- ಸಿನಿರಸಿಕರ ತಲೆಗೊಂದಷ್ಟು ಕೆಲಸ ಕೊಟ್ಟ “ದೇವಿ ಮಹಾತ್ಮೆ” ಟೈಟಲ್: ಗಮನಸೆಳೀತು ಚಿತ್ರದ ಉಲ್ಟಾ ಟೈಟಲ್
- ವಿಭಿನ್ನ ಫೀಲ್ ಕೊಡೋ ಪೋಸ್ಟರ್ ನಲ್ಲಿದೆ ಕತೆಯ ಹಿಂಟ್
- ಚಿತ್ರದಲ್ಲಿ ಹಾಸ್ಯ-ಥ್ರಿಲ್ಲರ್ ಅಂಶವೇ ಪ್ರಧಾನ?
“ದೇವಿ ಮಹಾತ್ಮೆ” Devi Mahathme ಅನ್ನೋ ಚಿತ್ರ ಇದೀಗ ಟೈಟಲ್ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಏನಪ್ಪಾ ವಿಶೇಷ ಅಂದ್ರೆ ಈ ಚಿತ್ರದ ಟೈಟಲ್ ಉಲ್ಟಾ ಆಗಿರೋದೇ ಒಂದು ದೊಡ್ಡ ವಿಶೇಷ. ಹೌದು “ದೇವಿ ಮಹಾತ್ಮೆ” ಚಿತ್ರದ ಪೋಸ್ಟರ್ ಸೀದಾ ಇದ್ದರೂ ಕನ್ನಡ ಟೈಟಲ್ ಉಲ್ಟಾ ಆಗಿರೋದು ಸಿನಿರಸಿಕರ ಗಮನ ಸೆಳೆದಿದೆ. ಚಿತ್ರದಲ್ಲಿ ಕತೆಯೂ ಉಲ್ಟಾ ಪಲ್ಟಾ ಆಗಿ ಪ್ರೇಕ್ಷಕರ ತಲೆಗೆ ಕೆಲಸ ಜಾಸ್ತಿ ಕೊಡುತ್ತೇನೋ ಎನ್ನುವ ನಿರೀಕ್ಷೆ ಇದರಿಂದ ಶುರುವಾಗಿದೆ. ಅಲ್ಲದೇ ಪೋಸ್ಟರ್ ನಲ್ಲಿ ಇನ್ನೂ ಒಂದು ಹೊಸ ವಿಷಯ ಇದೆ. ಅದೇನಂದ್ರೆ ಕಥೆಯ ಎರಡು ವಿಚಾರವನ್ನ ಇಲ್ಲಿ ಕಾಣಬಹುದು. ಆ ಎರಡೂ ವಿಚಾರ ಕಥೆಯೊಳಗಿನ ಕಂಟೆಂಟ್ ಆಗಿದೆ. ಇದ್ರಿಂದ ಯಾವ ರೀತಿಯ ಸಿನಿಮಾ ಇದು ಅನ್ನೋದನ್ನ ಅಂದಾಜು ಮಾಡಬಹುದಾಗಿದೆ.
ಪೋಸ್ಟರ್ ನಲ್ಲೇನಿದೆ?
“ದೇವಿ ಮಹಾತ್ಮೆ” ಒಂದಷ್ಟು ವಿಭಿನ್ನವಾಗಿದೆ ಚಿತ್ರದ ಪೋಸ್ಟರ್ ವಿಶೇಷವಾಗಿದೆ. ಪೋಸ್ಟರ್ ನಲ್ಲಿ ಒಂದು ಕಡೆ ಹಳ್ಳಿ ವಾತಾವರಣ ಇದ್ರೆ ಮತ್ತೊಂದು ಕಡೆ ಸಮುದ್ರದ ತೀರದ ಚಿತ್ರಣ ಇರೋದು ಕತೆಯ ಕುರಿತು ಕುತೂಹಲ ಹುಟ್ಟಿಸಿದೆ. ಚಿತ್ರಕ್ಕೆ ನಾಗರಾಜ ಸೋಮಯಾಜಿ Nagaraja Somayaji ಡೈರೆಕ್ಷನ್ ಇದೆ ಅವರೇ ಚಿತ್ರಕ್ಕೆ ಕಥೆ ಕೂಡ ಬರೆದಿದ್ದಾರೆ. ವಾದಿರಾಜ ಶೆಟ್ಟಿ, ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಬಿ ಕಿರಣ್ ಸಾಥ್ ನೀಡಿದ್ದಾರೆ. ಚಿತ್ರದ ಟೈಟಲ್ ನೋಡುತ್ತಿದ್ದಂತೆಯೇ ಇದೊಂದು ದೇವರ ಸಿನಿಮಾ ಅಂತ ಫೀಲ್ ಆಗುತ್ತದೆ. ಆದರೆ ದೈವಿಕ ಅಂಶ ಇರೋದು ಸ್ವಲ್ಪವೇ ಎಂದು ಹೇಳಲಾಗುತ್ತಿದ್ದು ಹಾಸ್ಯ, ಥ್ರಿಲ್ಲರ್ ಮೂವಿ ಇದಾಗಿದೆ. ಒಟ್ಟಾರೆಯಾಗಿ ಟೈಟಲ್ ಪೋಸ್ಟರ್ ನಲ್ಲಿ ಚಿತ್ರತಂಡ ಒಂದಷ್ಟು ಕತೆಯನ್ನು ಬಿಟ್ಟುಕೊಟ್ಟಿದೆ. ಸದ್ಯದಲ್ಲೇ ಚಿತ್ರತಂಡ ಇನ್ನಷ್ಟು ವಿವರಗಳನ್ನು ನೀಡಲಿದೆ.


