ರಿಲ್ಯಾಕ್ಸ್ ಮೂಡ್ ನಲ್ಲಿ ಎನರ್ಜಿಟಿಕ್ ಸ್ಟಾರ್ ಶಿವಣ್ಣ- ಗೀತಾ ದಂಪತಿ

Date:

  • ರಿಲ್ಯಾಕ್ಸ್ ಮೂಡ್ ನಲ್ಲಿ ಎನರ್ಜಿಟಿಕ್ ಸ್ಟಾರ್ ಶಿವಣ್ಣ- ಗೀತಾ ದಂಪತಿ
  • ಕಬಿನಿ ಪ್ರದೇಶದಲ್ಲಿ ವಿಹರಿಸಿ, ಪುಟಾಣಿಗಳೊಂದಿಗೆ ಬೆರೆತು ಮಗುವಾದ ಶಿವರಾಜ್ ಕುಮಾರ್
  • ಸಫಾರಿ, ಕಬಿನಿ ಜಲಾಶಯ, ಸುತ್ತಮುತ್ತಲ ಪ್ರವಾಸಿ ತಾಣಗಳ ಸೌಂದರ್ಯ ಆಸ್ವಾದಿಸಿದ ಜೋಡಿ

ಸೆಂಚುರಿ ಸ್ಟಾರ್ Century Star, ಎನರ್ಜಿಟಿಕ್ ಸ್ಟಾರ್ Energitic Star ಎಂದೆಲ್ಲಾ ಬಿರುದುಗಳನ್ನು ಪಡೆದುಕೊಂಡಿರುವ ಶಿವರಾಜ್ ಕುಮಾರ್ Shivaraj Kumar ಅವರದು ಎಂದಿಗೂ ಬತ್ತದ ಉತ್ಸಾಹ. ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ, ಆರೋಗ್ಯ ಕಾಳಜಿಯೊಂದಿಗೆ ಸದಾ ಕಾಲ ಸರಣಿ ಸಿನಿಮಾಗಳು, ಟಿವಿ ಷೋಗಳು ಹಾಗೂ ಸಿನಿಮಾ ಇವೆಂಟ್ ಗಳಲ್ಲಿ ಬ್ಯುಸಿಯಾಗಿದ್ರೂ ಇದೀಗ ಸಮಯ ಮಾಡ್ಕೊಂಡು ತಮ್ಮ ಮನದೊಡತಿ ಗೀತಕ್ಕನ ಜೊತೆ ಕಬಿನಿ ಪ್ರದೇಶದಲ್ಲಿ ಕೆಲವು ಸಮಯಗಳನ್ನು ಖುಷಿಯಿಂದ ಕಳೆದಿದ್ದಾರೆ. ಮೈಸೂರಿಗೆ ಆಗಾಗ್ಗೆ ಭೇಟಿ ಕೊಡುವ ದಂಪತಿ ಇದೀಗ ಕಬಿನಿ ಪ್ರದೇಶದಲ್ಲಿ ಗುಣಮಟ್ಟದ ಸಮಯ ಕಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ವಿಡಿಯೋಗಳು ವೈರಲ್ ಆಗ್ತಿದೆ.

ಪುಟಾಣಿಗಳೊಂದಿಗೆ ಬೆರೆತು ಸೆಲ್ಫಿ ಕ್ಲಿಕ್ಕಿಸಿಕೊಂಡರು ಶಿವಣ್ಣ

ಯಾವುದೇ ಜಂಜಡಗಳಿಲ್ಲದೇ ಮೂರ್ನಾಲ್ಕು ದಿನ ಜಾಲಿ ಮೂಡ್ ನಲ್ಲಿರುವ ದಂಪತಿಗಳು ಸಫಾರಿ, ಕಬಿನಿ ಜಲಾಶಯ, ಸುತ್ತಮುತ್ತಲ ಪ್ರವಾಸಿ ತಾಣಗಳ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ. ಮಳೆಯಿಂದ ಹಚ್ಚ ಹಸಿರಾದ ವಾತಾವರಣ ಶಿವಣ್ಣನಿಗೆ ಮುದ ನೀಡಿತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ, ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ಹೋಗುವ ಮುನ್ನ, ನಟ ಶಿವರಾಜ್ಕುಮಾರ್ ಅರೊಂದಿಗೆ ಪುಟಾಣಿಗಳು ಶೇಕ್ ಹ್ಯಾಂಡ್ ಮಾಡಿ ಖುಷಿಪಟ್ಟರು. ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ನಲಿದಾಡಿದರು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಹಾರಲು ಸಿದ್ದವಾದ “ಬಿಳಿಚುಕ್ಕಿ ಹಳ್ಳಿಹಕ್ಕಿ”, ಅಕ್ಟೋಬರ್ 24ರಂದು ತೆರೆಗೆ

ಹಾರಲು ಸಿದ್ದವಾದ “ಬಿಳಿಚುಕ್ಕಿ ಹಳ್ಳಿಹಕ್ಕಿ”, ಅಕ್ಟೋಬರ್ 24ರಂದು ತೆರೆಗೆ ಮಹಿರಾ ಖ್ಯಾತಿಯ ಮಹೇಶ್...

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್ ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ...