- ರೊಮ್ಯಾಂಟಿಕ್, ಥ್ರಿಲ್ಲರ್ “ಕಲ್ಟ್ ” ಸೆಪ್ಟೆಂಬರ್ 19 ಕ್ಕೆ ಅದ್ದೂರಿ ಬಿಡುಗಡೆ
- ಹಾಡಿನಲ್ಲೂ ಸದ್ದು ಮಾಡಿದ “ಕಲ್ಟ್ ”
- ಆಕ್ಷನ್-ಪ್ರೀತಿಯ ವಿಭಿನ್ನ ಕತೆ ಹೇಳುವ ಸಿನಿಮಾ
ರೊಮ್ಯಾಂಟಿಕ್, ಥ್ರಿಲ್ಲರ್ ಕಥಾಹಂದರವಿರುವ “ಕಲ್ಟ್” Cult ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರದ ಬಹುನಿರೀಕ್ಷಿತ ಹಾಡು “ಅಯ್ಯೋ ಶಿವನೇ” Ayyo Shivane ಹಾಡು ಕೂಡ ರಿಲೀಸಾಗಿ ಸಖತ್ ಸದ್ದು ಮಾಡತೊಡಗಿದೆ. ಝೈದ್ ಖಾನ್ Zaid Khan, ರಚಿತಾ ರಾಮ್ Rachitha Ram ಮತ್ತು ಮಲೈಕಾ ವಸುಪಾಲ್ Malaika Vasupal ನಟನೆಯ ‘ಕಲ್ಟ್’ ಚಿತ್ರದಲ್ಲಿ ಆ್ಯಕ್ಷನ್-ರೊಮ್ಯಾಂಟಿಕ್ ಕತೆಯ ಜೊತೆ ಸೆಂಟಿಮೆಂಟ್ ಕೂಡ ಇದೆ. ಚಿತ್ರಕ್ಕೆ ಅನಿಲ್ ಕುಮಾರ್ Anil Kumar ಆಕ್ಷನ್ ಕಟ್ ಹೇಳಿದ್ದು, ಕೆ.ವಿ.ಎನ್ ಪ್ರೊಡಕ್ಷನ್ಸ್ KVN Productions ಅರ್ಪಿಸುವ, ಲೋಕಿ ಸಿನಿಮಾಸ್ Loki Cinemas ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಈ ಚಿತ್ರವನ್ನು ಹೊಸ ಪೀಳಿಗೆಗಾಗಿ ವಿನ್ಯಾಸಗೊಳಿಸಲಾಗಿದೆ. ಹೊಸ ದೃಶ್ಯ ಶೈಲಿಯೊಂದಿಗೆ ಆ್ಯಕ್ಷನ್ ಮತ್ತು ಪ್ರಣಯವನ್ನು ಮಿಶ್ರಣ ಮಾಡಲಾಗಿದೆ. ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹಣ, ಕೆಎಂ ಪ್ರಕಾಶ್ ಅವರ ಸಂಕಲನ ಮತ್ತು ಸಂತೋಷ್ ಶೇಖರ್ ಅವರ ನೃತ್ಯ ಸಂಯೋಜನೆ ಇದೆ. ರವಿವರ್ಮ ಅವರ ಸಾಹಸ ವಿನ್ಯಾಸವಿದೆ.
ಸದ್ದು ಮಾಡಿದ ‘ಅಯ್ಯೋ ಶಿವನೇ’
“ಕಲ್ಟ್ ” ಚಿತ್ರದ “ಅಯ್ಯೋ ಶಿವನೇ” ಹಾಡು ಚಿತ್ರದ ಕುರಿತು ಇನ್ನಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಈ ಹಾಡಿಗೆ ಅರ್ಜುನ್ ಜನ್ಯ Arjun Janya ಸಂಗೀತ ಸಂಯೋಜಿಸಿದ್ದು, ನಿರ್ದೇಶಕ ಅನಿಲ್ ಕುಮಾರ್ ಅವರೇ ಸಾಹಿತ್ಯ ಬರೆದಿದ್ದಾರೆ. ‘ಅಯ್ಯೋ ಶಿವನೇ’ ಹಾಡನ್ನು ಕರ್ನಾಟಕದ ವಿವಿಧ ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಶ್ರೀಮಂತ ಸ್ಥಳಗಳಾದ ಉಡುಪಿ, ಮಂಗಳೂರು, ಶ್ರೀರಂಗಪಟ್ಟಣ, ಚಿತ್ರದುರ್ಗ ಮತ್ತು ವಾಣಿ ವಿಲಾಸ ಸಾಗರ ಅಣೆಕಟ್ಟಿನ ಮೂಲಕ ಸಾಗುವ ಮ್ಯೂಸಿಕಲ್ ಪ್ರಯಾಣವಾಗಿದೆ. ಜಸ್ಕರನ್ ಸಿಂಗ್ Jaskaran Singh ಮತ್ತು ಪೃಥ್ವಿ ಭಟ್ Prithvi Bhat ಈ ಹಾಡಿಗೆ ಧ್ವನಿಯಾಗಿದ್ದಾರೆ. “ಕಲ್ಟ್” ಸೆಪ್ಟೆಂಬರ್ 19 ಕ್ಕೆ ಎಂಟ್ರಿ ಕೊಡಲಿದೆ.