- ಜೊತೆಯಾಗಿ ಪ್ರೇಕ್ಷಕರ ಹಿತವಾಗಿಸಲು ಬರ್ತಿದೆ “ಜೊತೆಯಾಗಿ ಹಿತವಾಗಿ”
- ಶುದ್ಧ ಪ್ರೀತಿಯ ಸೆಂಟಿಮೆಂಟ್ ಇರೋ ಸುಂದರ ಪ್ರೇಮ ಕತೆ
- ಹಾಡಿನಲ್ಲೂ ಮೋಡಿ ಮಾಡಿದ ಚಿತ್ರ
ಶುದ್ಧ ಪ್ರೀತಿಯ ಕತೆಯನ್ನು ಇಷ್ಟಪಡುವ ಪ್ರೇಕ್ಷಕರ ವರ್ಗವೇ ಸ್ಯಾಂಡಲ್ ವುಡ್ ನಲ್ಲಿದೆ. ಇಂತಹ ಚಿತ್ರಕತೆ, ಹರೆಯದ ಯುವಮನಸ್ಸುಗಳ ಹೃದಯವನ್ನು ಮೀಟುತ್ತದೆ. ಅಂತದ್ದೇ ಕತೆಯಿರುವ “ಜೊತೆಯಾಗಿ ಹಿತವಾಗಿ” Jotheyagi Hithavagi ಎನ್ನುವ ಚಿತ್ರವೊಂದು ಇದೇ ಸೆಪ್ಟೆಂಬರ್ 19ಕ್ಕೆ ತೆರೆಗೆ ಬರ್ತಿದೆ. ಅಪ್ಪಟ ಲವ್ ಮತ್ತು ಸೆಂಟಿಮೆಂಟ್ ಸಿನಿಮಾ ಇದಾಗಿದ್ದು ಶ್ರೀ ರತ್ನ ಫಿಲಂ ಕಂಪನಿ Shri Rathna Film Company ನಿರ್ಮಿಸಿರುವ ಈ ಚಿತ್ರವನ್ನು ಎ ಆರ್ ಕೃಷ್ಣ A R Krishna ನಿರ್ದೇಶಿಸಿದ್ದಾರೆ. ಅಗಸ್ತ್ಯ Agasthya ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಸುವಾರ್ತಾ Suvartha ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡತೊಡಗಿದೆ.
ಬೆಳಗಾವಿಯಲ್ಲಿ ಮಲೆನಾಡ ಫೀಲ್
ಚಿತ್ರದಲ್ಲಿ ಬೆಳಗಾವಿಯನ್ನ ಮಲೆನಾಡಿನ ರೀತಿಯಲ್ಲಿ ತೋರಿಸಲಾಗಿದೆಯಂತೆ. ಮನೆಯಲ್ಲಿ ತುಂಬಾ ಫ್ರೀಡಂ ಕೊಟ್ಟರೆ ಏನಾಗುತ್ತೆ, ತೀರಾ ನಿರ್ಬಂಧ ಇದ್ದಾಗ ಏನಾಗಬಹುದು ಎಂಬುದನ್ನ ಚಿತ್ರದಲ್ಲಿ ಅದ್ಭುತವಾಗಿ ಹೆಣೆಯಲಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಚಿತ್ರದಲ್ಲಿ ಅಪ್ಪನ ಪಾತ್ರಕ್ಕೆ ಆನಂದ್ ನೀನಾಸಂ ಜೀವ ತುಂಬಿದ್ದು, ತಾರಾಗಣದಲ್ಲಿ ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ, ವಿನಾಯಕ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ “ಅರೆರೆರೆ” ಎನ್ನುವ ಹಾಡಿಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಚಿತ್ರಕ್ಕೆ ಜೈಪಾಲ್ ಸಂಗೀತ ನೀಡಿದ್ದು, ಈ ಚಿತ್ರದ ಸಾಹಿತ್ಯ, ಎಡಿಟಿಂಗ್, ಛಾಯಾಗ್ರಹಣವನ್ನು ನಿರ್ದೇಶಕರಾದ ಎ ಆರ್ ಕೃಷ್ಣ ಅವರೇ ನಿರ್ವಹಿಸಿದ್ದಾರೆ. ಹಾಡಿನಲ್ಲೇ ಚಿತ್ರ ಈಗಾಗಲೇ ಗಮನಸೆಳೆದಿರುವುದರಿಂದ ಚಿತ್ರದ ಬಗ್ಗೆಯೂ ಪ್ರೇಕ್ಷಕರು ಕುತೂಹಲ ತಾಳಿದ್ದಾರೆ.