- ಒಂದಷ್ಟು ಬದಲಾವಣೆಯೊಂದಿಗೆ ನಗಿಸಲು ಬರ್ತಿದೆ ಜನಪ್ರಿಯ ರಿಯಾಲಿಟಿ ಶೋ “ಕಾಮಿಡಿ ಕಿಲಾಡಿಗಳು”
- 5ನೇ ಸೀಸನ್ ನಲ್ಲಿ ಏನೆನೆಲ್ಲಾ ಬದಲಾವಣೆ
- ಹೊಸ ಮುಖಗಳು ಹುಟ್ಟಿಸಿದೆ ಹೊಸ ನಿರೀಕ್ಷೆ
ಕನ್ನಡ ಕಿರುತೆರೆಯ ಜೀ ಕನ್ನಡದ Zee Kannada “ಕಾಮಿಡಿ ಕಿಲಾಡಿಗಳು” Comedy Kiladigalu ಶೋಗೆ ತುಂಬಾ ಅಭಿಮಾನಿಗಳಿದ್ದಾರೆ. ವೀಕೆಂಡ್ ನಲ್ಲಿ ವೀಕ್ಷಕರ ನೆಚ್ಚಿನ ಶೋ ಆಗಿ ನಕ್ಕು ನಗಿಸುವ “ಕಾಮಿಡಿ ಕಿಲಾಡಿಗಳು” ಶೋ ಈಗ ಮತ್ತೊಂದು ಸೀಸನ್ ಗೆ ರೆಡಿಯಾಗಿದ್ದು ಕಿರುತೆರೆ ವೀಕ್ಷಕರನ್ನು ಸೆಳೆಯಲು ಕಾತರವಾಗಿದೆ. ಹೌದು ಇನ್ನೇನು “ಕಾಮಿಡಿ ಕಿಲಾಡಿಗಳು” ಶೋ ಮತ್ತೆ ಕಿರುತೆರೆ ವೀಕ್ಷಕರನ್ನು ರಂಜಿಸುವುದಕ್ಕೆ 5ನೇ ಸೀಸನ್ ಜೊತೆಗೆ ಬರುತ್ತಿದೆ. ಪ್ರತೀ ಸಲವೂ ಬದಲಾವಣೆಯೊಂದಿಗೆ ಬರುವ “ಕಾಮಿಡಿ ಕಿಲಾಡಿಗಳು” ಈ ಸಲವೂ ಕೂಡ ಒಂದಷ್ಟು ಹೊಸತನದೊಂದಿಗೆ ಪ್ರೇಕ್ಷಕರೊಳಗೆ ಲಗ್ಗೆಯಿಡಲು ರೆಡಿಯಾಗಿದೆ.
ಹೊಸ ಮುಖಗಳು, ಹೊಸ ನಿರೀಕ್ಷೆ
ಪ್ರೇಕ್ಷಕರಿಗೆ ಇನ್ನೂ ಹೆಚ್ಚು ಮನರಂಜನೆಯನ್ನು ನೀಡುವ ಉದ್ದೇಶದಿಂದ ಈ ಬಾರಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಅಂದ ಹಾಗೆ ಅಚ್ಚರಿಯ ಬದಲಾವಣೆ ಅಂದ್ರೆ ಈ ಬಾರಿ “ಕಾಮಿಡಿ ಕಿಲಾಡಿಗಳು” ಶೋನ ನಿರೂಪಕರೂ ಬದಲಾಗಿರೋದು. ವಿಭಿನ್ನವಾದ ನಿರೂಪಣೆಯಿಂದ ಕನ್ನಡಿಗರ ಮನಗೆದ್ದಿದ್ದ ನಿರಂಜನ್ ದೇಶಪಾಂಡೆ Niranjan Deshapande ಈ ಬಾರಿ ಈ ಶೋ ಅನ್ನು ನಡೆಸಿಕೊಡಲಿದ್ದಾರೆ. ಖ್ಯಾತ ನಿರೂಪಕಿ ಅನುಶ್ರೀ Anchor Anushree, ಇಲ್ಲವೇ ಮಾಸ್ಟರ್ ಆನಂದ್ Master Anand ಶೋ ನ ನಿರೂಪಣೆ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇವರಿಬ್ಬರ ಜಾಗಕ್ಕೆ ನಿರಂಜನ್ ದೇಶಪಾಂಡೆ ಎಂಟ್ರಿ ಕೊಟ್ಟಿರುವುದು ವಿಶೇಷ.
ಇವರೊಂದಿಗೆ ಜಡ್ಜ್ ಗಳು ಕೂಡ ಬದಲಾಗಿದ್ದಾರೆ. ಕಾಮಿಡಿ ಕಿಂಗ್ ಜಗ್ಗೇಶ್ Jaggesh ಒಬ್ಬರನ್ನು ಬಿಟ್ಟು ಇಬ್ಬರು ಜಡ್ಜ್ಗಳು ಕೂಡ ಬದಲಾಗಿದ್ದಾರೆ. ಸ್ಯಾಂಡಲ್ ವುಡ್ ನ ನಿರ್ದೇಶಕ ಯೋಗರಾಜ್ ಭಟ್ Yograj Bhat ಮತ್ತೊಮ್ಮೆ ಕಾಮಿಡಿ ಕಿಲಾಡಿಗಳು ತಂಡವನ್ನು ಸೇರಿಕೊಂಡಿರುವುದು ಇನ್ನೊಂದು ಬದಲಾವಣೆ. ಇನ್ನು ಹೊಸ ಸೇರ್ಪಡೆ ಅಂದರೆ, ಹಿರಿಯ ನಟಿ ತಾರಾ ಅನುರಾಧಾ Thara Anuradha. ಇವರೂ ಕಾಮಿಡಿ ಶೋ ನ ಜಡ್ಜ್ ಆಗಿ ಭಾಗವಹಿಸಲಿದ್ದಾರೆ. ಹಾಗಾಗಿ ಈ ಸಲ ಕಾಮಿಡಿ ಕಿಲಾಡಿಗಳು ಶೋ ಬಗ್ಗೆ ಒಂದಷ್ಟು ನಿರೀಕ್ಷೆಗಳು ಜಾಸ್ತಿಯಾಗಿದೆ.


