- ಆರು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ “ನೆತ್ತೆರೆಕೆರೆ” ಆ. 22 ಕ್ಕೆ ರಿಲೀಸ್
- ಸ್ವರಾಜ್ ಶೆಟ್ಟಿ ಚೊಚ್ಚಲ ನಿರ್ದೇಶನದ ತುಳು ಸಿನಿಮಾ
- ಆಕ್ಷನ್ ದೃಶ್ಯಗಳ ನಡುವೆ ಪ್ರಾದೇಶಿಕ ಸೊಗಡೂ ಇರುವ ಚಿತ್ರ ಇದಾಗಿದೆ
ಕಾಂತಾರ Kanthara ಸಿನಿಮಾದಲ್ಲಿ ಗುರುವ Guruva ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿರಸಿಕರ ಮನ ಗೆದ್ದಿರುವ ನಟ ಸ್ವರಾಜ್ ಶೆಟ್ಟಿ, Swaraj Shetty ಇದೀಗ ನಿರ್ದೇಶನಕ್ಕೂ ಇಳಿದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ತುಳು ಸಿನಿಮಾ “ನೆತ್ತೆರೆಕೆರೆ” Netterekere. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅಸ್ತ್ರ ಪೊಡಕ್ಶನ್ Astra Production ಬ್ಯಾನರ್ ನಲ್ಲಿ ಈ ಚಿತ್ರವನ್ನು ಲಂಚುಲಾಲ್ ಕೆ ಎಸ್ Lanchulal K S ನಿರ್ಮಾಣ ಮಾಡಿದ್ದಾರೆ. ಮಂಗಳೂರಿನ ತರುಣರ ರಕ್ತ ಸಿಕ್ತ ಬದುಕಿನ ಕತೆಯುಳ್ಳ ಸಿನಿಮಾವಿದು. ಹೊಡೆದಾಟ, ಬಡಿದಾಟದ ಆಕ್ಷನ್ ದೃಶ್ಯಗಳ ನಡುವೆ ಪ್ರಾದೇಶಿಕ ಸೊಗಡೂ ಇರುವ ಚಿತ್ರ ಇದಾಗಿದೆ. ಇನ್ನೊಂದು ವಿಶೇಷ ಅಂದ್ರೆ ಈ ಚಿತ್ರ ತುಳು ಭಾಷೆಯ ಜೊತೆಗೆ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಈ ಮೂಲಕ ಎಲ್ಲಾ ಭಾಷೆಗಳಲ್ಲೂ ಸಂಚಲನ ಉಂಟುಮಾಡಲು ಸಿದ್ದತೆ ನಡೆಸಿದೆ. ಸದ್ಯ ಚಿತ್ರದ ಡಬ್ಬಿಂಗ್ ಕೆಲಸ ಪ್ರಗತಿಯಲ್ಲಿದೆ.
ಅನುಭವಿ ಕಲಾವಿದರ ದಂಡೇ ಇಲ್ಲಿದೆ.
ನಿರ್ದೇಶಕ ಸ್ವರಾಜ್ ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಆಗಸ್ಟ್ 22 ರಂದು ಚಿತ್ರ ಬಿಡುಗಡೆಯಾಗಲಿದ್ದು ನೂರಾರು ನಿರೀಕ್ಷೆಗಳನ್ನು ಮೂಡಿಸಿದೆ. ಇನ್ನು ತಾರಾಗಣದ ವಿಚಾರಕ್ಕೆ ಬಂದರೆ ಚಿತ್ರದಲ್ಲಿ ಬಹುಭಾಷಾ ನಟ ಸುಮನ್ ತಲ್ವಾರ್ Suman Thalwar ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ದಿಶಾಲಿ ಪೂಜಾರಿ, ಯುವ ಶೆಟ್ಟಿ, ಅನಿಲ್ ಉಪ್ಪಳ, ಪುಷ್ಪರಾಜ್ ಬೊಳ್ಳೂರು ಮೊದಲಾದ ಅನುಭವಿ ಕಲಾವಿದರ ದಂಡೇ ಇಲ್ಲಿದೆ.
ಚಿತ್ರಕ್ಕೆ ಉದಯ್ ಬಳ್ಳಾಲ್ ಕ್ಯಾಮರಾ ಕೈಚಳಕವಿದೆ. ವಿನೋದ್ ರಾಜ್ ಕೋಕಿಲಾ ಸಂಗೀತವಿದೆ. ಕಾರ್ತಿಕ್ ಮೂಲ್ಕಿ ಹಿನ್ನೆಲೆ ಸಂಗೀತ, ಗಣೇಶ್ ನೀರ್ಚಾಲ್ ಸಂಕಲನದ ಸಾಥ್ ಇದೆ. ತುಳು ಭಾಷೆಯ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೂ ಎಂಟ್ರಿ ಕೊಡಲು ಸಿದ್ದತೆ ನಡೆಸಿರುವ “ನೆತ್ತೆರೆಕೆರೆ” ಚಿತ್ರದ ಕುರಿತು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿರುವುದಂತೂ ಹೌದು