- ಸಿನಿಮಾದಲ್ಲೂ ಪ್ರೇಕ್ಷಕರರಿಂದ ಭಾರೀ ಮನ್ನಣೆ ಗಳಿಸಿತ್ತು ಎಸ್ ಎಲ್ ಭೈರಪ್ಪ ಕಾದಂಬರಿಯಾಧಾರಿತ ಈ ಚಿತ್ರಗಳು
- ಭಾರತೀಯ ಚಿತ್ರರಂಗದಲ್ಲಿ ಮಾದರಿಯಾಯ್ತು ಆ ನಾಲ್ಕು ಚಿತ್ರಗಳು
- ಎಲ್ಲಾ ಚಿತ್ರಗಳಿಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳ ಗರಿ
ಕನ್ನಡ ಸಾಹಿತ್ಯಲೋಕದಲ್ಲಿ ಎಸ್ ಎಲ್ ಭೈರಪ್ಪ S.L.Bhairappa ಅಭಿಮಾನಿಗಳಿಗೆ ದೊಡ್ಡ ಫ್ಯಾನ್ಸ್ ಇದ್ದಾರೆ. ಇಹಲೋಕ ತ್ಯಜಿಸಿದ ಅವರಿಗಾಗಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಸಿನಿಮಾ ಪ್ರೇಮಿಗಳಿಗೂ ಎಸ್ ಎಲ್ ಭೈರಪ್ಪನವರಿಗೂ ಎಲ್ಲಿಲ್ಲದ ನಂಟು. ಅದೇಗೆ ಅಂದ್ರೆ ಭೈರಪ್ಪ ಅವರ ನಾಲ್ಕು ಕಾದಂಬರಿಗಳು ಸಿನಿಮಾ ಆಗಿರೋದೇ ಈ ನಂಟಿಗೆ ಕಾರಣ. ಹಾಗಾದ್ರೆ ಬನ್ನಿ ಭೈರಪ್ಪನವರ ಯಾವೆಲ್ಲಾ ಕಾದಂಬರಿಗಳು ಸಿನಿಮಾಗಳಾದವು? ಆ ಸಿನಿಮಾಗಳ ವಿಶೇಷತೆಗಳು ಏನು ಅನ್ನೋದನ್ನ ತಿಳಿಯೋಣ.
ಭೈರಪ್ಪನವರ ಕಾದಂಬರಿಗಳ ಆಧಾರಿತ ಕನ್ನಡ ಚಲನಚಿತ್ರಗಳಿವು
ವಂಶವೃಕ್ಷ Vamshariksha (1972)
ಭೈರಪ್ಪನವರ ಪ್ರಸಿದ್ಧ ಕಾದಂಬರಿ ವಂಶವೃಕ್ಷ ಆಧರಿಸಿದ ಚಲನಚಿತ್ರವನ್ನು 1972ರಲ್ಲಿ ಬಿ.ವಿ. ಕಾರಂತ B.V.Karantha ಮತ್ತು ಗಿರೀಶ್ ಕಾರ್ನಾಡ್ Gireesh Karnad ನಿರ್ದೇಶಿಸಿದ್ದರು. ನಟ ವಿಷ್ಣುವರ್ಧನ್ ishnuvardhan ಹಾಗೂ ನಟಿ ಉಮಾ ಶಿವಕುಮಾರ್ Uma Shivakumar ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಪ್ರೀತಿ, ನಷ್ಟ, ದುರಂತ ಮತ್ತು ವಿಜಯದ ಕಥೆಯನ್ನು ಈ ಚಿತ್ರ ಹೊಂದಿತ್ತು.
ತಬ್ಬಲಿಯು ನೀನಾದೆ ಮಗನೆ Thabbaliyu Neenade Magane (1977)
1977ರಲ್ಲಿ ಬಿಡುಗಡೆಯಾದ ತಬ್ಬಲಿಯು ನೀನಾದೆ ಮಗನೆ ಕಾದಂಬರಿ ಆಧಾರಿತ ಚಿತ್ರವನ್ನು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತ್ ಸಹ ನಿರ್ದೇಶಿಸಿದರು. ನಾಸಿರುದ್ದೀನ್ ಶಾ, ಓಂ ಪುರಿ, ಕುಲಭೂಷಣ್ ಖರ್ಬಂದ ಮುಂತಾದ ಕಲಾವಿದರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದರು. ಗ್ರಾಮೀಣ ಭಾರತೀಯ ಸಂಸ್ಕೃತಿ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸಿತು ಈ ಚಿತ್ರ
ಮತದಾನ Mathadana (2001)
ಭೈರಪ್ಪನವರ ಮತದಾನ ಕಾದಂಬರಿಯನ್ನು ಆಧರಿಸಿ ಟಿ.ಎನ್. ಸೀತಾರಾಂ T.N. Setharam ಅವರು 2001ರಲ್ಲಿ ಚಿತ್ರಕಥೆ ಬರೆದು ನಿರ್ದೇಶಿಸಿದರು. ಅನಂತ್ ನಾಗ್ Ananth Nag, ಅವಿನಾಶ್ Avinash ಮತ್ತು ತಾರ Thara ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಮತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಿನಿಮಾ ನಿರ್ಮಾಣಗೊಂಡಿತ್ತು
ನಾಯಿನೆರಳು Nayineralu (2006)
2006ರಲ್ಲಿ ಗಿರೀಶ್ ಕಾಸರವಳ್ಳಿ Gireesh Kasaravalli ನಿರ್ದೇಶನದಲ್ಲಿ ಮೂಡಿಬಂದಿತು ನಾಯಿನೆರಳು ಚಿತ್ರ. ಪವಿತ್ರಾ ಲೋಕೇಶ್ Pavithra Lokesh ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರ ಮೂರು ತಲೆಮಾರುಗಳು, ಪರಂಪರೆ ಮತ್ತು ಪುನರ್ಜನ್ಮದ ಕಥಾವಸ್ತುವನ್ನು ಒಳಗೊಂಡಿತ್ತು.