ಹಾರರ್ ಲೋಕದತ್ತ ಕರೆದೊಯ್ಯುವ “ಒಮೆನ್”ಚಿತ್ರದ ಟ್ರೈಲರ್ ರಿಲೀಸ್

Date:

  • ಹಾರರ್ ಲೋಕದತ್ತ ಕರೆದೊಯ್ಯುವ “ಒಮೆನ್”ಚಿತ್ರದ ಟ್ರೈಲರ್ ರಿಲೀಸ್
  • ವೈಭವ್ ಎಸ್ ಸಂತೋಷ್ ನಿರ್ದೇಶನದ “ಒಮೆನ್” ಚಿತ್ರದ ಟ್ರೈಲರ್ ರಿಲೀಸ್ ಆಗಿದೆ
  • ಚಿತ್ರ, ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವುದು ಹಾರರ್ ಸಿನಿಮಾ ಅಭಿಮಾನಿಗಳಿಗೊಂದು ಒಳ್ಳೆಯ ಸುದ್ದಿಯಾಗಿದೆ.

ವೈಭವ್ ಎಸ್ ಸಂತೋಷ್ Vaibhav S Santhosh ನಿರ್ದೇಶನದ “ಒಮೆನ್” Omen ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಟ್ರೈಲರ್ ಪ್ರೇಕ್ಷಕರನ್ನು ನಿಗೂಢತೆಯತ್ತ ಕರೆದೊಯ್ಯುವ ರೀತಿಯಲ್ಲಿದೆ. ತೀರಾ ಹಾರರ್ ಅಂಶವುಳ್ಳ “ಒಮೆನ್” ಚಿತ್ರದ ಟ್ರೈಲರ್ ಒಂದು ಕ್ಷಣ ಎದೆಯಲ್ಲಿ ಭೀತಿಯನ್ನುಂಟುಮಾಡುತ್ತದೆ. “ಒಮೆನ್” ಅಂದ್ರೆ ಶಕುನಾ ಎಂದು ಅರ್ಥ ಬರುತ್ತೆ. ಶಕುನದ ಮೂಲಕ ಭಯಾನಕ ವಾತಾವರಣವನ್ನು ಈ ಚಿತ್ರ ಸೃಷ್ಟಿಸುತ್ತದೆ ಎನ್ನುವುದು ಚಿತ್ರದ ಟ್ರೈಲರ್ ನೋಡಿದಾಗಲೇ ಫೀಲ್ ಆಗುತ್ತದೆ.

ಭೂತಬಂಗಲೆಯ ಭಯಾನಕತೆ

ಯುಟ್ಯೂಬರ್ ನಾಗಿ ಒಂದು ಭೂತ ಬಂಗಲೆಗೆ ಹೋಗುವ ನಾಯಕ ಎದುರಿಸುವ ಭಯಾನಕ ಕ್ಷಣಗಳು ಹಾಗೂ ಅಲ್ಲಿ ಬಿಚ್ಚಿಕೊಳ್ಳುವ ವಿವಿಧ ಸನ್ನಿವೇಶಗಳೇ ಈ ಸಿನಿಮಾದ ಕತೆಯ ಎಳೆ. ಚಿತ್ರದಲ್ಲಿ ಅಜಯ್ ಕುಮಾರ್ Ajay Kumar ನಾಯಕನಾಗಿ ನಟಿಸಿದ್ದು, ಈ ಸಿನಿಮಾದ ನಿರ್ಮಾಪಕರೂ ಹೌದು. ವಿ.ಮಿರುನಳಿನಿ V. Mirunalini ಇನ್ನೋರ್ವ ನಿರ್ಮಾಪಕರಾಗಿದ್ದಾರೆ. ನಿಶ್ಮಾ ಶೆಟ್ಟಿ Nishma Shetty ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಮೈತ್ರಿ ಜಗ್ಗಿ, ಕೀರ್ತನ ಪುಲ್ಕಿ,ಆಶಾ ಕುಲಕರ್ಣಿ ಮೊದಲಾದವರಿದ್ದಾರೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಸಿನಿಮಾ

ವಿಜಯ್ ಸಿನಿಮಾಸ್ Vijay Cinemas ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ನಿರ್ದೇಶಕ ವೈಭವ್ ಎಸ್ ಸಂತೋಷ್, ಚಿತ್ರದ ಎಡಿಟಿಂಗ್ ನಲ್ಲಿಯೂ ಕೈಜೋಡಿಸಿದ್ದು, ಭುವನ್ ಶಂಕರ್, ಸಂಸ್ಕಾರ್ ಅವರ ಸಂಗೀತ ಚಿತ್ರಕ್ಕಿದೆ. ಒಟ್ಟಾರೆಯಾಗಿ ಒಂದು ಮನೆಯ ಸುತ್ತ ನಡೆಯುವ ನಿಗೂಢ ಕತೆಯನ್ನು ಪ್ರೇಕ್ಷಕರಿಗೆ ಕಾಡುವಂತೆ ಹೇಳುವ “ಒಮೆನ್” ಚಿತ್ರ, ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವುದು ಹಾರರ್ ಸಿನಿಮಾ ಅಭಿಮಾನಿಗಳಿಗೊಂದು ಒಳ್ಳೆಯ ಸುದ್ದಿಯಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...

ಐತಿಹಾಸಿಕ ಸಿನಿಮಾದಲ್ಲಿ ಅಬ್ಬರಿಸಲಿರುವ ರಿಷಬ್ : ಅಭಿಮಾನಿಗಳಿಗೆ ರಿಷಬ್ ನೀಡಿದ ಗುಡ್ ನ್ಯೂಸ್ ಏನು?

ಐತಿಹಾಸಿಕ ಸಿನಿಮಾದಲ್ಲಿ ಅಬ್ಬರಿಸಲಿರುವ ರಿಷಬ್ : ಅಭಿಮಾನಿಗಳಿಗೆ ರಿಷಬ್ ನೀಡಿದ ಗುಡ್...