- ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟ ಉಪ್ಪಿ ನಿರ್ದೇಶನದ UI ಸಿನಿಮಾ.!
- ಬುಕ್ ಮೈ ಶೋ ನಲ್ಲಿ ದಾಖಲೆಯ ಟಿಕೆಟ್ ಸೇಲ್
ಖ್ಯಾತ ನಟ-ನಿರ್ದೇಶಕ ಉಪೇಂದ್ರ ಅವರ ಬಹುನಿರೀಕ್ಷಿತ UI ಸಿನಿಮಾ ಬಿಡುಗಡೆಯಾಗಿದೆ. ಜನರಿಂದ ಸಿನಿಮಾಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಮಂದಿರಗಳಿಗೆ ಜನರು ನೂಕು ನಗುತ್ತಿದ್ದಾರೆ. ಉಪೇಂದ್ರ ಸಿನಿಮಾ ಅಂದ್ರೆ ಬುದ್ದಿವಂತರಿಗೆ ಮಾತ್ರ ಎಂಬ ಟ್ಯಾಗ್‌ಲೈನ್ ಅಲಿಖಿತವಾಗಿ ಸೇರಿಕೊಂಡಿರುತ್ತದೆ. ಉಪೇಂದ್ರ ಅವರು ಮೊದಲಿನಿಂದಲೂ ಸ್ವಲ್ಪ ಕಗ್ಗಂಟಾದ ಸಿನಿಮಾಗಳನ್ನೇ ನಿರ್ಮಿಸುತ್ತಾರೆ. ಸುಮಾರು 9 ವರ್ಷಗಳ ನಂತರ ಉಪೇಂದ್ರ ಅವರ ನಿರ್ದೇಶನದ ಈ ಸಿನಿಮಾ ಬಗ್ಗೆ ಭಾರೀ ಕುತೂಹಲ ವ್ಯಕ್ತವಾಗಿದೆ.
400 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಬೆಳಗ್ಗೆ 6 ರಿಂದಲೇ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಬಾರಿ ಮೆಚ್ಚುಗೆ;
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಸಿನಿಮಾವನ್ನ ಅನೇಕರು ಮೆಚ್ಚಿಕೊಂಡು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬುಕ್ ಮೈ ಶೋ ನಲ್ಲಿ ದಾಖಲೆಯ ಟಿಕೆಟ್ ಸೇಲ್;
ಇನ್ನೂ ಬುಕ್ ಮೈ ಶೋ ಆಪ್ ನಲ್ಲಿ ಹೊಸ ಇತಿಹಾಸ ಬರೆದ UI ಸಿನಿಮಾ ಬುಕ್ಕಿಂಗ್ ನಲ್ಲಿ ದಾಖಲೆಯ ಟಕೆಟ್ ಸೇಲ್ ಆಗುವ ಮೂಲಕ ಭಾರಿ ಸುದ್ದಿ ಮಾಡಿದೆ.