- ಟಾಪ್ ಟ್ರೆಂಡಿಂಗ್ ನಲ್ಲಿ ಕನ್ನಡ ಸಿನಿಮಾದ ಹಾಡು ಶಿವ ಶಿವ.!
- ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ Dhruva Sarja ಅಭಿನಯದ ಕೆಡಿ KD Movie ಚಿತ್ರದ ಶಿವ ಶಿವ Shiva Shiva Song ಹಾಡು ವೈರಲ್ ಆಗಿದೆ. ಈ ಒಂದು ಲಿರಿಕಲ್ ವಿಡಿಯೋನೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಸಿನಿಮಾ ತಂಡದ ರೀಲ್ಸ್ ಚಾಲೆಂಜ್ ಅನ್ನು ಅನೇಕರು ಸ್ವೀಕರಿಸಿದ್ದಾರೆ. ಕಂಟೆಂಟ್ ಕ್ರಿಯೆಟರ್‌ಗಳೆಲ್ಲ ಈ ಒಂದು ಹಾಡಿಗೆ ತಮ್ಮದೇ ರೀತಿಯಲ್ಲಿಯೇ ರೀಲ್ಸ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಅಲ್ಲಿಯೇ ಈ ಒಂದು ರೀಲ್ಸ್ ಲೆಕ್ಕ ಒಂದು ಲಕ್ಷ ಆಗಿದೆ.

ಎಲ್ಲೆಲ್ಲೂ ಕನ್ನಡ ಸಿನಿಮಾ ಹಾಡು ಶಿವ ಶಿವಾ;
ಇನ್ನು ಕನ್ನಡ ಸಿನಿ ಪ್ರೇಕ್ಷಕರ ಕಣ್ಣು ಬಿದ್ದಿರೋದು ಕೆಡಿ ಸಿನಿಮಾ ಮೇಲೆ. ಡೈರೆಕ್ಟರ್ ಪ್ರೇಮ್ ಮತ್ತು ಧ್ರುವ ಸರ್ಜಾ ಅದ್ಯಾವ ಪ್ರಪಂಚ ಸೃಷ್ಟಿಸಿದ್ದಾರೆ ಅಂತ ನೋಡೋ ಕಾತುರ ಹೆಚ್ಚಾಗಿದೆ. ಸಿನಿ ಪ್ರೇಕ್ಷಕರಲ್ಲಿ ಕೆಡಿಯ ಹುಚ್ಚು ಹೆಚ್ಚಾಗಿಸೋದ್ರಲ್ಲಿ ಶಿವ ಶಿವ ಸಾಂಗ್ ಕೊಡುಗೆ ದೊಡ್ಡದಿದೆ. ಈಗ ಎಲ್ಲೆಲ್ಲೂ ಶಿವ ಶಿವ ಹಾಡಿನ ಸೌಂಡೇ ಕೇಳಿಸುತ್ತಿದೆ. ಇನ್ನು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಬರುತ್ತಿರೋ ಕೆಡಿಯಲ್ಲಿ ಹಾಡುಗಳ ಅದ್ಧೂರಿ ಹಬ್ಬ ಇರುತ್ತೆ. ಕನ್ನಡದಲ್ಲಿ ಜೋಗಿ ಪ್ರೇಮ್ ಹಾಗು ಕೈಲಾಶ್ ಕೇರ್ ಗಾಯನಕ್ಕೆ ಧ್ರುವ ಸಖತ್ ಸ್ಟೆಪ್ಸ್ ಹಾಕಿದ್ದಾರೆ.