- ವಿಭಿನ್ನ ಕಥಾ ಹಂದರದ ಚಿತ್ರಕ್ಕೆ ಶಿವಣ್ಣ ರೆಡಿ: ಸದ್ಯದಲ್ಲೇ ಶೂಟಿಂಗ್ ಶುರು
- ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಶಿವಣ್ಣ
- ಚಿತ್ರತಂಡ ಪ್ರಜ್ವಲ್ ದೇವರಾಜ್ ಅವರೊಂದಿಗೆ ಮಾತುಕತೆ ನಡೆಸಿದೆ ಎನ್ನುವ ಮಾಹಿತಿ
ಕಳೆದ ಕೆಲವು ತಿಂಗಳುಗಳಿಂದ ನಟ ಶಿವರಾಜ್‌ಕುಮಾರ್ Shivaraj Kumar ವಿವಿಧ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಿರ್ದೇಶಕ ಪವನ್ ಒಡೆಯರ್ Pavan Odeyar ಆಕ್ಷನ್ ಕಟ್ ಹೇಳಿರುವ ಸಿನಿಮಾವೊಂದರಲ್ಲಿ ನಟಿಸಲು ಅವರು ರೆಡಿಯಾಗಿದ್ದಾರೆ. ಸದ್ಯದಲ್ಲಿಯೇ ಈ ಹೊಸ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರದಲ್ಲಿ ವಿಭಿನ್ನ ಕಥಾ ಹಂದರವಿರಲಿದೆ ಎನ್ನುವ ಒಂದಷ್ಟು ಮಾಹಿತಿ ಸಿಕ್ಕಿದೆ. ಈ ಹೊಸ ಚಿತ್ರವನ್ನು ಅಪೇಕ್ಷಾ ಪವನ್ ಒಡೆಯರ್ ಮತ್ತು ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ Odeyar Movies ಬ್ಯಾನರ್ ಅಡಿಯಲ್ಲಿ, ಆರ್ನಾ ಕ್ರಿಯೇಟಿವ್ಸ್ Arna Creatives ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಜೊತೆ ಮಾತುಕತೆ?
ಈ ಚಿತ್ರದ ಹೆಸರು ಸೇರಿದಂತೆ ಉಳಿದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ನಟ ಪ್ರಜ್ವಲ್ ದೇವರಾಜ್ Prajwal Devaraj ಅವರೊಂದಿಗೆ ಮಾತುಕತೆ ನಡೆಸಿದೆ ಎನ್ನುವ ಮಾಹಿತಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಪ್ರಜ್ವಲ್, ಹ್ಯಾಟ್ರಿಕ್ ಹೀರೋ ಜೊತೆ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುತ್ತಾರೆ ಎನ್ನುವುದು ವಿಶೇಷ. ಪ್ರಸ್ತುತ ಕರಾವಳಿ ಹಾಗೂ ಗುರುದತ್ತ ಗಾಣಿಗ ನಿರ್ದೇಶನದ ಸಿನಿಮಾ ಹಾಗೂ ಚೀತಾ ಚಿತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದು ಸದ್ಯದಲ್ಲೇ ಈ ಹೊಸ ಚಿತ್ರಕ್ಕೂ ಓಕೆ ಹೇಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಶಿವರಾಜಕುಮಾರ್ ಶೀಘ್ರದಲ್ಲೇ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು, ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನ ಪಾತ್ರದಲ್ಲಿ ಮಿಂಚಲಿದ್ದಾರಾ ಎನ್ನುವ ಕುತೂಹಲ ಮೂಡಿದೆ. ಸದ್ಯದಲ್ಲೇ ಚಿತ್ರತಂಡ ಚಿತ್ರದ ಹೆಸರು ಸೇರಿದಂತೆ ಉಳಿದ ಮಾಹಿತಿಗಳನ್ನೂ ನೀಡುವ ನಿರೀಕ್ಷೆ ಇದೆ.