- ಕರಾವಳಿ ಸ್ವಾದದ ಕತೆ ಹೇಳಲು ಬರುತ್ತಿದೆ “ದಿಂಸೋಲ್”
- ತೆರೆಯ ಮೇಲೆ ಬರಲಿರುವ ಶಿವರಾತ್ರಿಯ ವಿಭಿನ್ನ ಆಚರಣೆ
- ಕುತೂಹಲ ಹೆಚ್ಚಿಸಿದೆ ಅದ್ದೂರಿ ಮೋಷನ್ ಪೋಸ್ಟರ್
ಕರಾವಳಿ ಸಂಸ್ಕೃತಿಯ ಸೊಡಗನ್ನು ಸಾರುವ ಅನೇಕ ಸಿನಿಮಾಗಳು ಆಗಾಗ ಬರುತ್ತಲೇ ಇರುತ್ತವೆ. ಇದೀಗ ಅಂತದ್ದೇ ಸೊಗಡಿರುವ ಸಿನಿಮಾವೊಂದು ತಯಾರಾಗುತ್ತಿದೆ. ಈ ಸಿನಿಮಾದ ಹೆಸರು “ದಿಂಸೋಲ್” Dimsol. ಕರಾವಳಿಯ ಕತೆ ಹೇಳೋ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಖತ್ ಟ್ರೆಂಡಿಂಗ್ ಆಗಿದೆ. ಈ ಸಿನಿಮಾಗೆ ನಾಗೇಂದ್ರ ಗಾಣಿಗ Nagendra ganiga ಅವರ ನಿರ್ದೇಶನವಿದೆ. ರಥಾಕಿರಣ್ Rathakiran ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ನಾಯಕಿಯಾಗಿ ಶಿವಾನಿ ರೈ Shivani Rai ನಟಿಸುತ್ತಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಕೇಶ್ ಅಡಿಗ Rakesh Adiga ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು Rangayana Raghu, ಮಾನಸಿ ಸುಧೀರ್ Manasi Sudhir, ಕಿರುತೆರೆ ನಟಿ ಅಮೃತಾ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.
ಶಿವರಾತ್ರಿ ಆಚರಣೆಯ ವಿಭಿನ್ನ ಕತೆ
ದಿಂಸೋಲ್ ಎಂದರೆ ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಅಚರಣೆಯಾಗಿದೆ. ಕರಾವಳಿಯ ಎಲ್ಲಾ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ದೃಶ್ಯ ರೂಪಕ್ಕೆ ತರುತ್ತಿದೆ ಚಿತ್ರತಂಡ. ದೇವಿ ರಕ್ತೇಶ್ವರಿ ಇರುವ ಮೋಷನ್ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಅಲ್ಲದೆ ಈ ಸಿನಿಮಾ ದೇವರ ಬಗ್ಗೆ ಇದೆ ಎನ್ನುವುದು ಈ ಪೋಸ್ಟರ್ ನೋಡಿದ್ರೆ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹಾಗಾಗಿ ಚಿತ್ರದ ಕುರಿತ ಕುತೂಹಲ ಜಾಸ್ತಿಯಾಗಿದೆ.
ಸದ್ಯ ಸಿನಿಮಾ ತಂಡ ಶೂಟಿಂಗ್ ಪ್ರಾರಂಭ ಮಾಡಲಿದೆ. ಕರಾವಳಿಯ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಈ ಚಿತ್ರ ಸಚಿನ್ ವಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಅವರ ಕ್ಯಾಮರಾ ವರ್ಕ್ ಇದೆ, ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಸದ್ಯದಲ್ಲೇ ಇನ್ನಷ್ಟು ಅಪ್ಡೇಟ್ ಗಳನ್ನು ಚಿತ್ರತಂಡ ನೀಡುವ ನಿರೀಕ್ಷೆ ಇದೆ.