ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

Date:

  • ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು
  • ಓಟಿಟಿಯಲ್ಲಿ ಸೌಂಡ್ ಮಾಡಲು ರೆಡಿಯಾಗಿದೆ ಈ ಎರಡು ಚಿತ್ರಗಳು
  • ವಾರಾಂತ್ಯದಲ್ಲಿ ಕನ್ನಡದ ಪ್ರೇಕ್ಷಕರಿಗೆ ಓಟಿಟಿಯಲ್ಲಿ ಆಕ್ಷನ್ ಸಿನಿಮಾಗಳ ಹಬ್ಬ

ಕನ್ನಡ ಪ್ರೇಕ್ಷಕರಿಗೆ ಈ ವಾರಾಂತ್ಯ ಓಟಿಟಿಯಲ್ಲಿ-OTT ಮನರಂಜನೆಯ ರಸದೌತಣ ಸಿಗಲಿದೆ. ಕನ್ನಡದ ಎರಡು ಪ್ರಮುಖ ಸಿನಿಮಾಗಳು ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಗೊಂಡು ಸದ್ದು ಮಾಡಲು ಸಿದ್ದಗೊಂಡಿದೆ. ಆ ಎರಡು ಚಿತ್ರಗಳು ಯಾವುದು ನೋಡೋಣ.

ಆಕ್ಷನ್ ಥ್ರಿಲ್ಲರ್ ಚಿತ್ರ “ಮಾರ್ಕ್”

ಸುದೀಪ್ Actor Sudeep ನಟನೆಯ ಆಕ್ಷನ್ ಥ್ರಿಲ್ಲರ್ Action Thriller movie ಚಿತ್ರವಾದ “ಮಾರ್ಕ್”Mark ಡಿಸೆಂಬರ್ 25ರಂದು ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ಓಟಿಟಿಯಲ್ಲಿಯೂ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಸದವಕಾಶ. ಜನವರಿ 23ರಂದು ಜಿಯೋ ಹಾಟ್ ಸ್ಟಾರ್ ನಲ್ಲಿ Jio hotstar ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. . ತೆರೆಕಂಡ ಬರೀ 28 ದಿನಕ್ಕೆ ಸಿನಿಮಾ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಎಂಟ್ರಿ ಕೊಟ್ಟು ಸುದೀಪ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಫ್ಯಾಂಟಸಿ ಆಕ್ಷನ್ ಚಿತ್ರ ’45’

“45” ಹೆಸರಿನ ಚಿತ್ರ, ಸಖತ್ ನಿರೀಕ್ಷೆ ಮೂಡಿಸಿತ್ತು. ಶಿವರಾಜ್ ಕುಮಾರ್, Shivarajkumar, ಉಪೇಂದ್ರ Upendra ಹಾಗೂ ರಾಜ್ ಬಿ ಶೆಟ್ಟಿ Raj B Shetty ನಟಿಸಿದ್ದ ’45’ ಸಿನಿಮಾ ಥಿಯೇಟರ್ ನಲ್ಲಿ ಭರ್ಜರಿ ಯಶಸ್ಸು ಕಂಡಿರಲಿಲ್ಲ. ಈ ಚಿತ್ರ ಗರುಡಪುರಾಣ ಹಿನ್ನೆಲೆಯಲ್ಲಿ ಅರ್ಜುನ್ ಜನ್ಯಾ Arjun Janya ಕಟ್ಟಿಕೊಟ್ಟಿದ್ದರು. ಚಿತ್ರ ನಿರೀಕ್ಷೆ ಅಂತೂ ಮೂಡಿಸಿತ್ತು. ಆದರೆ ಆ ಬಳಿಕ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಒಟ್ಟು 11 ಗೆಟಪ್ ಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು. ಇದೊಂದು ಫ್ಯಾಂಟಸಿ ಆಕ್ಷನ್ Fantacy Action ಚಿತ್ರವಾಗಿತ್ತು. ಡಿಸೆಂಬರ್ 24ರಂದು ತೆರೆಗೆ ಬಂದಿದ್ದ ಈ ಸಿನಿಮಾ ಈ ವಾರ ಓಟಿಟಿಗೆ ರಿಲೀಸ್ ಆಗುತ್ತಿದ್ದು ಓಟಿಟಿಯಲ್ಲೇ ಸಿನಿಮಾ ನೋಡಬೇಕು ಎನ್ನುವ ನಿರೀಕ್ಷೆ ಇರುವವರು ಝೀ 5 ಓಟಿಟಿ Zee 5 OTT ವೇದಿಕೆಯಲ್ಲಿ ಜನವರಿ 23 ರಿಂದ ಈ ಚಿತ್ರವನ್ನು ಕಣ್ತುಂಬಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’ ಭಾರತೀಯ...