- ಫೆ.14 ರಂದು ‘ರಾಜು ಜೇಮ್ಸ್ ಬಾಂಡ್’ ಸಿನಿಮಾ ರಿಲೀಸ್.!
- ಗುರುನಂದನ್ ನಟನೆಯ ಚಿತ್ರ
ರಾಜು ಜೇಮ್ಸ್ ಬಾಂಡ್’ Raju James Bond Movie ಚಿತ್ರವನ್ನು ಫೆ. 14 ರ ಪ್ರೇಮಿಗಳ ದಿನದಂದುರಾಜ್ಯದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಸಿನಿಮಾದಲ್ಲಿ, ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್, ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ನಟಿಸಿದ್ದಾರೆ. ‘ಕರ್ಮ ಬೋಸ್ ಪ್ರೊಡಕ್ಷನ್ಸ್’ ಮೂಲಕ ನಿರ್ಮಣ ಆಗುತ್ತಿರುವ ‘ರಾಜು ಜೇಮ್ಸ್ ಬಾಂಡ್’ ಸಿನಿಮಾವನ್ನು ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ.
ಲಂಡನ್ ನಲ್ಲಿ ಸಿನಿಮಾದ ಶೂಟಿಂಗ್;
ಇನ್ನು ರಾಜು ಜೇಮ್ಸ್ ಬಾಂಡ್’ ಚಿತ್ರದಲ್ಲಿ ಮನಮೋಹಕ ಕಥೆ ಇದೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಲಂಡನ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಸಂಗೀತ ಕೂಡ ಈ ಸಿನಿಮಾದ ಹೈಲೈಟ್ ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ. ಈಗ ಫೆಬ್ರವರಿ 14ಕ್ಕೆ ಸಿನಿಮಾ ತೆರೆಕಾಣಲಿಸಲು ನಿರ್ಧರಿಸಿದ್ದಾರೆ.