ಗಿಲ್ಲಿಗೆ ಗೆಲುವಿನ ಕಿರೀಟ, ಕರಾವಳಿಯ ರಕ್ಷಿತಾಗೆ ರನ್ನರ್ ಅಪ್ ಮುಕುಟ : ಇಬ್ಬರಿಗೂ ಬಿಗ್ ಬಾಸ್ ಸೀಸನ್ 12ರ ಕಡೆಯಿಂದ ಬಹುಮಾನಗಳ ಸುರಿಮಳೆ

Date:

  • ಗಿಲ್ಲಿಗೆ ಗೆಲುವಿನ ಕಿರೀಟ, ಕರಾವಳಿಯ ರಕ್ಷಿತಾಗೆ ರನ್ನರ್ ಅಪ್ ಮುಕುಟ : ಇಬ್ಬರಿಗೂ ಬಿಗ್ ಬಾಸ್ ಸೀಸನ್ 12ರ ಕಡೆಯಿಂದ ಬಹುಮಾನಗಳ ಸುರಿಮಳೆ
  • ಗೆದ್ದು ಮಿಂಚಿದ ಇಬ್ಬರಿಗೂ ಭರ್ಜರಿ ಬಹುಮಾನ..!
  • ಇಬ್ಬರಿಗೂ ಏನೇನು ಬಹುಮಾನ ಗೊತ್ತಾ..?

ಕಳೆದ ಕೆಲವು ತಿಂಗಳುಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಜನಪ್ರಿಯ ರಿಯಾಲಿಟಿ ಶೋ Reality show ಕನ್ನಡದ ಬಿಗ್ ಬಾಸ್-12 Bigboss 12 ಫಲಿತಾಂಶ ಭಾನುವಾರ ಹೊರಬಿದ್ದಿದ್ದು, ಗಿಲ್ಲಿ ನಟರಾಜ್ Gilli nataraj ಈ ಬಾರಿಯ ‘ಬಿಗ್ ಬಾಸ್ ಕನ್ನಡ 12’ Bigbooss winner ವಿನ್ನರ್ ಆಗಿ, ರಕ್ಷಿತಾ ರನ್ನರ್ ಅಪ್ Runnerup ಆಗಿ ಹೊರಹೊಮ್ಮಿದ್ದಾರೆ. ಅಶ್ವಿನಿ ಗೌಡ Ashwini gowda ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳ ನಡುವೆ ತೀವ್ರವಾದ ಸೆಣೆಸಾಟವಿತ್ತು. ಎಲ್ಲಾ ಸ್ಪರ್ಧಿಗಳಿಗೂ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಕಳೆದೆಲ್ಲಾ ಸೀಸನ್‌‌ಗಳಿಗಿಂತ ಈ ಸೀಸನ್‌ ಕಂಟೆಸ್ಟೆಂಟ್‌ಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ. ಅದರಲ್ಲೂ ಗಿಲ್ಲಿಗೆ ಸಿಕ್ಕಿರೋ ಬೆಂಬಲ ಜಾಸ್ತಿಯಿತ್ತು. ಬರೋಬ್ಬರಿ 37 ಕೋಟಿಗೂ ಅಧಿಕ ವೋಟ್ ಗಳನ್ನು ಗಿಲ್ಲಿ ಪಡೆದುಕೊಂಡಿದ್ದಾರೆ
ಈ ಬಾರಿ ಟಾಪ್ 5 ಸ್ಪರ್ಧಿಗಳಲ್ಲಿ ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ಹಾಗೂ ರಕ್ಷಿತಾ ಇದ್ದರು. ಆದರೆ ಅಂತಿಮವಾಗಿ ಗಿಲ್ಲ ಮತ್ತು ರಕ್ಷಿತಾ ನಡುವೆ ಪೈಪೋಟಿ ಜಾಸ್ತಿಯಿತ್ತು. ಕೊನೆಗೂ ಗಿಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಉಡುಗೊರೆಯ ಮಹಾಪೂರ:

ಈ ಬಾರಿಯ ಬಿಗ್‌‌ಬಾಸ್‌ ಸೀಸನ್‌ 12 ಗೆದ್ದ ಗಿಲ್ಲಿಗೆ ರೂ 50 ಲಕ್ಷದ ಜೊತೆಗೆ ಮಾರುತಿ ಸುಜುಕಿ ವಿಕ್ಟೋರಿಸ್‌ ಕಾರು ಭರ್ಜರಿ ಉಡುಗೊರೆಯಾಗಿ ದೊರೆತಿದೆ. ಅಲ್ಲದೇ ಕಿಚ್ಚ ಸುದೀಪ್ ಅವರು ಗಿಲ್ಲಿಗೆ ವೈಯಕ್ತಿಕವಾಗಿ ರೂ 10 ಲಕ್ಷ ಬಹುಮಾನ ಘೋಷಿಸಿದ್ದಾರೆ. ಇನ್ನು ರನ್ನರ್ ಅಪ್ ಆದ ರಕ್ಷಿತಾಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದ್ದು, ಜಾರ್ ಅಪ್ಲಿಕೇಶನ್ನ ವತಿಯಿಂದ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ನೀಡಲಾಗಿದೆ. ಅಂತೂ ಇಂತೂ ಸಖತ್ ಸೌಂಡ್ ಮಾಡುವುದರೊಂದಿಗೆ ಈ ವರ್ಷದ ಬಿಗ್ ಬಾಸ್ ಸೀಸನ್ 12 ಅದ್ಧೂರಿ ತೆರೆ ಕಂಡಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’ ಭಾರತೀಯ...