- “ರೌಡಿಸಂ ಮಾಡಬೇಡಿ” ಎನ್ನುವ ಸಂದೇಶ ನೀಡಲು ಬರ್ತಿದೆ “ಸೂರಿ ಅಣ್ಣ” ಸಿನಿಮಾ: ಏನಿದೆ ಈ ಚಿತ್ರದ ವಿಶೇಷ?
- ಚಿತ್ರದಲ್ಲಿ ದಿನೇಶ್, ನಾಯಕ ನಟನಾಗಿ ಮಾತ್ರವಲ್ಲ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿ ಕೆಲಸ ಮಾಡಿದ್ದಾರೆ
- ಚಿತ್ರೀಕರಣ ಮುಕ್ತಾಯವಾಗಿದ್ದು ಶೀಫ್ರದಲ್ಲೇ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಕನ್ನಡದಲ್ಲಿ ರೌಡಿಸಂ ಕಥಾ ಹಂದರಿರುವ ಚಿತ್ರಗಳು ಹೊಸ ಹೊಸ ರೀತಿಯಲ್ಲಿ ಬರುತ್ತಲೇ ಇದೆ. ಇದೀಗ ದುನಿಯಾ ವಿಜಯ್ Duniya Vijay ನಟನೆಯ ಸಲಗ Salaga ಚಿತ್ರದಲ್ಲಿ ಸೂರಿ ಅಣ್ಣಾ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದ ನಟ ದಿನೇಶ್ Dinesh ಅವರು ರೌಡಿಸಂ ಕಥಾ ಹಂದರವಿರುವ ಚಿತ್ರವೊಂದರಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಹೆಸರು “ಸೂರಿ ಅಣ್ಣ” Soori Anna ಈಗಾಗಲೇ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು ವಿಶೇಷವಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ದಿನೇಶ್ ಅವರು ಕೇವಲ ನಾಯಕ ನಟನಾಗಿ ಮಾತ್ರವಲ್ಲ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿ ಕೆಲಸ ಮಾಡಿದ್ದಾರೆ.
ರೌಡಿಸಂ ಮಾಡಬೇಡಿ ಎಂಬ ಸಂದೇಶ
ಅಂದ ಹಾಗೆ ಈ ಸಿನಿಮಾದಲ್ಲಿ ರೌಡಿಸಂ ಕಥಾಹಂದರ ಇದೆ. ಆದರೆ ಯಾರೂ ಕೂಡ ರೌಡಿಸಂ ಮಾಡಬೇಡಿ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದಂತೆ. ಯುವಕರನ್ನು ಗುರಿಯಾಗಿರಿಕೊಂಡು ಚಿತ್ರ ನಿರ್ಮಿಸಲಾಗಿದೆ ಎನ್ನುತ್ತದೆ ಚಿತ್ರತಂಡ. ಚಿತ್ರದಲ್ಲಿ ನಟ ದಿನೇಶ್ ಅವರಿಗೆ ಸಂಭ್ರಮಶ್ರೀ Sambhrama Shree ಅವರು ನಾಯಕಿಯಾಗಿ ಸಾಥ್ ನೀಡಿದ್ದಾರೆ. ರವಿ ಕಾಳೆ, ಕಾಕ್ರೋಜ್ ಸುಧೀ, ಹರೀಶ್ ರಾಯ್, ಎಸ್.ಕೆ. ಉಮೇಶ್, ಪ್ರಕಾಶ್ ತುಮಿನಾಡು, ಪ್ರಸಾದ್, ವೇಡಿ ಅಣ್ಣ, ಚಿತ್ರಲ್ ರಂಗಸ್ವಾಮಿ, ಯಶಸ್ವಿನಿ ಗೌಡ, ಬೆನಕ ನಂಜಪ್ಪ, ಬೇಬಿ ಮರಿಶಾ, ಪ್ರವೀಣ್ ರಾಜ್ ಮುಂತಾದವರು ನಟಿಸಿದ್ದಾರೆ. ಎಂ.ಬಿ. ಅಳ್ಳಿಕಟ್ಟಿ ಅವರ ಛಾಯಾಗ್ರಹಣ, ಎನ್.ಎಂ. ವಿಶ್ವ ಅವರ ಸಂಕಲನವಿದೆ. ಎನ್. ರಾಜ್ ಅವರು ನೃತ್ಯ ನಿರ್ದೇಶನ ಮಾಡಿದ್ದು, ವಿಶ್ವ ಜಿ. ಕಲಾ ನಿರ್ದೇಶನ, ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಇದಕ್ಕೆ ಕೆ.ಎಂ. ಇಂದ್ರ ಅವರು ಸಂಗೀತ ನೀಡಿದ್ದಾರೆ. ಶ್ರೀಧರ್ ಕಶ್ಯಪ್ ಅವರ ಹಿನ್ನೆಲೆ ಸಂಗೀತವಿದೆ. ಸಿನಿಮಾದ ಕ್ರಿಯೇಟಿವ್ ಹೆಡ್ ಆಗಿ ರಂಜಿತ್ ತಿಗಡಿ ಅವರು ಕೆಲಸ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಶೀಫ್ರದಲ್ಲೇ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.