- ಆಕ್ಷನ್ ಥ್ರಿಲ್ಲರ್ ಚಿತ್ರ “ಮದರಾಸಿ” ಸೆಪ್ಟೆಂಬರ್ 5 ಕ್ಕೆ ಅದ್ದೂರಿ ತೆರೆಗೆ
- ಬಹುಭಾಷೆಯಲ್ಲಿ ಸದ್ದು ಮಾಡಲಿದೆ ರೋಚಕ ಚಿತ್ರ
- ಚೆನ್ನೈನ ವಿಭಿನ್ನ ಕಥಾ ಕಹಾನಿ
ಆಕ್ಷನ್ ಥ್ರಿಲ್ಲರ್ ಚಿತ್ರ “ಮದರಾಸಿ” ಸೆಪ್ಟೆಂಬರ್ 5 ಕ್ಕೆ ರಿಲೀಸಾಗುತ್ತಿದೆ. ಎ.ಆರ್. ಮುರುಗದಾಸ್ A.R. Murugadasan ಆಕ್ಷನ್ ಕಟ್ ಹೇಳಿರುವ, ಶಿವಕಾರ್ತಿಕೇಯನ್ Shivakarthikeyan ನಾಯಕರಾಗಿ, ಕನ್ನಡತಿ ರುಕ್ಮಿಣಿ ವಸಂತ್ Rukmini Vasanth ನಾಯಕಿಯಾಗಿ ನಟಿಸಿರುವ “ಮದರಾಸಿ” Madarasi ಬಹುಭಾಷೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರವಾಗಿದೆ.
ರೋಚಕ ಥ್ರಿಲ್ಲಿಂಗ್ ಎಲಿಮೆಂಟ್ಸ್ ಚಿತ್ರ
ರೋಚಕ ಥ್ರಿಲ್ಲಿಂಗ್ ಎಲಿಮೆಂಟ್ಸ್ ಈ ಚಿತ್ರದಲ್ಲಿವೆ. ಭರ್ಜರಿ ಆ್ಯಕ್ಷನ್ ಗಳೂ ಕೂಡ ಈ ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದಲ್ಲಿ ಚೆನ್ನೈನ ಕಥೆಯಿದೆ. ಚೆನ್ನೈಗೆ ಮೊದಲು ಮದ್ರಾಸ್ ಅಂತಲೇ ಕರೆಯುತ್ತಿದ್ದರು. ಅದೇ ಹೆಸರನ್ನ ಇಲ್ಲಿಟ್ಟಿದ್ದಾರೆ. ಈ ಮೂಲಕ ಮದರಾಸಿ ಒಬ್ಬನ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ಆ್ಯಕ್ಷನ್ ಹೀರೋ ವಿದ್ಯುತ್ ಜಾಮ್ವಾಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡತಿ ರುಕ್ಮಿಣಿ ವಸಂತ್ ಚೆನ್ನೈನ ಸಾಮಾನ್ಯ ಹೆಣ್ಣುಮಗಳು ಅನಿಸೋ ರೀತಿಯ ಪಾತ್ರವನ್ನೆ ಮಾಡಿದ್ದಾರೆ. ಜೊತೆಗೆ ಈ ಪಾತ್ರಕ್ಕೆ ರಕ್ತಸಿಕ್ತ ದೃಶ್ಯಗಳ ಸ್ಪರ್ಶವೂ ಇದೆ ಎನ್ನಲಾಗಿದೆ. ಚಿತ್ರದಲ್ಲಿ ಬಂದೂಕು ಮತ್ತು ಸ್ಫೋಟ ಸದ್ದೇ ಜೋರಾಗಿದೆ ಎನ್ನಲಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ನಲ್ಲೂ “ಮದರಾಸಿ” ಚಿತ್ರದ ಆಕ್ಷನ್ ಅಬ್ಬರ ಕಣ್ಣಿಗೆ ಕಟ್ಟುವಂತಿದೆ. ಬಿಜು ಮೆನನ್, ಶಬೀರ್ ಕಲ್ಲರಕ್ಕಲ್, ವಿಕ್ರಾಂತ್ ತಾರಾಬಳಗದಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ಶ್ರೀ ಲಕ್ಷ್ಮೀ ಮೂವೀಸ್ ನಿರ್ಮಾಣದ ಮದರಾಸಿ ಸಿನಿಮಾಗೆ ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್, ಸುದೀಪ್ ಎಲಾಮನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.


