- ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್
- ಹಾರರ್ ಎಲಿಮೆಂಟ್ ಗಳು ಟೀಸರ್ ನಲ್ಲಿ ಗಾಡವಾಗಿ ಕಾಣಿಸುತ್ತಿದ್ದು ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ
- ಸಿನಿಮಾದಲ್ಲಿ ಭಿನ್ನ ಗೆಟಪ್ ಮೂಲಕ ನಟ ಪೃಥ್ವಿರಾಜ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ
ಹೊಸ ಸಸ್ಪೆನ್ಸ್, ಥ್ರಿಲ್ಲಿಂಗ್ ಕಥಾನಕವುಳ್ಳ ’ಅನಂತಕಾಲಂ’ AnanthaKalam ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ರೋಮಾಂಚಕ, ಭಯಾನಕ ದೃಶ್ಯಗಳಿಂದ ಕುತೂಹಲ ಕೆರಳಿಸಿದೆ. ಒಂದು ಸಿಗರೇಟ್ ಸೇದುದರಿಂದ ಟೀಸರ್ ಆರಂಭವಾಗುತ್ತದೆ ಯಾರದ್ದೋ ಕರೆ, ಭಯಾನಕ ಧ್ವನಿ, ದೃಶ್ಯ, ಹುಲಿಯ ಘರ್ಜನೆ, ಆಕ್ಸಿಡೆಂಟ್ ನೊಂದಿಗೆ ಈ ಟೀಸರ್ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಹಾರರ್ ಎಲಿಮೆಂಟ್ ಗಳು ಟೀಸರ್ ನಲ್ಲಿ ಗಾಡವಾಗಿ ಕಾಣಿಸುತ್ತಿದ್ದು ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.
ಇಂತದ್ದೊಂದು ರೋಮಾಂಚಕ ಕತೆಯಿರುವ ಸಿನಿಮಾ ನಿರ್ದೇಶಿಸುತ್ತಿರುವುದು ವಿಜಯ್ ಮಂಜುನಾಥ್ Vijay Manjunath ಅವರು. ಈ ಸಿನಿಮಾದಲ್ಲಿ ಭಿನ್ನ ಗೆಟಪ್ ಮೂಲಕ ನಟ ಪೃಥ್ವಿರಾಜ್ ಶೆಟ್ಟಿ Prithviraj Shetty ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ವೇಲಿಯಂಟ್ ವಿಷನ್ ಕ್ರಿಯೇಷನ್ಸ್ Valient Vision Creations ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಗುರುಪ್ರಸಾದ್ ನರ್ನಾಡ್ ಛಾಯಾಗ್ರಾಹಣ, ಭುವನ್ ಶಂಕರ್ ಮತ್ತು ಸನ್ಸ್ಕಾರ್ ಸಂಗೀತ, ವೆಂಕಟ್ ಪಿ.ಎಸ್ ಕಥೆ ಬರೆದಿದ್ದಾರೆ.
ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು ಇನ್ನಷ್ಟು ಹೊಸ ಕಲಾವಿದರು ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿದಿದ್ದು ಚಿತ್ರ ನವೆಂಬರ್ ಅಥವಾ ಡಿಸೆಂಬರ್ ಹೊತ್ತಿಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.