ಕಾಸ್ಮಿಕ್ ಪ್ರೊಡಕ್ಷನ್ ನ ಹೊಸ ಚಿತ್ರದ ಶೂಟಿಂಗ್ ಕಂಪ್ಲೀಟ್: ಶೀಘ್ರದಲ್ಲೇ ಚಿತ್ರದ ಟೈಟಲ್ ಫಿಕ್ಸ್

Date:

  • ಕಾಸ್ಮಿಕ್ ಪ್ರೊಡಕ್ಷನ್ ನ ಹೊಸ ಚಿತ್ರದ ಶೂಟಿಂಗ್ ಕಂಪ್ಲೀಟ್: ಶೀಘ್ರದಲ್ಲೇ ಚಿತ್ರದ ಟೈಟಲ್ ಫಿಕ್ಸ್
  • ಯಶಸ್ವಿಯಾಗಿ ತನ್ನ ಚಿತ್ರೀಕರಣ ಪೂರ್ಣಗೊಳಿಸಿದ ಪ್ರಫುಲ್ ತಂಬುರ್ ಎಸ್ ನಿರ್ದೇಶನದ ಹೊಸ ಸಿನಿಮಾ
  • ಚಿತ್ರದ ಟೈಟಲ್ ಮಾತ್ರವಲ್ಲ, ಟ್ರೈಲರ್, ಪೋಸ್ಟರ್ ಬಗ್ಗೆಯೂ ಕುತೂಹಲ ಮೂಡಿದೆ

ನಿರ್ದೇಶಕ ಪ್ರಫುಲ್ ತಂಬುರ್ ಎಸ್ Praful Tumbar S ನಿರ್ದೇಶನದ ಹೊಸ ಸಿನಿಮಾವೊಂದು ಯಶಸ್ವಿಯಾಗಿ ತನ್ನ ಚಿತ್ರೀಕರಣ ಪೂರ್ಣಗೊಳಿಸಿದೆ. ಕಾಸ್ಮಿಕ್ ಪ್ರೊಡಕ್ಶನ್ Cosmic Production ಬ್ಯಾನರ್ ನಡಿಯಲ್ಲಿ ಮೂಡಿಬರಲಿರುವ ಈ ಚಿತ್ರದ ಹೆಸರನ್ನು ಇನ್ನೂ ಚಿತ್ರತಂಡ ಫೈನಲೈಸ್ ಮಾಡಿಲ್ಲ. ಈ ಚಿತ್ರದಲ್ಲಿ ಕಿರುತೆರೆ ಕಲಾವಿದರಾಗಿ ನನ್ನರಸಿ ರಾಧೆ ಹಾಗೂ ತ್ರಿಪುರ ಸುಂದರಿ ಧಾರಾವಾಹಿಗಳಲ್ಲಿ ಹೆಸರು ಮಾಡಿದ ಅಭಿನವ್ ಮುಕುಂದನ್ Abhinav Mukundan, ನಾಯಕನಾಗಿ ಎಂಟ್ರಿಕೊಟ್ಟಿದ್ದಾರೆ. ಕೆಟಿಎಂ, ಎಲ್ಲೋ ಜೋಗಪ್ಪ ನಿನ್ ಅರಮನೆ ಸಿನಿಮಾದಲ್ಲಿ ಮಿಂಚಿದ ನಟಿ ಸಂಜನಾ ದಾಸ್ Sanjana Das ಈ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಪ್ರತಿಭಾವಂತ ನಟರ ಸಮಾಗಮವಿದೆ

ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ Sooraj ಅವರು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಚಿತ್ರದ ತಾರಾಗಣದಲ್ಲಿ ದತ್ತಣ್ಣ, ರಾಮೇಶ್ವರಿ ವರ್ಮಾ, ಲಾವಣ್ಯ ನಟನಾ, ಶಿವಾನಿ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಎಂ Vijay M ಅವರ ಸಹ ನಿರ್ದೇಶನವಿದೆ. ನಿರೀಕ್ಷಿತ್ ಅವರ ಕ್ರಿಯಾಶೀಲ ಛಾಯಾಗ್ರಹಣವಿದೆ. ಭರತ್ ಜನಾರ್ಧನ್ ಅವರ ಇಂಪಾದ ಸಂಗೀತ ಸಂಯೋಜನೆಯಿದೆ.

ಪೋಸ್ಟ್ ಪ್ರೊಡಕ್ಶನ್ ಕೆಲಸಗಳು ಆರಂಭಗೊಂಡಿದೆ

ಚಿತ್ರೀಕರಣ ಪೂರ್ಣಗೊಂಡು ಇದೀಗ ಪೋಸ್ಟ್ ಪ್ರೊಡಕ್ಶನ್ ಕೆಲಸಗಳು ಆರಂಭಗೊಂಡಿದೆ. ಇದೀಗ ಹಲವಾರು ಪ್ರತಿಭಾವಂತ ಕಲಾವಿದರನ್ನೊಳಗೊಂಡ ಈ ಹೊಸ ಚಿತ್ರದ ಟೈಟಲ್ ಮಾತ್ರವಲ್ಲ, ಟ್ರೈಲರ್, ಪೋಸ್ಟರ್ ಬಗ್ಗೆಯೂ ಸಹಜವಾಗಿಯೇ ಕುತೂಹಲ ಮೂಡಿದೆ. ಚಿತ್ರದ ಇನ್ನಷ್ಟು ಮಾಹಿತಿಗಾಗಿ ಪ್ರೇಕ್ಷಕರು ಒಂದಷ್ಟು ಕಾಯಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...