- ಪ್ರೇಕ್ಷಕನಿಗೆ ಥಿಲ್ಲರ್ ಕತೆ ಹೇಳಲು ರೆಡಿಯಾಗಿದೆ “ಬುಲೆಟ್”
- ಸತ್ಯಜಿತ್ ಶಬ್ಬೀರ್ ನಿರ್ದೇಶನ, ನಿರ್ಮಾಣದ ಮೊದಲ ಕನ್ನಡ ಚಿತ್ರ
- ಬಿಗ್ ಬಾಸ್ ಖ್ಯಾತಿಯ ಧರ್ಮ ಕೀರ್ತಿರಾಜ್ ನಟನೆಯ ಹೊಸ ಚಿತ್ರ “ಬುಲೆಟ್”
ಬಿಗ್ ಬಾಸ್ ನಲ್ಲಿ ಖ್ಯಾತಿ ಪಡೆದ ಧರ್ಮ ಕೀರ್ತಿರಾಜ್ Dharma Keerthiraj ನಟನೆಯ ಹೊಸತೊಂದು ಚಿತ್ರ ಬಿಡುಗಡೆಗೆ ಸಿದ್ದಗೊಂಡಿದೆ. ವಿವಿಧ ಭಾಷೆಯ ಸಿನಿಮಾಗಳಲ್ಲಿ ನಟಿಸಿ ನಟನೆಯಲ್ಲಿ ತನ್ನದೇ ಆದ ಲಯವನ್ನು ಕಾಯ್ದುಕೊಂಡಿರುವ ನಟ ಸತ್ಯಜಿತ್ ಶಬ್ಬೀರ್ Sathyajith Shabbeer, ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಆದ್ರೆ ಕನ್ನಡದಲ್ಲಿ ಶಬ್ಬೀರ್ ನಟನೆ ಮಾಡುತ್ತಿಲ್ಲ ಬದಲಾಗಿ ನಿರ್ಮಾಪಕರಾಗಿ ಮತ್ತು ಚೊಚ್ಚಲ ಬಾರಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ ಎನ್ನುವುದೇ ವಿಶೇಷ.
ಜೂನ್ 20ರಂದು ರಾಜ್ಯಾದ್ಯಂತ “ಬುಲೆಟ್”
ಅವರ ನಿರ್ಮಾಣದ ಚಿತ್ರದ ಟೈಟಲ್ “ಬುಲೆಟ್” Bullet. ಈ ಚಿತ್ರ ಜೂನ್ 20ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಗೆ ಶ್ರೇಯಾ ಶುಕ್ಲಾ Shreya Shukla ನಾಯಕಿಯಾಗಿ ಸಾಥ್ ನೀಡಿದ್ದಾರೆ. ಇಡೀ ಚಿತ್ರದಲ್ಲಿ ಸಸ್ಪೆನ್ಸ್ ಮತ್ತು ಥಿಲ್ಲರ್ ಕಥಾಹಂದರವಿದೆಯಂತೆ. ಕುತೂಹಲ ಹುಟ್ಟಿಸುವ ದೃಶ್ಯಗಳಿವೆ ಎನ್ನುತ್ತಿದೆ ಚಿತ್ರತಂಡ. ಉಳಿದಂತೆ ಹಿರಿಯ ನಟಿ ಭವ್ಯಾ, ಶೋಭರಾಜ್ ಮತ್ತು ಶಿವ್ ತಾರಾಗಣದಲ್ಲಿದ್ದಾರೆ.
“ಬುಲೆಟ್” ಸಿನಿಮಾಗೆ ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣವಿದ್ದರೆ. ರಾಜ್ ಭಾಸ್ಕರ್ ಸಂಗೀತ ಮತ್ತು ಗುರುಪ್ರಸಾದ್ ಅವರ ಸಂಕಲನವಿದೆ. ಅಂದ ಹಾಗೆ “ಬುಲೆಟ್”ಸಿನಿಮಾವನ್ನು, ಜಯದೇವ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮರಿಸ್ವಾಮಿ ವಿತರಿಸಲಿದ್ದಾರೆ. ಚಿತ್ರ ಹೇಗಿದೆ? ಎನ್ನುವ ಕಾತರಕ್ಕೆ ಜೂ.20 ರವರೆಗೂ ಕಾಯಬೇಕಿದೆ.