ಕೋಟೆ ನಾಡಿನಲ್ಲಿ ನಡೆಯೋ ಕತೆ ಹೇಳಲು ಸಜ್ಜಾದ ” ಚಾಮಯ್ಯ ಸನ್ ಆಫ್ ರಾಮಾಚಾರಿ”

Date:

  • ಕೋಟೆ ನಾಡಿನಲ್ಲಿ ನಡೆಯೋ ಕತೆ ಹೇಳಲು ಸಜ್ಜಾದ ” ಚಾಮಯ್ಯ ಸನ್ ಆಫ್ ರಾಮಾಚಾರಿ”
  • ಸಾಹಸಸಿಂಹ ವಿಷ್ಣುವರ್ಧನ್ ನೆನಪನ್ನು ಕಟ್ಟಿಕೊಡೋ ಸ್ಪೆಷಲ್ ಚಿತ್ರ
  • ಕರ್ನಾಟಕದ ಐತಿಹಾಸಿಕ ತಾಣಗಳ ದೃಶ್ಯ ವೈಭವವಿರೋ ಮೂವಿ

ಚಿತ್ರದುರ್ಗದ ಚರಿತ್ರೆಯ ಸಾರಾಂಶ ಇಟ್ಟುಕೊಂಡು ಹೆಣೆಯಲಾದ ”ಚಾಮಯ್ಯ ಸನ್ ಆಫ್ ರಾಮಾಚಾರಿ” Chamayya S/o Ramachari ಚಿತ್ರ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿದೆ. ಜೋಳಿಗೆ ಸಿನಿಮಾಸ್ Jolige Cinemas ಬ್ಯಾನರ್ ಅಡಿಯಲ್ಲಿ ರಾಧಾಕೃಷ ಪಲ್ಲಕ್ಕಿ Radhakrishna Pallakki ಅವರು ಬರವಣಿಗೆ, ನಿರ್ದೇಶನ ಮತ್ತು ಒಂದು ಮಹತ್ವದ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಅವರೇ ಬಂಡವಾಳ ಹೂಡಿದ್ದು, ಗೌತಮ್ ಪಲ್ಲಕ್ಕಿ Gautham Pallakki ಮತ್ತು ವಿ.ಗೋವಿಂದರಾಜು V Govindaraju ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ’ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ. ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರದ ಬಿಡುಗಡೆಗಳನ್ನು ಮುಂದೂಡಲಾಗಿದೆ.

ಐತಿಹಾಸಿಕ ಪ್ರದೇಶಗಳಲ್ಲಿ ಶೂಟಿಂಗ್:

ಚಿತ್ರದಲ್ಲಿ ಮಹಾನ್ ನಾಯಕರ ಕೋಟೆಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಹಾಗೂ ಇವರೆಲ್ಲರ ಚರಿತ್ರೆಗಳು ಸಣ್ಣದಾಗಿ ಬಂದು ಹೋಗುತ್ತವೆ. ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಜಲೀಲ್ (ಅಂಬರೀಷ್) ಮಗನಾಗಿ ಚೋಟಾ ಜಲೀಲ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ಕೊಲೆ ತನಿಖೆ ಮಾಡುವ ನಿರ್ದೇಶಕರು ನಿಭಾಯಿಸಿದ್ದಾರೆ. ಚಿತ್ರದಲ್ಲಿ ಪ್ರಮುಖವಾಗಿರುವ ರಾಮಾಚಾರಿ ಪಾತ್ರವನ್ನು ಜಯಶ್ರೀರಾಜ್ ನಿರ್ವಹಿಸಿದ್ದಾರೆ. ಉಳಿದಂತೆ ಪತ್ನಿಯಾಗಿ ಪ್ರೇಮಾಗೌಡ, ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರೀ, ಮಗಳಾಗಿ ಚೈತ್ರಾ, ಪ್ರಿನ್ಸಿಪಾಲ್ ಆಗಿ ಪ್ರಕಾಶ್‌ಅರಸು ಬಣ್ಣ ಹಚ್ಚಿದ್ದಾರೆ. ಜೊತೆಗೆ ಸೀನೂ ಮಾರ್ಕಳಿ, ವರಪ್ರಸಾದ ಶರ್ಮ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಹಾಗೂ ವೃತ್ತಿ ರಂಗಕರ್ಮಿಗಳು ಚಿತ್ರದ ತಾರಾಗಣದಲ್ಲಿದ್ದಾರೆ. ಡಾ.ಕುಮಾರಚಲ್ಯಾ ಮತ್ತು ಹೈತೋ ಸಾಹಿತ್ಯದ ಗಜಲ್ ಗೀತೆಗಳಿಗೆ ಸ್ಯಾಂ ಸಂಗೀತ ಸಂಯೋಜಿಸಿದ್ದಾರೆ. ಹಿನ್ನಲೆ ಶಬ್ದ ಪಳನಿಸೇನಾಪತಿ, ಛಾಯಾಗ್ರಹಣ ಎಂ.ಆರ್.ಸೀನು, ಎಸ್‌ಎಫ್‌ಎಕ್ಸ್ ಗೋಪಿ, ಸಂಕಲನ ಶಿವಕುಮಾರ್.ಎ ನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು ಅದ್ಬುತ ಸಿನಿಮ್ಯಾಟಿಕ್ ಟ್ರೈಲರ್...

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...