ಕ್ಯೂಟ್ ಲವ್ ಸ್ಟೋರಿ “ಭುವನಂ…ಗಗನಂ” ಪ್ರೇಮಿಗಳ ದಿನದಂದು ತೆರೆಗೆ

Date:

  • ಕ್ಯೂಟ್ ಲವ್ ಸ್ಟೋರಿ “ಭುವನಂ…ಗಗನಂ” ಪ್ರೇಮಿಗಳ ದಿನದಂದು ತೆರೆಗೆ
  • ಪೃಥ್ವಿ ಅಂಬರ್ ಮತ್ತು ಪ್ರಮೋದ್ ನಾಯಕರಾಗಿ ಅಭಿನಯ
  • ಗಿರೀಶ್ ಮೂಲಿಮನಿಯವರ ಕತೆ, ಚಿತ್ರಕತೆ, ನಿರ್ದೇಶನವಿದೆ.
  • ಫೆ. 14, 2025 ರಂದು ರಾಜ್ಯಾದ್ಯಂತ ತೆರೆಕಾಣಲಿದೆ “ಗಗನಂ..ಭುವನಂ”

ಎಸ್‌ವಿಸಿ ಫಿಲಂಸ್‌ ಬ್ಯಾನರ್‌ನಡಿಯಲ್ಲಿ ಎಂ.ಮುನೇಗೌಡ ನಿರ್ಮಾಣದಲ್ಲಿ ಮೂಡಿ ಬಂದಿರುವ ಪ್ರೇಮ ಕಥಾ ಹಂದರವಿರುವ ಚಿತ್ರ ಭುವನಂ ಗಗನಂ Bhuvanam Gaganam Movie ಶೂಟಿಂಗ್ ಮುಗಿಸಿದ್ದು, ತೆರೆಗೆ ಬರಲು ರೆಡಿಯಾಗಿದೆ. ಸ್ಪೆಷಲ್ ಆಗಿ ಬಿಡುಗಡೆ ಮಾಡೋ ಯೋಚನೆಯಿಂದ ಚಿತ್ರ ತಂಡ ಪ್ರೇಮಿಗಳ ದಿನವನ್ನೇ ಬಿಡುಗಡೆಗೆ ಆಯ್ಕೆ ಮಾಡಿದೆ. ಹಾಗಾಗಿ 2025 ರ ಫೆಬ್ರವರಿ 14ರಂದು ಚಿತ್ರ ತೆರೆಗೆ ಬರ್ತಿದೆ. ಲವರ್ ಬಾಯ್ ಆಗಿ ಗಮನಸೆಳೆದಿರುವ ಪೃಥ್ವಿ ಅಂಬರ್ ಹಾಗೂ ರಗಡ್ ಪಾತ್ರಗಳ ಮೂಲಕ ಖ್ಯಾತಿ ಪಡೆದಿರುವ ಪ್ರಮೋದ್ ನಾಯಕರಾಗಿ ಭುವನಂ ಗಗನಂನಲ್ಲಿ ನಟಿಸಿದ್ದಾರೆ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಖ್ಯಾತರಾದ ರಾಚೇಲ್ ಡೇವಿಡ್ ಹಾಗೂ ಅಶ್ವತಿ ನಾಯಕಿಯರಾಗಿ ನಟಿಸಿದ್ದಾರೆ.

ಕ್ಯೂಟ್ ಲವ್ ಸ್ಟೋರಿಯ ಕಥಾಹಂದರ

ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ನಡೆಯುವ ಕಥೆ ಈ ಸಿನಿಮಾದಲ್ಲಿದ್ದು, ಇದು ಪ್ರೇಮ, ಪ್ರಣಯ ಮತ್ತು ಕೌಟುಂಬಿಕ ಭಾವನೆಗಳನ್ನು ಒಳಗೊಂಡಿದೆ. “ಇದೊಂದು ಕೌಟುಂಬಿಕ ಕಥೆಯನ್ನು ಒಳಗೊಂಡ ಚಿತ್ರವಾಗಿದ್ದು, ಕಥೆಯು ಎರಡು ಟ್ರ್ಯಾಕ್‌ಗಳಲ್ಲಿ ತೆರೆದುಕೊಳ್ಳುತ್ತದೆ. ಪ್ರಮೋದ್ ಮತ್ತು ಪೃಥ್ವಿಯ ಪ್ರಯಾಣಗಳು ಪ್ರತ್ಯೇಕವಾಗಿ ಸಾಗುತ್ತವೆ. ಒಂದು ಹಂತದಲ್ಲಿ ಎರಡೂ ಪಾತ್ರಗಳು ಒಂದಾಗುತ್ತವೆ. ಅವರು ಯಾಕೆ ಭೇಟಿಯಾಗುತ್ತಾರೆ ಮತ್ತು ನಂತರ ಏನಾಗುತ್ತದೆ ಎಂಬುದು ಚಿತ್ರದ ಹೈಲೈಟ್. ಹಲವಾರು ಹೊಸ ಅಂಶಗಳೊಂದಿಗೆ ಸಿನಿಮಾ ಮಾಡಲಾಗಿದ್ದು, ಇಡೀ ತಂಡದ ಪ್ರೋತ್ಸಾಹದಿಂದಾಗಿ ಸಿನಿಮಾ ಅಂದುಕೊಂಡಂತೆ ರೂಪುಗೊಂಡಿದೆ” ಎಂದಿದ್ದಾರೆ ಚಿತ್ರ ನಿರ್ದೇಶಕ ಗಿರೀಶ್ ಮೂಲಿಮನಿ.

ಗಗನಂ….ಭುವನಂ…. ಚಿತ್ರತಂಡ

ತಾರಾಗಣದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ ಮತ್ತು ಚೇತನ್ ದುರ್ಗ ಇದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣ, ಗುಮ್ಮನೇನಿ ವಿಜಯ್ ಅವರ ಸಂಗೀತ ಮತ್ತು ಸುನೀಲ್ ಕಶ್ಯಪ್ ಅವರ ಸಂಕಲನವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು ಅದ್ಬುತ ಸಿನಿಮ್ಯಾಟಿಕ್ ಟ್ರೈಲರ್...

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...