- “ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್
- ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್ ಬಾಬಿ ನಿರ್ದೇಶನದ ಚಿತ್ರ
- ತೆರೆಯ ಮೇಲೆ ಮಿಂಚಿದ್ದಾರೆ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್
ಕನ್ನಡದ ಫೇಮಸ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ Ajaneesh Lokanath ಹಾಗೂ ಸಿ.ಆರ್.ಬಾಬಿ C R Baby ಅವರು ಎಬಿಬಿಎಸ್ ಸ್ಟುಡಿಯೋಸ್ abbs studios ಲಾಂಛನದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ “ಜಸ್ಟ್ ಮಾರೀಡ್” Just Married. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಸಿ.ಆರ್. ಬಾಬಿ. ಬಿಗ್ ಬಾಸ್ 7 ಸೀಸನ್ ವಿನ್ನರ್ ಶೈನ್ ಶೆಟ್ಟಿ Shain Shetty ಹಾಗೂ ನಮ್ಮನೆ ಯುವರಾಣಿ ಧಾರಾವಾಹಿ ಖ್ಯಾತಿಯ ಅಂಕಿತಾ ಅಮರ್ Ankitha Amar ಮುಖ್ಯಭೂಮಿಕೆಯಲ್ಲಿ ಮಿಂಚಿರುವ ಈ ಬಹುನಿರೀಕ್ಷಿತ ಚಿತ್ರ ಆಗಸ್ಟ್ 22 ರಂದು ಅದ್ಧೂರಿಯಾಗಿ ತೆರೆಮೇಲೆ ಬರಲಿದೆ. ಈಗಾಗಲೇ ಟೀಸರ್, ಪೋಸ್ಟರ್ ಹಾಗೂ ಹಾಡುಗಳ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡಿರುವ ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಕೌಟುಂಬಿಕ ಕಥಾಹಂದರದ ಚಿತ್ರ
ಹೆಸರೇ ಹೇಳುವಂತೆ ಪ್ರೇಮ ಕಥೆಯೊಂದಿಗೆ ಕೌಟುಂಬಿಕ ಕಥೆಯನ್ನು ಕಥಾಹಂದರವಾಗಿ ಹೊಂದಿರುವ ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ಸ್ವತಃ ಅಜನೀಶ್ ಲೋಕನಾಥ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ದೇವರಾಜ್ Devaraj, ಅಚ್ಯುತಕುಮಾರ್ Achyuth Kumar, ಮಾಳವಿಕ ಅವಿನಾಶ್ Malavika Avinash, ಅನೂಪ್ ಭಂಡಾರಿ Anoop Bhandari, ಶ್ರುತಿ ಹರಿಹರನ್ Shruthi Hariharan, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ, ಅನಿಲ್, ವೇದಿಕಾ ಕಾರ್ಕಳ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಡಿಷನಲ್ ಸ್ಕ್ರೀನ್ ಪ್ಲೇ ರಂಜನ್ ಬರೆದಿದ್ದು, ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು. ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಪ್ರತೀಕ್ ಶೆಟ್ಟಿ ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್, ಡಾ.ವಿ.ನಾಗೇಂದ್ರಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ರಂಜನ್ ಮತ್ತು ಶಶಿ ಕಾವೂರ್ ಬರೆದಿದ್ದಾರೆ.