- ತೆರೆಗೆ ಬರಲಿದೆ “ಅಮೇರಿಕಾ ಅಮೇರಿಕಾ 2”
- ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬರ್ತಿದೆ ಸಿನಿಮಾ
- 1997 ರಲ್ಲಿ ಬಿಡುಗಡೆ ಆಗಿದ್ದ “ಅಮೇರಿಕಾ ಅಮೇರಿಕಾ” ಮೂಲ ಚಿತ್ರಕ್ಕೆ ನೇರ ಸಂಬಂಧ ಇಲ್ಲ
1997ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ Nagathihalli Chandrashekhar ನಿರ್ದೇಶನದಲ್ಲಿ ತೆರೆಕಂಡು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದ್ದ, “ಅಮೆರಿಕಾ ಅಮೆರಿಕಾ” ಚಿತ್ರದಲ್ಲಿ ರಮೇಶ್ ಅರವಿಂದ್ Ramesh Aravind, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈಗ ಮತ್ತೆ ನಾಗತಿಹಳ್ಳಿ ಚಂದ್ರಶೇಖರ್ ಅವರೇ ಆಕ್ಷನ್ ಕಟ್ ಹೇಳ್ತಿರೋ “ಅಮೇರಿಕಾ ಅಮೇರಿಕಾ 2” America America 2 ಚಿತ್ರ ತೆರೆಗೆ ಬರಲು ಸಿದ್ಧಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗ್ತಿದೆ. ಈ ಚಿತ್ರವು ಹಳೆಯ ಚಿತ್ರಕ್ಕೆ ನೇರ ಸಂಬಂಧ ಹೊಂದಿಲ್ಲದಿದ್ದರೂ, ಮೂಲ ಚಿತ್ರದ ಉತ್ಸಾಹ ಮತ್ತು ವಿಷಯವನ್ನು ಆಧರಿಸಿದೆ. ಖ್ಯಾತ ಬರಹಗಾರ್ತಿ ಸಹನಾ ವಿಜಯಕುಮಾರ್ Sahana Vijayakumar ಅವರ “ಕ್ಷಮೆ” Kshame ಕಾದಂಬರಿಯಿಂದ ಸ್ಫೂರ್ತಿ ಪಡೆದ ಈ ಚಿತ್ರವು ಬೆಂಗಳೂರು ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರೀತಿ, ಹಂಬಲ ಮತ್ತು ಸ್ಥಳಾಂತರದ ಭಾವನಾತ್ಮಕ ವಿಚಾರಗಳನ್ನು ತೆರೆಮೇಲೆ ತರಲಿದೆ.
ತಾರಾಗಣದಲ್ಲಿ ಮಿಂಚಲಿದ್ದಾರೆ ಪ್ರಮುಖರು
ಮಾಧ್ಯಮ ಮೂಲದ ಪ್ರಕಾರ, “ಅಮೆರಿಕಾ ಅಮೆರಿಕಾ” ಚಿತ್ರದಲ್ಲಿ ನಟಿಸಿದ್ದ ರಮೇಶ್ ಅರವಿಂದ್ ಅವರು ಈ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಹಿಂದಿನ ಮತ್ತು ಈಗಿನ ಚಿತ್ರದ ನಡುವೆ ನಿರೂಪಣಾ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ. ನಟಿ ಶಾನ್ವಿ ಶ್ರೀವಾಸ್ತವ Shanvi Shrivastava, ನಿರೂಪ್ ಭಂಡಾರಿ Niroop Bhandari, ಪೃಥ್ವಿ ಅಂಬಾರ್ Prithvi Ambaar, ಮಂಡ್ಯ ರಮೇಶ್ Mandya Ramesh, ಮಾನಸಿ ಸುಧೀರ್ Manasi Sudheer ಮತ್ತು ಟೆಂಟ್ ಸಿನಿಮಾ ಪೋಷಿಸಿದ ಉದಯೋನ್ಮುಖ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ. ಕೆ ರವೀಂದ್ರ K Raveendra ನಿರ್ಮಿಸಿರುವ ಈ ಚಿತ್ರಕ್ಕೆ ಮನೋಮೂರ್ತಿ Manomurthi ಸಂಗೀತ ಸಂಯೋಜಿಸಿದ್ದಾರೆ.