ಮಧ್ಯಮ ವರ್ಗದ ನೋವು ನಲಿವಿನ ಕತೆ ಹೇಳಲು “ಮಿಡಲ್ ಕ್ಲಾಸ್ ರಾಮಾಯಣ” ರೆಡಿ

Date:

  • ಮಧ್ಯಮ ವರ್ಗದ ನೋವು ನಲಿವಿನ ಕತೆ ಹೇಳಲು “ಮಿಡಲ್ ಕ್ಲಾಸ್ ರಾಮಾಯಣ” ರೆಡಿ
  • ಮೋಕ್ಷಿತಾ ಪೈ, ವಿನು ಗೌಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ
  • ಜಯರಾಮ್ ಗಂಗಪ್ಪನಹಳ್ಳಿ ನಿರ್ಮಿಸಿದ್ದಾರೆ. ಧನುಷ್ ಗೌಡ ವಿ ನಿರ್ದೇಶಿಸಿದ್ದಾರೆ.

ಮಧ್ಯಮ ವರ್ಗದ ಜೀವನದ ಹೋರಾಟ, ನೋವು ನಲಿವಿನ ಕಥಾ ಹಂದರವಿರುವ ಹೊಸತೊಂದು ಚಿತ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಚಿತ್ರದ ಹೆಸರು “ಮಿಡಲ್ ಕ್ಲಾಸ್ ರಾಮಾಯಣ”. Middle Class Ramayana ಈ ಚಿತ್ರವನ್ನು ಅಂಜನಾದ್ರಿ ಪ್ರೊಡಕ್ಷನ್ಸ್ Anjanadri Productions ಮತ್ತು ವಾವ್ ಸ್ಟುಡಿಯೋಸ್ Wow Studios ಬ್ಯಾನರ್‌ಗಳ ಅಡಿಯಲ್ಲಿ ಜಯರಾಮ್ ಗಂಗಪ್ಪನಹಳ್ಳಿ Jayaram Gangappanahalli ನಿರ್ಮಿಸಿದ್ದಾರೆ. ಧನುಷ್ ಗೌಡ ವಿ Dhanush Gowda V ನಿರ್ದೇಶಿಸಿದ್ದಾರೆ.

ಕನ್ನಡ, ತೆಲುಗು ಭಾಷೆಗಳಲ್ಲಿ ಚಿತ್ರ

ಕಿರುತೆರೆ ಮತ್ತು ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ Mokshitha Pai, ವಿನು ಗೌಡ Vinu Gowda ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಮಿಡಲ್ ಕ್ಲಾಸ್ ಬದುಕಿನ ಜೊತೆಗೆ ಪ್ರೀತಿ ಮದುವೆಯ ಸೆಂಟಿಮೆಂಟ್ ಕೂಡ ಇರಲಿದೆ. ಮಿಡಲ್ ಕ್ಲಾಸ್ ರಾಮಾಯಣವನ್ನು ಕನ್ನಡ ಮತ್ತು ತೆಲುಗು ಎರಡರಲ್ಲೂ ಚಿತ್ರೀಕರಿಸಲಾಗಿದೆ, ಆದರೆ ಮೊದಲು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗಲಿದ್ದು ಬಳಿಕ ಬೇರೆಗಳಲ್ಲಿ ರಿಲೀಸ್ ಕಾಣಲಿದೆ.

ಕುಟುಂಬದವರೆಲ್ಲಾ ನೋಡಬಹುದಾದ ಮನರಂಜನಾ ಸಿನಿಮಾ

ನಾಯಕ ಕಪ್ಪು ಹುಡುಗಿಯನ್ನು ಯಾಕೆ ಮದುವೆಯಾದ, ಹಾಗೆ ಮದುವೆಯಾಗುವಾಗ ಏನೆಲ್ಲಾ ಘಟಿಸುತ್ತೆ ಎನ್ನುವುದನ್ನೂ “ಮಿಡಲ್ ಕ್ಲಾಸ್ ರಾಮಾಯಣ” ಹೇಳುತ್ತದೆ. ಚಿತ್ರದಲ್ಲಿ ಚಿಕ್ಕಬಳ್ಳಾಪುರದ ನಂದಿಯ ಹಿನ್ನೆಲೆಯನ್ನು ಕೂಡ ಹೇಳಲಾಗಿದೆಯಂತೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಗೊಂಡು ಕೇಳುಗರನ್ನು ರಂಜಿಸುತ್ತಿದೆ. ಸಿನಿಮಾ ಕೂಡ, ಕುಟುಂಬದವರೆಲ್ಲಾ ನೋಡಬಹುದಾದ ಮನರಂಜನಾ ಸಿನಿಮಾವಾಗಿರಲಿದೆ ಎನ್ನುತ್ತದೆ ಚಿತ್ರತಂಡ ಅಂದ ಹಾಗೆಚಿತ್ರದಲ್ಲಿ ಎಸ್ ನಾರಾಯಣ್, ವೀಣಾ ಸುಂದರ್, ಮಜಾಭಾರತ್ ಜಗಪ್ಪ, ಯುಕ್ತ ಪೆರ್ವಿ ಮತ್ತಿತರರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್ ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ...

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು “ನಾನು ಮತ್ತು ಗುಂಡ 2”...