ಸಂಕ್ರಾಂತಿ ಹಿಟ್ ‘ಛೂ ಮಂತರ್’..!

Date:

  • ಸಂಕ್ರಾಂತಿ ಹಿಟ್ ‘ಛೂ ಮಂತರ್’..!
  • ದ್ವಿಪಾತ್ರದಲ್ಲಿ ಕಾಣಿಸಿಕೊಂಡ ನಟ ಶರಣ್

ಕನ್ನಡದ ಸ್ಟಾರ್ ನಟ ಶರಣ್‌ Sharan ಅಭಿನಯದ ಹಾರರ್, ಕಾಮಿಡಿ ಸಿನಿಮಾ ‘ಛೂ ಮಂತ‌ರ್’ Choo Mantar Movie ಜನವರಿ 10 ಬಿಡುಗಡೆಗೊಂಡಿದ್ದು ವಿಭಿನ್ನ ಕಂಟೆಂಟ್ ವುಳ್ಳ ಈ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಥೆಯಲ್ಲೊಂದು ಕಥೆ, ಆ ಕಥೆಯಲ್ಲಿ ಇನ್ನೊಂದು ಕಥೆ ಹೀಗೆ ಸಿನಿಮಾ ಮೊದಲಿನಿಂದ ಕೊನೆಯವರೆಗೂ ಸಾಕಷ್ಟು ಕುತೂಹಲವನ್ನೇ ಸೃಷ್ಟಿಸುತ್ತಾ ಸಾಗುತ್ತದೆ. ಈ ಸಿನಿಮಾದಲ್ಲಿ ಯಾವುದನ್ನೂ ನಾವು ಊಹೆ ಮಾಡಲು ಸಾಧ್ಯವಿಲ್ಲ. ಮುಂದೆ ಹೀಗಾಗಬಹುದು ಎಂಬ ಊಹೆ ಇರದ ರೀತಿಯಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ಪಾತ್ರ ಮಾಡಿದ್ದು ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.

ಟ್ವಿಸ್ಟು, ಅಚ್ಚರಿ ಅಡಗಿಸಿಕೊಂಡಿರುವ ಕಥನ ಕುತೂಹಲ

ಇನ್ನು ಚಿತ್ರದಲ್ಲಿ ಒಂದು ಭೂತ ಬಂಗಲೆ. ಆ ಬಂಗಲೆಯಲ್ಲಿ ಅಮರಿಕೊಂಡಿರುವ ದೆವ್ವಗಳನ್ನು ಓಡಿಸಲೆಂದು ಭೂ ಮಂತರ್ ಆಯಂಡ್ ಕೋ ಬರುವುದರೊಂದಿಗೆ ಕತೆ ಆರಂಭವಾಗುತ್ತದೆ. ಹಾಗಂತ ಇದು ಬರೀ ದೆವ್ವ ಓಡಿಸುವ ಯೋಜನೆ ಎಂದು ನೀವು ಅಂದುಕೊಳ್ಳಬಾರದು. ಪ್ರತಿಯೊಂದರ ಹಿಂದೆಯೂ ಒಂದು ಕಾರಣ ಇರುತ್ತದೆ. ಮುಖ್ಯವಾಗಿ ಮಾರ್ಗನ್‌ ಹಾಂಟೆಡ್‌ ಹೌಸ್‌ನ ಬಗ್ಗೆ ಈ ಸಿನಿಮಾ ಇದೆ. ಅಲ್ಲಿ ಸತ್ತ ಹಲವರು ಆತ್ಮವಾಗಿ ಆ ಮನೆಯಲ್ಲಿ ನೆಲೆಸಿ ಆ ಮಾರ್ಗನ್ ಬಂಗ್ಲೆಯಲ್ಲಿ ಯಾರೂ ವಾಸ ಮಾಡಲು ಸಾಧ್ಯವಾಗದ ಮಟ್ಟಿಗೆ ಕಾಟ ಆರಂಭವಾಗಿರುತ್ತದೆ. ಕೋಟ್ಯಾಂತರ ಬೆಲೆ ಬಾಳುವ ನಿಧಿ ಇರುವ ಆ ಬಂಗ್ಲೆಯಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಉದ್ದಕ್ಕೂ ಇದೆ. ಗುರುಕಿರಣ್, ಹಾಗೂ ಪ್ರಥಮ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿ, ‘ಕರ್ವ’ ಖ್ಯಾತಿಯ ನವನೀತ್ ನಿರ್ದೇಶಿಸಿದ್ದಾರೆ

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...