- ಬಿಗ್ ಬಾಸ್ ಮನೆಗೆ ಬರಲಿದ್ದಾನೆ ಈ ಸ್ಪೆಷಲ್ ಎಐ ಗೆಸ್ಟ್, ಯಾರದು?
- ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಡೇಟ್ ಕೂಡ ಅನೌನ್ಸ್ ಆಗಲಿದೆ.
- ಬಿಗ್ ಬಾಸ್ ಮನೆಗೆ ಎಂಟ್ರಿ ಆಗಲಿದೆ ಹಬುಬ್ ಡಾಲ್ ಅನ್ನುವ ಹೆಸರಿನ ಎಐ ರೊಬೋಟ್.
ಟಿವಿ ಜಗತ್ತಿನ ಅತ್ಯಂತ ದೊಡ್ಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್, ಕನ್ನಡ, ಹಿಂದಿ ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಶುರುವಾಗಲು ಸಿದ್ದತೆ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಡೇಟ್ ಕೂಡ ಅನೌನ್ಸ್ ಆಗಲಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಡೆಸಿಕೊಟ್ಟರೆ, ಹಿಂದಿಯಲ್ಲಿ ನಟ ಸಲ್ಮಾಂ ಖಾನ್ ನಡೆಸಿಕೊಡಲಿದ್ದಾರೆ. ಇದೀಗ ಹಿಂದಿ ಬಿಗ್ ಬಾಸ್ ಕಡೆಯಿಂದ ಹೊಸತೊಂದು ಅಪ್ಡೇಟ್ ದೊರೆತಿದ್ದು, ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯೊಬ್ಬರ ಎಂಟ್ರಿಯಾಗಲಿದೆ. ಅವನೇ ಹಬುಬ್ ಡಾಲ್ ಅನ್ನುವ ಹೆಸರಿನ ಎಐ ರೊಬೋಟ್. ಹೌದು ಕಳೆದ ಸಲ ಕತ್ತೆಯನ್ನು ಕರೆಸಿ ಸುದ್ದಿ ಮಾಡಿದ್ದ ಹಿಂದಿ ಬಿಗ್ ಬಾಸ್ ನಲ್ಲಿ ಈ ಸಲ ರೊಬೋಟ್ ಎಂಟ್ರಿ ಬಗ್ಗೆ ಗಾಳಿಸುದ್ದಿ ಎದ್ದಿದೆ.
ಆರು ಭಾಷೆಗಳಲ್ಲಿ ಮಾತಾಡುವ ರೋಬೋಟ್
ಇದು ಯುಎಇ ಮೂಲದ ಕೃತಕ ಬುದ್ದಿಮತ್ತೆಯ ರೋಬೋಟ್ (ಗೊಂಬೆ) ಆಗಿದ್ದು ಸುಮಾರು ಆರು ಭಾಷೆಗಳಲ್ಲಿ ಮಾತಾಡುವ ಸಾಮರ್ಥ್ಯ ಈ ಗೊಂಬೆಗಿದೆಯಂತೆ, ಭಾವನಾತ್ಮಕವಾಗಿಯೂ ಇದು ಸ್ಪಂದಿಸುತ್ತಂತೆ. ಈ ಗೊಂಬೆಯನ್ನು ಬಿಗ್ ಬಾಸ್ ಮನೆಗೆ ಕರೆಸಿ ಶೋ ಅನ್ನು ಇನ್ನಷ್ಟು ಥ್ರಿಲ್ಲಾಗಿಸುವ ಯೋಚನೆಯಲ್ಲಿದೆ ಹಿಂದಿ ಬಿಗ್ ಬಾಸ್ ತಂಡ ಎನ್ನುವ ಮಾಹಿತಿ ಲೀಕ್ ಆಗಿದೆ. ಕನ್ನಡದ ಬಿಗ್ ಬಾಸ್ ಮನೆಗೂ ಈ ಹಬುಬ್ ಡಾಲ್ ಎಂಟ್ರಿ ಕೊಟ್ಟರೂ ಅಚ್ಚರಿಯಿಲ್ಲ. ಆ ಅಚ್ಚರಿಗಾಗಿ ಬಿಗ್ ಬಾಸ್ ಅಭಿಮಾನಿಗಳು ಕಾಯಬೇಕಾಗಿದೆ.