“Roxy” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಟ “ವೇದಿಕ್” ಭರವಸೆಯ ಎಂಟ್ರಿ

Date:

  • “Roxy” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಟ “ವೇದಿಕ್” ಭರವಸೆಯ ಎಂಟ್ರಿ
  • ಯು.ವಿ. ಪಿಕ್ಚರ್ಸ್ ಮೂಲಕ ಚಿತ್ರ ನಿರ್ಮಾಣ ಮಾಡ್ತಿದ್ದಾರೆ ಉಮೇಶ್ ಕೆ.ಎನ್.
  • ಭರದಿಂದ ಸಾಗ್ತಿದೆ ಚಿತ್ರೀಕರಣ

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಫೇಮಸ್ ಆಗೋ ನಟ, ನಿರ್ದೇಶಕ, ನಿರ್ಮಾಪಕರುಗಳು ಹಲವರು. ಸದಾ ಹೊಸ ಹೊಸ ಕಾನ್ಸೆಪ್ಟ್ ಗಳೊಂದಿಗೆ ಚಿತ್ರರಂಗಕ್ಕೆ ಕೊಡುಗೆ ಕೊಡಲು ದುಡಿಯುವವರು ಸಾಕಷ್ಟು ಪ್ರತಿಭೆಗಳಿದ್ದಾರೆ. ಆ ಸಾಲಿನಲ್ಲೇ ಇರುವವರು ಬಹುಮುಖ ಪ್ರತಿಭೆ, ನಟ, ಸಿನಿಮಾ ಡಿಜಿಟಲ್ ಪ್ರಚಾರಕ, ನಿರ್ಮಾಪಕರಾದ ಉಮೇಶ್ ಕೆ.ಎನ್. Umesh K N ಈಗಾಗಲೇ ವಿಕ್ಟೋರಿಯಾ ಮಾನ್ಷನ್, ಪ್ರೊಡಕ್ಷನ್ ನಂ.1 ಮುಂತಾದ ಸಿನಿಮಾ ನಿರ್ಮಾಣ ಮಾಡಿರೋ ಇವರು ತಮ್ಮ ಯು.ವಿ.ಪಿಕ್ಚರ್ಸ್ UV Pictures ಬ್ಯಾನರ್ ಅಡಿಯಲ್ಲಿ ತ್ರಿಭುವನ್ Thribhuvan ಅವರೊಂದಿಗೆ ನಿರ್ಮಾಣ ಮಾಡ್ತಿರೋ ಇನ್ನೊಂದು ಸಿನಿಮಾ “ರಾಕ್ಸಿ” Roxy.

ಚಿತ್ರದ ನಾಯಕನಾಗಿ ಮಿಂಚ್ತಿದ್ದಾರೆ ವೇದಿಕ್

ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ಭರದಿಂದ ಸಾಗ್ತಿದೆ. ವಿ.ಜೆ. VJ ಆಕ್ಷನ್ ಕಟ್ ಹೇಳ್ತಿರೋ ಚಿತ್ರಕ್ಕೆ ಭರವಸೆಯ ನಾಯನಾಗಿ ಎಂಟ್ರಿ ಕೊಟ್ಟಿದ್ದಾರೆ ನಟ ವೇದಿಕ್ Vedic. ಹಾಗೇ ನಾಯಕಿಯಾಗಿ ಇವರಿಗೆ ಸಾಥ್ ನೀಡ್ತಿದ್ದಾರೆ ಶೋಭಿತಾ Shobhitha. ಇತ್ತೀಚೆಗಷ್ಟೇ ನಾಯಕ ನಟ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಪೋಸ್ಟರ್ ಮೂಲಕ ವಿಷ್ ಮಾಡಿದೆ ಚಿತ್ರತಂಡ. ಚಿತ್ರಕ್ಕೆ ತ್ಯಾಗರಾಜ್ ಸಂಗೀತ ನಿರ್ದೇಶನ, ನಾನಿ ಕೃಷ್ಣ ಸಂಕಲನ, ದತ್ತಾತ್ರೇಯ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯನಿರ್ಹಿಸುತ್ತಿದ್ದಾರೆ. ಮಂಜು, ಮಧು, ಸಂತೋಷ್ ಮುಂತಾದವರು ಡೈರೆಕ್ಷನ್ ಟೀಮ್ ನಲ್ಲಿದ್ದಾರೆ. ಚಿತ್ರದ ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...