- ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದಾರೆ ಈ ಹೊಸ ಐಷಾರಾಮಿ ಕಾರು, ಸ್ಪೆಷಲ್ಲಾಗಿದೆ ಇದ್ರ ಸಂಖ್ಯೆ
- ಕಾರಿನ ವಿಶೇಷ ರಿಜಿಸ್ಟ್ರೇಷನ್ ಸಂಖ್ಯೆಯ ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ ಯಶ್
- ಈ ಕಾರ್ ನ ಬೆಲೆ ಬರೋಬ್ಬರಿ ಮೂರು ಕೋಟಿ
ತಮ್ಮ ಐಷಾರಾಮಿ ಜೀವನಶೈಲಿಯ ಕಾರಣಕ್ಕೆ ಸ್ಟಾರ್ ನಟರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಕಾರು, ಬಂಗಲೆ, ಐಷಾರಾಮಿ ಮದುವೆಗಳ ಮೂಲಕ ಹುಬ್ಬೇರಿಸುವಂತೆ ಮಾಡುತ್ತಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಸರದಿ. ಆಗಾಗ ತಮ್ಮ ಐಷಾರಾಮಿ ಲೈಫ್ ಸ್ಟೈಲ್ ಮೂಲಕ ಸದ್ದು ಮಾಡುತ್ತಲೇ ಇರುವ ಯಶ್, Yash new car ಈಗ ಐಷಾರಾಮಿ ಕಾರೊಂದನ್ನು ಕೊಳ್ಳುವ ಮೂಲಕ ಮತ್ತು ಆ ಕಾರಿನ ವಿಶೇಷ ರಿಜಿಸ್ಟ್ರೇಷನ್ ಸಂಖ್ಯೆಯ ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ.
ಯಾವುದು ಈ ಕಾರ್ – Yash Car Collections
ಹೌದು ಸದ್ಯ ಮುಂಬೈನಲ್ಲಿ ಚಿತ್ರೀಕರಣದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ನಟ ಯಶ್ ತಮ್ಮ ಓಡಾಟಕ್ಕಾಗಿ ಹೊಸ ಕಾರ್ ಖರೀದಿಸಿದ್ದಾರೆ. ಈ ಕಾರ್ ನ ಬೆಲೆ ಬರೋಬ್ಬರಿ ಮೂರು ಕೋಟಿ. ಲೆಕ್ಸಸ್ನ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಂಪೆನಿಯ ಕಾರಿದು. ನೀಲಿ ಬಣ್ಣದ ಈ ಕಾರು ಏಪ್ರಿಲ್ ನಲ್ಲಿ ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದು ಕಾರಿನ ಸಂಖ್ಯೆ ಎಂಎಚ್ 47 ಸಿಬಿ 8055 (MH47CB8055)
8055 ಸಂಖ್ಯೆಯ ಕಥೆ ಹೀಗಿದೆ – Yash Car Number
8055 ಸಂಖ್ಯೆಯನ್ನು ‘ಬಾಸ್’ ಸಂಖ್ಯೆ ಎನ್ನಲಾಗುತ್ತೆ. 8055 ಸಂಖ್ಯೆ ನೋಡಲು ಇಂಗ್ಲೀಷ್ನ BOSS ನಂತೆ ಕಾಣುತ್ತದೆ. ಅದಕ್ಕೆ ಈ ಸಂಖ್ಯೆಗೆ ಬಾಸ್ ಸಂಖ್ಯೆ ಎನ್ನುತ್ತಾರೆ. ಈ ಸಂಖ್ಯೆ ಭಾರೀ ದುಬಾರಿ ಕೂಡ . ಲಕ್ಷಾಂತರ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡಿ 8055 ಸಂಖ್ಯೆಯನ್ನು ಆರ್ಟಿಓ ಯಿಂದ ಖರೀದಿ ಮಾಡಬೇಕಾಗುತ್ತದೆ. ಯಶ್ ಅವರ ಎಲ್ಲ ಕಾರುಗಳ ಸಂಖ್ಯೆಯೂ 8055 ಆಗಿರೋದು ವಿಶೇಷ.
ಈ ಕಾರು ಅವರ ನಿರ್ಮಾಣ ಸಂಸ್ಥೆಯಾದ ಮಾನ್ಸ್ಟರ್ ಮೈಂಡ್ಸ್ ಹೆಸರಿನಲ್ಲಿ ನೊಂದಣಿ ಆಗಿದೆ. ಅತ್ಯಂತ ಭದ್ರತೆ ಹೊಂದಿರುವ ಈ ಕಾರಿನಲ್ಲಿ ಐಷಾರಾಮಿ ಆಸನ, ಟಿವಿ ಮತ್ತು ಇನ್ನೂ ಹತ್ತು ಹಲವಾರು ವಿಶೇಷ ತಂತ್ರಜ್ಞಾನವಿದೆ. ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ನೊಂದಿಗೂ ಈ ಕಾರು ಚಾಲನೆ ಮಾಡಬಹುದು. ಇದು ಭಾರತದ ಅತ್ಯಂತ ದುಬಾರಿ ಮತ್ತು ಕಂಫರ್ಟ್ ಕಾರು ಎಂದು ಹೆಸರಾಗಿದೆ.