ದಸರಾ ಬಂದಾಗಲೆಲ್ಲಾ ಕಿವಿ ಇಂಪೇರಿಸುತ್ತೆ ಕನ್ನಡ ಚಿತ್ರದ ಈ ಮಧುರ ಹಾಡುಗಳು

Date:

  • ದಸರಾ ಬಂದಾಗಲೆಲ್ಲಾ ಕಿವಿ ಇಂಪೇರಿಸುತ್ತೆ ಕನ್ನಡ ಚಿತ್ರದ ಈ ಮಧುರ ಹಾಡುಗಳು
  • ದಸರೆಯ ವೈಭವ ಕಣ್ಣ ಮುಂದೆ ತರುವ ಮಧುರ ಸಂಗೀತ
  • ಹಾಡು ಹಳೆಯದಾದರೂ ದಸರೆಗೆ ನವನವೀನ

ಈಗ ಎಲ್ಲೆಲ್ಲೂ ಮೈಸೂರು ದಸರೆಯ Mysore Dasara ವೈಭವದ ಸುದ್ದಿಯೇ. ಈ ದಸರಾ ಬಂದಾಗ ಕೆಲವೊಂದು ಸಿನಿಮಾ ಹಾಡುಗಳು ಮತ್ತೆ ಮತ್ತೆ ನೆನಪಾಗುತ್ತೆ. ಕನ್ನಡ ಸಿನಿಮಾರಂಗದಲ್ಲೂ ದಸರಾವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವ, ನಮ್ಮ ಮೈಮನಗಳನ್ನು ಇಂಪೇರಿಸಿದ ಹಾಡುಗಳಿವೆ. ಬನ್ನಿ ಆ ಹಾಡುಗಳು ಯಾವುವು ಆ ಹಾಡಿನ ವಿಶೇಷತೆಗಳೇನು ಒಮ್ಮೆ ನೋಡೋಣ

ಮೈಸೂರು ದಸರಾ ಎಷ್ಟೊಂದು ಸುಂದರ

ಮೈಸೂರು ದಸರಾ ಎಷ್ಟೊಂದು ಸುಂದರ…ಚೆಲ್ಲಿದೆ ನಗೆಯಾ ಪನ್ನೀರಾ… ಈ ಹಾಡು, ದಸರಾ ಹಬ್ಬದ ಈ ಸಂದರ್ಭದಲ್ಲಿ ನೆನಪಾಗದೇ ಇರಲು ಸಾಧ್ಯವೇ ಇಲ್ಲ ಅಷ್ಟೊಂದು ಫೇಮಸ್ ಹಾಡಿದು. ಇದು ಡಾ. ರಾಜಕುಮಾರ್ Dr. Raj Kumar ಅಭಿನಯದ “ಕರುಳಿನ ಕರೆ” Karulina Kare ಚಿತ್ರದ ಹಾಡು. ಈ ಚಿತ್ರವನ್ನು ನಿರ್ದೇಶಿಸಿದ್ದು ಪುಟ್ಟಣ್ಣ ಕಣಗಾಲ್ Puttanna Kanagal ಅವರು. ಆರ್ ಎನ್ ಜಯಗೋಪಾಲ್ R N Jayagopal ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆ ಅದ್ಬುತವಾದ ಸಾಹಿತ್ಯಕ್ಕೆ ಪಿಬಿ ಶ್ರೀನಿವಾಸ್ P B Srinivas ಅವರ ಮೋಹಕ ಧ್ವನಿ ಜೊತೆಯಾಗಿದೆ. ಈ ಹಾಡು ಎಷ್ಟೊಂದು ಫೇಮಸ್ ಅಂದ್ರೆ 1970 ರಲ್ಲಿ ರಿಲೀಸಾಗಿ ಮೊಳಗಿದ ಈ ಹಾಡನ್ನು ಈಗಲೂ ದಸರಾ ಸಂದರ್ಭದಲ್ಲಿ ಗುನುಗುವವರಿದ್ದಾರೆ. ಈ ಹಾಡಿನಲ್ಲಿ ಚಾಮುಂಡಿ ದೇವಿ, ಮಹಿಷನ ಕತೆ ಸೇರಿದಂತೆ ಇಡೀ ನವರಾತ್ರಿಯ ಹಿನ್ನೆಲೆಯನ್ನು ನೀಡಲಾಗಿದ್ದು ಮೆರವಣಿಗೆಗಳಲ್ಲೂ ಈ ಹಾಡು ತೇಲಿಬರುತ್ತದೆ.

ದಸರಾ ಬೊಂಬೆ ನಿನ್ನನು ನೋಡಲು

ದಸರಾ ಬೊಂಬೆ ನಿನ್ನನು ನೋಡಲು ನಮ್ಮೂರಿಂದಾ ಬಂದೆ ಕಣೆ, ರಾಣಿ ಇಲ್ಲದ ಅರಮನೆ ಇಂದಾ
ಹೂವಿನ ಪಲ್ಲಕ್ಕಿ ತಂದೆ ಕಣೆ.. ಎಂದು ಶುರುವಾಗುವ ಈ ಹಾಡು, 1995 ರಲ್ಲಿ ಬಿಡುಗಡೆಯಾದ ರವಿಚಂದ್ರನ್ Ravichandran ಅಭಿನಯದ ”ಪುಟ್ನಂಜ” Putnanja ಚಿತ್ರದ ಜನಪ್ರಿಯ ಗೀತೆ. ಇದೊಂದು ಪ್ರೇಮಗೀತೆಯಾದರೂ ಇಲ್ಲಿ ಮೈಸೂರು ದಸರೆಯ ಸಂಕ್ಷಿಪ್ತ ಚಿತ್ರಣವಿದೆ. ಈ ಹಾಡಿಗೆ ಹಂಸಲೇಖ Hamsalekha ಸಾಹಿತ್ಯ ಬರೆದು ಸಂಗೀತ ನೀಡಿದ್ದು, ಎಸ್ ಪಿ ಬಾಲಸುಬ್ರಹ್ಮಣ್ಯ S P Balasubramanya ಅವರು ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿದ್ದಾರೆ.

ದಸರಾ ಬಂತಮ್ಮ, ಖುಷಿಯ ತಂತಮ್ಮ

ದಸರಾ ದಸರಾ ದಸರಾ ಬಂತಮ್ಮ.. ಹೊಸದು ಖುಷಿಯ ನಮಗೆ ತಂತಮ್ಮ.. ನಟ ಸಾಯಿ ಕುಮಾರ್ Sayi Kumar, ಸೌಂದರ್ಯ Soundarya ಮತ್ತು ಪ್ರೇಮ Prema ನಟಿಸಿರುವ “ವಿಜಯದಶಮಿ” Vijayadashami ಚಿತ್ರದ ಹಾಡಿದು. ದೇವಿ ಚಾಮುಂಡೇಶ್ವರಿಯ ಮಹಿಮೆ ಸಾರುವ ಈ ಹಾಡು. ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಸ್ವರ್ಣಲತಾ ಅವರ ಗಾಯನದಲ್ಲಿ ಮೂಡಿಬಂದಿದೆ. ಈ ಹಾಡು, ತುಂಬಾ ಮಂದಿಯ ಫೆವರೇಟ್ ಗೀತೆ ಕೂಡ ಹೌದು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...