- ಫೆ.26 ರ ಶಿವರಾತ್ರಿಯಂದು ರಾಕ್ಷಸ ಚಿತ್ರ ರಿಲೀಸ್.!
- ವಿಭಿನ್ನವಾಗಿ ಪ್ರೇಕ್ಷಕರೆದುರು ಬರಲಿದ್ದಾರೆ ಪ್ರಜ್ವಲ್
ಚಂದನವನದ ‘ಡೈನಾಮಿಕ್ ಪ್ರಿನ್ಸ್’ ನಟ ಪ್ರಜ್ವಲ್ ದೇವರಾಜ್ Prajwal Devaraj ನಟನೆಯ ‘ರಾಕ್ಷಸ’ Rakshasa movie ಸಿನಿಮಾ ಶಿವರಾತ್ರಿಯಂದು ಬಿಡುಗಡೆಯಾಗಲಿದೆ. ಲೋಹಿತ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಈವರೆಗೆ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಜ್ವಲ್, ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ‘ರಾಕ್ಷಸ’ ಚಿತ್ರದ ಮೂಲಕ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಇದು ಕೇವಲ ಹಾರರ್ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ‘ರಾಕ್ಷಸ’ನಿಗೆ ಭಾವನಾತ್ಮಕ ಕಥೆಯ ಜೊತೆಗೆ ಟೈಮ್ ಲೂಪ್ ಕಾನ್ಸೆಪ್ಟ್ ನ ಸ್ಪರ್ಶವಿದೆ’ ಎಂದಿದೆ ಚಿತ್ರತಂಡ.

ಶಿವರಾತ್ರಿಗೆ ರಾಕ್ಷಸ ಚಿತ್ರ ರಿಲೀಸ್;
ಇನ್ನು ಇದೀಗ ಸಿನಿಮಾದ ರಿಲೀಸ್ ವಿಚಾರವನ್ನು ಹೇಳಿಕೊಂಡಿದ್ದಾರೆ. ಶಿವರಾತ್ರಿಯಂದೇ ಎಲ್ಲೆಡೆ ರಾಕ್ಷಸ ಚಿತ್ರವನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಅಂದ್ರೆ ರಾಕ್ಷಸ ಚಿತ್ರ ಮುಂದಿನ ತಿಂಗಳು ಫೆಬ್ರವರಿ-26 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಇನ್ನಷ್ಟು ಮಾಹಿತಿ ಹಾಗೂ ಪ್ರಜ್ವಲ್ ದೇವರಾಜ್ ಅವರ ಒಂದಷ್ಟು ಫೋಟೋಗಳನ್ನ ಸಿನಿಮಾ ತಂಡವೇ ಹಂಚಿಕೊಂಡಿದೆ.
ಇನ್ನು ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿಯೇ ಚಿತ್ರದ ಶೂಟಿಂಗ್ ಮಾಡಲಾಗಿದೆ. ರಾಮೇಶ್ವರಂ, ಗೋವಾ, ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣ ಮಾಡಲಾಗಿದೆ. ಬಹುತೇಕ ಎಲ್ಲ ಕೆಲಸ ಮುಗಿಸಿಕೊಂಡ ಈ ಚಿತ್ರ ಇದೀಗ ರಿಲೀಸ್‌ಗೆ ರೆಡಿ ಇದೆ.