- ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನ; ಅಭಿಮಾನಿಗಳಿಗೆ ಹೀಗೆ ಹೇಳಿದ್ದಾರೆ ಗಣಿ
- ಎರಡು ದಿನ ಮುನ್ನವೇ ಗಣೇಶ್ ಇನ್ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬದ ಕುರಿತಾಗಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ
- ಯಾರೂ ಮನೆ ಹತ್ತಿರ ಬರಬೇಡಿ ಎಂದಿದ್ದಾರೆ ಗೋಲ್ಡನ್ ಸ್ಟಾರ್
ಜುಲೈ 2ರಂದು ಸ್ಯಾಂಡಲ್ ವುಡ್ Sandalwood ನ ಗೋಲ್ಡನ್ ಸ್ಟಾರ್ ಗಣೇಶ್ Golden Star Ganesh ತಮ್ಮ 47ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಿನಿಮಾ ತಾರೆಯರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮನೆ ಹತ್ತಿರ ಬಂದು ತಮ್ಮ ನೆಚ್ಚಿನ ನಟರಿಗೆ ಶುಭಾಶಯ ಕೋರುವುದು, ಕೇಕ್ ತಂದು ಕಟ್ ಮಾಡಿಸುವುದು ಸಾಮಾನ್ಯ. ಬೇರೆ ದಿನಗಳಲ್ಲಿ ಅಭಿಮಾನಿಗಳ ಕೈ ಸಿಗದ ಸ್ಟಾರ್ ನಟರು ಸಾಮಾನ್ಯ ಹುಟ್ಟುಹಬ್ಬದ ದಿನವಾದ್ರೂ ಅಭಿಮಾನಿಗಳಿಗೆ ಸಿಗ್ಬೇಕು ಅಂತ ಅಭಿಮಾನಿಗಳು ಬಯಸ್ತಾರೆ. ಆದ್ರೆ “ಕೃಷ್ಣಂ ಪ್ರಣಯ ಸಖಿ” Krishnam Pranaya Sakhi ಗೆಲುವಿನ ನಂತರ “ಪಿನಾಕ”Pinaka, “ಯುವರ್ಸ್ ಸಿನ್ಸಿಯರ್ಲಿ ರಾಮ್”Yours Sincerely Ram ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿ ಇರುವ ಗಣೇಶ್ ತಮ್ಮ ಅಭಿಮಾನಿಳಿಗೊಂದು ಸಂದೇಶ ಕೊಟ್ಟಿದ್ದಾರೆ.
ಹೀಗೆ ಹೇಳಿದ್ದಾರೆ ಗಣೇಶ್
”ಆತ್ಮೀಯ ಅಭಿಮಾನಿ ಸ್ನೇಹಿತರೇ. ಜುಲೈ 2, ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ತುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ನಾನು ಈ ಬಾರಿ ಪಿನಾಕ ಹಾಗೂ ಯುವರ್ ಸಿನ್ಸಿಯರ್ಲಿ ರಾಮ್ ಚಿತ್ರಗಳ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿರುವ ಕಾರಣ ಜುಲೈ 2ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೇ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿಂದಲೇ ನನಗೆ ಆಶಿಸಿ ಆಶೀರ್ವದಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ. ನಿಮ್ಮವ, ಗಣೇಶ”.
ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ
“ಹ್ಯಾಪಿ ಬರ್ತ್ಡೇ ಇನ್ ಅಡ್ವಾನ್ಸ್ ಸರ್, ಆದರೆ, ಅಭಿಮಾನಿಗಳು ನಿಮ್ಮ ಸೆಲೆಬ್ರೇಷನ್ ಮಾಡಲು ಪ್ರೀತಿಯಿಂದ ಬರುತ್ತಾರೆ, ಅವರಿಗೆ ನಿರಾಸೆ ಮಾಡಬೇಡಿ, ದೊಡ್ಡ ದೊಡ್ಡ ಪಾರ್ಟಿಗಳಲ್ಲಿ, ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ಕಾಣಿಸಿಕೊಳ್ಳುತ್ತೀರ, ನಿಮ್ಮ ಅಭಿಮಾನಿಗಳಿಗೆ ಒಂದು ದಿನ ಮೀಸಲಿಡಿ’ ಎಂದು ತಿಳಿಸಿದ್ದಾರೆ ಅಭಿಮಾನಿಗಳಲ್ಲೊಬ್ಬರು.
“ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯಗಳು ಬಾಸ್. ನಿಮ್ಮ ಅದೇಶ ಸದ್ಯಕ್ಕೆ ಬೇಸರವಾದರೂ, ಗೌರವಿಸುವೆವು” ಎಂದಿದ್ದಾರೆ ಅಭಿಮಾನಿಯೋರ್ವರು.
“ನೀವು ಎಲ್ಲೇ ಇರಿ, ಹೇಗೇ ಇರಿ, ನಿಮ್ಮ ಮೇಲೆ ಅಭಿಮಾನ ಕಡಿಮೆಯಾಗಲ್ಲ ರೀ… ಬಾಸ್…. ಹ್ಯಾಪಿ ಬರ್ತ್ಡೇ” ಎಂದು ಮತ್ತೋರ್ವ ಫ್ಯಾನ್ ತಿಳಿಸಿದ್ದಾರೆ.