ಬಿಗ್ ಬಜೆಟ್ “ರಾಮಾಯಣ” ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ಕ್ರೀಂ ಟೈಂ ಬಗ್ಗೆ ಸಿಕ್ತು ಅಪ್ಡೇಟ್

Date:

  • ಬಿಗ್ ಬಜೆಟ್ “ರಾಮಾಯಣ” ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ಕ್ರೀಂ ಟೈಂ ಬಗ್ಗೆ ಸಿಕ್ತು ಅಪ್ಡೇಟ್
  • ಹಲವು ದಿಗ್ಗಜ ನಟ-ನಟಿಯರು ನಟಿಸುತ್ತಿರುವ ಭಾರತದ ಬಿಗ್ ಬಜೆಟ್ ಸಿನಿಮಾ
  • ಈ ಸಿನಿಮಾದ ಮೊದಲ ಭಾಗ 2026ರ ದೀಪಾವಳಿ ಸಮಯಕ್ಕೆ ತೆರೆಗೆ ಬರಲಿದೆ.

ರಾಕಿಂಗ್ ಸ್ಟಾರ್ ಯಶ್ Rocking Star Yash, ರಣ್ಬೀರ್ ಕಪೂರ್ Ranbeer Kapoor ,ಸಾಯಿ ಪಲ್ಲವಿ Sayi Pallavi ಇನ್ನೂ ಹಲವು ದಿಗ್ಗಜ ನಟ-ನಟಿಯರು ನಟಿಸುತ್ತಿರುವ “ರಾಮಾಯಣ” Ramayana ಸಿನಿಮಾ, ಭಾರತದ ಬಿಗ್ ಬಜೆಟ್ ಸಿನಿಮಾವಾಗಿದೆ. ಈ ಸಿನಿಮಾದ ಎರಡು ಭಾಗಗಳ ಬಜೆಟ್ ನಾಲ್ಕು ಸಾವಿರ ಕೋಟಿ ಎಂದು ಈಗಾಗಲೇ ಸುದ್ದಿಯಾಗಿತ್ತು. ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. ಟೀಸರ್ ನಲ್ಲಿ ನಟ ರಣ್ಬೀರ್ ಕಪೂರ್ ಹಾಗೂ ಯಶ್ ಅವರ ಸಣ್ಣ ಗ್ಲಿಂಪ್ಸ್ ತೋರಿಸಲಾಗಿತ್ತು. ಆದರೆ ಕನ್ನಡಿಗ ಪ್ರೇಕ್ಷಕರು ಒಂದು ಪ್ರಶ್ನೆ ಮಾಡುತ್ತಿದ್ದಾರೆ ಅದೇನಂದ್ರೆ, ರಾಕಿಂಗ್ ಸ್ಟಾರ್ ಯಶ್ ಅದೆಷ್ಟು ಸಮಯ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ? ಎನ್ನುವ ಕುತೂಹಲದ ಪ್ರಶ್ನೆ ಅದು. ಮೊದಲು ಬಿಡುಗಡೆಯಾಗುವ ಪಾರ್ಟ್ 1 ರಲ್ಲಿ ಯಶ್ ಸ್ಕ್ರೀಂ ಟೈಂ ಕೇವಲ 15 ನಿಮಿಷ ಮಾತ್ರವೇ ಇದೆ ಎನ್ನುವ ವದಂತಿ ಹಬ್ಬಿತ್ತು.

2026 ರಲ್ಲಿ ಬಿಡುಗಡೆಯಾಗಲಿದೆ ಮೊದಲ ಭಾಗ

ಮೊದಲ ಭಾಗದಲ್ಲಿ ಶ್ರೀರಾಮ ಪಟ್ಟಾಭಿಷೇಕದ ನಂತರ ರಾಮನ ವನವಾಸದ ಕತೆ ಮಾತ್ರವೇ ಇರಲಿದ್ದು, ಯಶ್ ಪಾತ್ರ ಕೊನೆಯಲ್ಲಿ ಮಾತ್ರವೇ ಬರುತ್ತೆ ಎನ್ನಲಾಗಿತ್ತು. ಪಾರ್ಟ್ ಎರಡರಲ್ಲಿ ಯಶ್ ಹೆಚ್ಚು ಸಮಯ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಈ ವದಂತಿ ಸುಳ್ಳು ಎಂದು ಸಾಬೀತಾಗಿದ್ದು 2026ರ ನವೆಂಬರ್ನಲ್ಲಿ ಬಿಡುಗಡೆ ಆಗಲಿರುವ ಮೊದಲ ಪಾರ್ಟ್ ನಲ್ಲಿ ಯಶ್ 15 ನಿಮಿಷಕ್ಕಿಂತಲೂ ಹೆಚ್ಚಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ರಾಮನ ಕತೆಯ ಜೊತೆಗೆ ರಾವಣನ ಕತೆಯನ್ನು ಸಹ ಸಿನಿಮಾದ ಆರಂಭದಿಂದಲೇ ತೋರಿಸಲಾಗುತ್ತದೆಯಂತೆ. ಹಾಗಾಗಿ ಇಲ್ಲಿ ಯಶ್ ಜಾಸ್ತಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ.

“ರಾಮಾಯಣ” ಸಿನಿಮಾ ವನ್ನು ನಿತೀಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ನಟ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಮೊದಲ ಭಾಗ 2026ರ ದೀಪಾವಳಿ ಹಬ್ಬದ ಹೊತ್ತಿಗೆ ಮತ್ತು ಎರಡನೆಯ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...