- ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”
- ಲವ್ ಕಮ್ ಆಕ್ಷನ್ ಕಾಮಿಡಿ ಜಾನರ್ ಚಿತ್ರ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”
- ನವೆಂಬರ್ ನಲ್ಲಿ ಸಕ್ಕರೆಯಂತಹ ಸಿಹಿ ಕೊಡಲಿದೆ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”
ಸಕ್ಕರೆ ನಾಡು ಮಂಡ್ಯದ ಭಾಷೆಯ ಸವಿಯಿರುವ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” Gajendra Care Of Doddarasinakere ಎನ್ನುವ ಸಿನಿಮಾ ತನ್ನ ಶೂಟಿಂಗ್ ನ್ನು ಯಶಸ್ವಿಯಾಗಿ ಪೂರೈಸಿದ್ದು ನವೆಂಬರ್ ವೇಳೆಗೆ ಥಿಯೇಟರ್ ಗೆ ಎಂಟ್ರಿ ಕೊಡಲಿದೆ. ಅಂಬರೀಶ್ Ambarish ಅಭಿಮಾನಿ ಸುಬ್ರಮಣ್ಯ(ಅಂಬಿ ಸುಬ್ಬಣ್ಣ) Subramanya Ambi Subbanna ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ತಮ್ಮ ಮಗ ಅಭಿಷೇಕ್ ಸುಬ್ಬಣ್ಣ Abhishek Subbanna ಅವರನ್ನು ಹೀರೋ ಆಗಿ ಅಖಾಡಕ್ಕೆ ಇಳಿಸಿದ್ದಾರೆ ಸುಬ್ರಮಣ್ಯ ಅವರು. ಚಿತ್ರದಲ್ಲಿ ಅಭಿಷೇಕ್ ಸುಬ್ಬಣ್ಣ ಅವರಿಗೆ ನಾಯಕಿಯರಾಗಿ ವೇದ Veda ಹಾಗೂ ನಿರೀಕ್ಷಾ Nireeksha ನಟಿಸಿದ್ದಾರೆ.
ಹಳ್ಳಿಯ ಸೊಗಡಿನ ಕ್ರಿಯಾಶೀಲ ಚಿತ್ರ
“ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಹಳ್ಳಿಯೊಂದರಲ್ಲಿ ನಡೆಯುವ ಕಥೆಯಾಗಿದ್ದು ಊರ ಗೌಡನೊಬ್ಬ ಹಳ್ಳಿಯ ಮುಗ್ಧ ಜನರಿಗೆ ಬಡ್ಡಿಗೆ ಸಾಲಕೊಟ್ಟು ಅವರು ಹಿಂದಿರುಗಿಸದಿದ್ದಾಗ ಅವರ ಆಸ್ತಿಯನ್ನು ತನ್ನವಶ ಮಾಡಿಕೊಳ್ಳುತ್ತಾನೆ. ಆತನ ಮಗ ಕೂಡ ಒಬ್ಬ ರೌಡಿಯೇ. ಊರ ಹೆಣ್ಣುಮಕ್ಕಳಿಗೆ ತೊಂದರೆ ಕೊಡುವುದೇ ಆತನ ಕೆಲಸ. ಇನ್ನುಆತನ ಮಗಳೂ ಸಹ ಬಜಾರಿಯೇ. ಗೌಡನ ಭಯದಿಂದ ಮಗನನ್ನು ಸಿಟಿಗೆ ಕಳಿಸಿದ್ದ ತಾಯಿ ಜನರ ಕೋರಿಕೆಯ ಮೇರೆಗೆ ವಾಪಸ್ ಕರೆಸಿಕೊಳ್ಳುತ್ತಾಳೆ ಮುಂದೇನಾಗುತ್ತದೆ, ಚಿತ್ರದಲ್ಲಿ ಇನ್ನೂ ಯಾವೆಲ್ಲಾ ವಿಶೇಷ ಅಂಶಗಳಿವೆ ಎಂಬುದನ್ನು ನೋಡಲು ನವೆಂಬರ್ ರೆಗೂ ಕಾಯಬೇಕಿದೆ. ಒಟ್ಟಾರೆಯಾಗಿ ಲವ್ ಕಮ್ ಆಕ್ಷನ್ ಕಾಮಿಡಿ ಜಾನರ್ ನಲ್ಲಿರುವ ಕ್ರಿಯಾಶೀಲ ಚಿತ್ರ ಇದಾಗಿದೆ. ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಚಿತ್ರ ತನ್ನ ಶೂಟಿಂಗ್ ನಡೆಸಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಕೂಡ ಕಂಪ್ಲೀಟ್ ಆಗಿದೆ.
ಚಿತ್ರದ ತಾರಾಗಣದಲ್ಲಿ ವೇದ, ನಿರೀಕ್ಷಾ, ವಿನಯ್ ಸುಬ್ಬಣ್ಣ, ತಿಮ್ಮರಾಜು, ಶ್ರೀಭೈರವಿ ಅಮ್ಮ, ಸಂತೋಷ್, ಗೋಲ್ಡ್ ಸುರೇಶ್, ಮಹದೇವು, ಶಿವಣ್ಣ, ಅನಂತು, ರಾಜೇಶ್ ಸುನಿಲ್, ಮಂಜುಳ ರುದ್ರೇಗೌಡ, ಕುಮಾರ್, ಲತಾಶೇಖರಿ, ತ್ರಿಶಾ, ಪರಮಶಿವ ಮೊದಲಾದ ಕಲಾವಿದರಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಮನೋರಾವ್ ಮೈಸೂರು ಸಂಗೀತ ಸಂಯೋಜನೆ, ರಾವುಲ್ ಶೇಖರ್ ಛಾಯಾಗ್ರಹಣವಿದೆ. ಕಮಲಮ್ಮ ಕಂಬೈನ್ಸ್ ಮೂಲಕ ಸುಬ್ರಮಣ್ಯ ಅವರೇ ಈ ಚಿತ್ರದ ಕಥೆ ಬರೆದು ನಿರ್ಮಾಣದ ಜತೆ ನಿರ್ದೇಶನ ಕೂಡ ಮಾಡಿದ್ದಾರೆ. ಕಿಶೋರ್ ರಾಜ್ ಅವರ ಸಂಭಾಷಣೆ, ಮಹೇಂದ್ರ ಅವರ ನೃತ್ಯನಿರ್ದೇಶನ, ಬಾಬು ಪ್ರಕಾಶ್, ಜೇಮ್ಸ್, ಸುಬ್ರಮಣ್ಯ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಮಂಡ್ಯದ ಸೊಗಡಿರುವ ಚಿತ್ರವಾದ್ದರಿಂದ ಸಕ್ಕರೆಯ ಸವಿ ಚಿತ್ರಕ್ಕೂ ಇರಬಹುದು ಎನ್ನುವುದು ಪ್ರೇಕ್ಷಕರ ನಿರೀಕ್ಷೆಯಾಗಿದೆ.