- “ಚೌಕಿದಾರ್”ಚಿತ್ರದ ಈ ಹೊಸ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಪೃಥ್ವಿ ಅಂಬಾರ್-ಸಾಯಿ ಕುಮಾರ್
- ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ “ಚೌಕಿದಾರ್” ಚಿತ್ರ
- ಶೀಘ್ರದಲ್ಲೇ ಈ ಚಿತ್ರ ತೆರೆ ಕಾಣಲಿದೆ
ಚಂದ್ರಶೇಖರ್ ಬಂಡಿಯಪ್ಪChandrashekhar Bandiyappa ನಿರ್ದೇಶನದ “ಚೌಕಿದಾರ್”Chowkidar ಚಿತ್ರ, ಟೀಸರ್ ಬಿಡುಗಡೆ ಮಾಡಿ ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವ ಮೂಲಕ ಸದ್ದು ಮಾಡಿದೆ. ಚಿತ್ರದ ನಾಯಕ ಓ ಮೈ ಬ್ರೋ O my bro ಎಂದು ಕುಣಿಯುವ ಹಾಡು ಇದಾಗಿದೆ. ಚಿತ್ರದಲ್ಲಿ ನಾಯಕನಾಗಿ ಪೃಥ್ವಿ ಅಂಬಾರ್ Prithvi Ambar ನಟಿಸಿದ್ದು, ನಟ ಸಾಯಿ ಕುಮಾರ್ Sai Kumar ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಹಾಡಿನಲ್ಲಿ ತಂದೆಯಾಗಿ ಅಭಿನಯಿಸಿರುವ ಸಾಯಿಕುಮಾರ್, ಮತ್ತು ಮಗನಾಗಿ ನಟಿಸಿರುವ ಪೃಥ್ವಿ ಅಂಬಾರ್ ಇಬ್ಬರೂ ಹಾಡಿಗೆ ಹೆಜ್ಜೆ ಹಾಕಿರುವುದು ಸಖತ್ ಸಂಚಲನ ಮೂಡಿಸಿದೆ. ಮುರುಳಿ ಮಾಸ್ಟರ್ Muruli Master ಹಾಡನ್ನು ಕೋರಿಯೋಗ್ರಫಿ ಮಾಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ V Nagendra Prasad ಸಾಹಿತ್ಯ ಬರೆದಿರುವ ಓ ಮೈ ಬ್ರೋ ಪ್ಯಾಥೋ ಗೀತೆಗೆ ಖ್ಯಾತ ಗಾಯಕ ಕೈಲಾಸ್ ಖೇರ್ ಧ್ವನಿ ನೀಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯಿದೆ.
ಶ್ರೀಘ್ರದಲ್ಲೇ ತೆರೆಯ ಮೇಲೆ ಚಿತ್ರ
ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್ಕುಮಾರ್ Dhanya Ramkumar ನಾಯಕ ನಟಿಯಾಗಿ ನಟಿಸಿದ್ದಾರೆ. ನಟ ಪೃಥ್ವಿ ಅಂಬಾರ್ ಇಲ್ಲಿ ಖಡಕ್ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಟಿ ಸುಧಾರಾಣಿ Sudharani ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸಿದ್ದಾರೆ. ಚೌಕಿದಾರ್ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ Kallahalli Chandrashekhar ನಿರ್ಮಾಣ ಮಾಡುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ಶೀಘ್ರದಲ್ಲೇ ಈ ಚಿತ್ರ ತೆರೆ ಕಾಣಲಿದೆ.