪ್ರೇಮಿಗಳ ಸೆಳೆಯುತ್ತಿದೆ “ಕಾಲೇಜ್ ಕಲಾವಿದ” ಸಿನಿಮಾ
  • ಸದ್ಯದಲ್ಲೇ ರಿಲೀಸ್ ಆಗಲಿದೆ ಸಂಜಯ್ ಮಳವಳ್ಳಿ ನಿರ್ದೇಶನದ ಈ ಚಿತ್ರ

ಗಜಾನನ ಫಿಲ್ಮ್ಸ್ Gajanana Films ಬ್ಯಾನರ್ ನಲ್ಲಿ ತರುಣ್ ಶರ್ಮಾ Tharun Sharma ನಿರ್ಮಾಣ ಮಾಡಿರುವ ಕಾಲೇಜು ಲವ್ ಸ್ಟೋರಿಗೆ ಸಂಬಂಧಿಸಿದ ಸಿನಿಮಾ “ಕಾಲೇಜ್ ಕಲಾವಿದ” College Kalavida ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದ “ಸಿಂಗಾರ ನೀನೆ” Singaara Neene ಹಾಗೂ “ಹೊಂಟಾಯ್ತು ಹಮ್ಮೀರ” Hontaithu Hammeera ಎಂಬ ಎರಡು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್ ಆಗ್ತಿದೆ. ಸಂಜಯ್ ಮಳವಳ್ಳಿ Sanjay Malavalli ಕಥೆ ಹಾಗೂ ನಿರ್ದೇಶನ ಇರೋ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ ಆರವ್ ಸೂರ್ಯ Arav Surya. ಇವರಿಗೆ ಜೋಡಿಯಾಗಿ ಚೈತ್ರ ಲೋಕನಾಥ್ Chaithra Lokanath ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಉತ್ತಮ ರೆಸ್ಪಾನ್ಸ್ ಪಡೀತಿದೆ ಹಾಡುಗಳು

ನಟ ರಮೇಶ್ ಅರವಿಂದ್ ಅವರು ಈ ಚಿತ್ರದ “ಸಿಂಗಾರ ನೀನೆ” ಹಾಡನ್ನ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಾಗೇ ಇನ್ನೊಂದು ಹಾಡು “ಹೊಂಟಾಯ್ತು ಹಮ್ಮೀರಾ” ಇದನ್ನು ವಿಭಿನ್ನವಾಗಿ, ಬೈಕ್ ವ್ಲಾಗರ್ಸ್ ರವರಿಂದ ಬಿಡುಗಡೆ ಮಾಡಿಸಿದ್ದು, ಮಾನ್ಸೂನ್ ಸೀಸನ್ ಗೆ ಈ ಹಾಡು ಹೇಳಿ ಮಾಡಿಸಿದ ಹಾಗಿದೆ. ಎರಡೂ ಹಾಡುಗಳೂ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಲಭ್ಯವಿದೆ.

ಪ್ರಯೋಗಾತ್ಮಕ ಪ್ರೀತಿಯ ಪಯಣದ ಕಥೆ

ಪ್ರತಿ ಕಾಲೇಜಿನಲ್ಲೂ ಪ್ರೀತಿಯ ಕಲಾವಿದರು ಇದ್ದೆ ಇರುತ್ತಾರೆ. ಇದೂ ಕೂಡಾ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯುವ ಪ್ರೇಮಕಥೆಯನ್ನು ಒಳಗೊಂಡ ಚಿತ್ರವಾಗಿದೆ. ಪ್ರೇಮಕಥೆಯೊಂದಿಗೆ ಕಾಲೇಜು ದಿನಗಳ ಸುಂದರ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡಿದೆಯಂತೆ ಚಿತ್ರತಂಡ. ಚಿತ್ರತಂಡದಲ್ಲಿ ಹುಲಿ ಕಾರ್ತಿಕ್, ಹರಿಣಿ ಶ್ರೀಕಾಂತ್,ರಮೇಶ್ ಭಟ್, ಶೈಲಪುತ್ರಿ, ನಿಖೀಲ್, ನಂದಿನಿ, ದಿನೇಶ್ ಕುಲಕರ್ಣಿ, ನವೀನ್, ನಿರಂತ್ ಸೂರ್ಯ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸೂರಜ್ ಜೋಯ್ಸ್ ಸಂಗೀತ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ಗಂಗಾವತಿ ಸಂಕಲನ ಚಿತ್ರಕ್ಕಿದೆ. “ಕಾಲೇಜ್ ಕಲಾವಿದ”ನ ಕಲಾ ಚತುರತೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ ಸಿನಿಪ್ರೇಮಿಗಳು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...