- ಒಂದಷ್ಟು ಕಾಮಿಡಿ, ಸೆಂಟಿಮೆಂಟ್ ಕತೆಯಿರೋ “ಪೀಕಬೂ” ಚಿತ್ರದ ಫಸ್ಟ್ ಲುಕ್ ಟೀಸರ್ ಸದ್ದು
- ಸದ್ಯದಲ್ಲೇ ಶುರುವಾಗಲಿದೆ “ಪೀಕಬೂ” ಶೂಟಿಂಗ್
- ಒಂದೊಳ್ಳೆ ಮೆಸೇಜ್ ಕೊಡಲಿದೆ ಈ ಕಮರ್ಷಿಯಲ್ ಮೂವಿ
ಒಂದಷ್ಟು ಕಾಮಿಡಿ, ಸೆಂಟಿಮೆಂಟ್ ಮತ್ತು ರೊಮ್ಯಾಂಟಿಕ್ ಫೀಲ್ ಇರುವ “ಪೀಕಬೂ” Pikaboo ಎನ್ನುವ ಹೊಸ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಮಂಜು ಸ್ವರಾಜ್ Manju Swaraj ಆಕ್ಷನ್ ಕಟ್ ಹೇಳಿರುವ ಸಿನಿಮಾ ಇದಾಗಿದ್ದು ಶ್ರೀ ಕೆಂಚಾಂಬಾ ಫಿಲಂಸ್ Kenchamba Films ಬ್ಯಾನರ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ Ganesh Kenchamba ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ Amulya ಅವರು ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದು, ಚಿತ್ರದ ಕತೆಯಲ್ಲಿ ನಾಯಕಿಯದ್ದೇ ಬಹುಮುಖ್ಯ ಭಾಗವಿದೆ. ಆದರೆ ಚಿತ್ರದ ಹೀರೋ ಯಾರು ಎನ್ನುವುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ.
ವಿಭಿನ್ನ ಟೈಟಲ್, ಮೆಸೆಜ್ ಕೊಡೋ ಸ್ಟೋರಿ
“ಪೀಕಬೂ” ಎನ್ನುವ ಹೆಸರು ವಿಭಿನ್ನವಾಗಿದ್ದು ಪ್ರೇಕ್ಷಕರಿಗೆ ಕುತೂಹಲ ಮೂಡಿಸುವಂತಿದೆ. ಪೀಕಬೂ ಎಂದರೆ ಮಕ್ಕಳನ್ನ ನಗಿಸಲು ಬಳಸುವ ಪದ ಎಂದು ಚಿತ್ರತಂಡ ಹೇಳಿಕೊಂಡಿದೆ. ಜೊತೆಗೆ ಒಂದೊಳ್ಳೆ ಮೆಸೇಜ್ ಹಾಗೂ ಕಮರ್ಷಿಯಲ್ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ ಎಂದಿದೆ ಚಿತ್ರತಂಡ. ಚಿತ್ರದ ಛಾಯಾಗ್ರಹಣವನ್ನು ಸುರೇಶ್ ಬಾಬು ಬಿ. ಅವರು ನಿರ್ವಹಿಸಿದ್ದು, ವೀರ್ ಸಮರ್ಥ್ ಮತ್ತು ಶ್ರೀಧರ್ ಸಂಗೀತ ನಿರ್ದೇಶನವಿದೆ. ಅಮರ್ ಅವರ ಕಲಾ ನಿರ್ದೇಶನ, ಎನ್. ಎಂ. ವಿಶ್ವ ಸಂಕಲನ, ವಿ. ನಾಗೇಂದ್ರ ಕೊರಿಯೋಗ್ರಫಿ ಇದೆ. ಫಸ್ಟ್ ಲುಕ್ ಟೀಸರ್ ನಲ್ಲಿ ಚಿತ್ರದ ನಟಿ ಅಮೂಲ್ಯ ಸಖತ್ತಾಗಿ ಡ್ಯಾನ್ಸ್ ಮಾಡುತ್ತಾ ಗಮನ ಸೆಳೆದಿದ್ದಾರೆ. ಸದ್ಯ ಹೀರೋಯಿನ್ ಎಂಟ್ರಿ ಸಲುವಾಗಿ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡದವರು, ಹೀರೋ ಯಾರು? ತಾರಾಗಣದಲ್ಲಿ ಯಾರ್ಯಾರು ಇರಲಿದ್ದಾರೆ ಎನ್ನುವ ಅಪ್ಡೇಟ್ ಗಳನ್ನು ಶೀಘ್ರದಲ್ಲಿಯೇ ನೀಡುವ ನಿರೀಕ್ಷೆ ಇದೆ.