ಸೆಟ್ಟೇರಿತು “ಸೋಲ್ ಮೇಟ್ಸ್”, ಸದ್ಯದಲ್ಲೇ ಪ್ರಾರಂಭವಾಗಲಿದೆ ಚಿತ್ರೀಕರಣ

Date:

  • ಸೆಟ್ಟೇರಿತು “ಸೋಲ್ ಮೇಟ್ಸ್”, ಸದ್ಯದಲ್ಲೇ ಪ್ರಾರಂಭವಾಗಲಿದೆ ಚಿತ್ರೀಕರಣ
  • ಮೊದಲ ಚಿತ್ರದಲ್ಲೇ ಸಿನಿ ಪ್ರೇಕ್ಷಕರ ಮನ ಗೆದ್ದ ನವೀನ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ
  • ಅಭ್ಯುದಯ ಪ್ರೊಡಕ್ಷನ್ ಹೌಸ್ ನಿಂದ ಮೊದಲ ಚಿತ್ರ “ಸೋಲ್ ಮೇಟ್ಸ್”

ಅಭ್ಯುದಯ ಪ್ರೊಡಕ್ಷನ್ಸ್ ಎಂಬ ಹೊಸ ಪ್ರೊಡಕ್ಷನ್ ಹೌಸ್ ನಿರ್ಮಿಸುತ್ತಿರುವ ಚಿತ್ರ “ಸೋಲ್ ಮೇಟ್ಸ್” ಇದರ ಮುಹೂರ್ತ ನೆರವೇರಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದ ನಿರ್ಮಾಪಕರಾಗಿ ಬಂಡವಾಳ ಹೂಡಲಿದ್ದಾರೆ ನವೀನ್ ಗೌಡ. ಸಿನಿಮಾದಲ್ಲಿ ಯುವಪ್ರತಿಭೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರೊಂದಿಗೆ ನಾಯಕ ನಟನಾಗಿ ಬಣ್ಣ ಹಚ್ಚಲಿದ್ದಾರೆ 4N6 ಖ್ಯಾತಿಯ ನವೀನ್ ಕುಮಾರ್. ತನ್ನ ನಾಯಕತ್ವದ ಮೊದಲ ಚಿತ್ರ 4N6 ನಲ್ಲೇ ತನ್ನ ಚಾಣಾಕ್ಷ ಪ್ರತಿಭೆಯಿಂದ ಜನರ ಮನ ಗೆದ್ದ ಈ ಯುವನಾಯಕ ಮುಂದಿನ ಚಿತ್ರದಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಇವರಿಗೆ ನಾಯಕಿಯಾಗಿ ಸಾಥ್ ನೀಡಲಿದ್ದಾರೆ ನಿರ್ಮಲಾ.

ಚಿತ್ರಕ್ಕೆ ಶ್ರಮಿಸಲಿದ್ದಾರೆ ಘಟಾನುಘಟಿಗಳು

ಬಾಲರಾಜ್ ವಾಡಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕರ್ಣ, ಶಿಲ್ಪಶ್ರೀ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್ಯ ಎಸ್ ರೆಡ್ಡಿ ಸಿನಿಮಾಟೋಗ್ರಫಿ ಇರಲಿದ್ದು, ಚಿತ್ರ ಬೆಂಗಳೂರು ಮುಂತಾದ ಸ್ಥಳದಲ್ಲಿ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಆದಷ್ಟು ಶೀಘ್ರದಲ್ಲಿ ಸಿನಿಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ “ಸೋಲ್ ಮೇಟ್ಸ್”.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...