- “ನಾಡ ಪ್ರಭು ಶಿವಪುಟ್ಟ ಸ್ವಾಮಿ” ಯಾಗಿ ಕರುನಾಡ ಚಕ್ರವರ್ತಿ .!
- ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಶಿವಣ್ಣ
ಕ್ಯಾನ್ಸರ್ ನಿಂದ ಬಳಲುತ್ತಿರುವ ಶಿವರಾಜ್ ಕುಮಾರ್ ಸರ್ಜರಿ ಮುಗಿಸಿಕೊಂಡು ಅಮೆರಿಕಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಇದೇ ತಿಂಗಳು 26ಕ್ಕೆ ಭಾರತಕ್ಕೆ ಬರಲಿದ್ದಾರೆ. ಸದ್ಯ ಅವರು ಕ್ಯಾನ್ಸರ್ನಿಂದ ಚೇತರಿಸಿಕೊಂಡಿದ್ದು, ಮತ್ತೆ ಸಿನಿಮಾ ನಟನೆ ಮುಂದುವರೆಸಲಿದ್ದಾರೆ ಎನ್ನಲಾಗಿದೆ ಎಂಬ ವಿಷಯವೇ ಕರುನಾಡ ಚಕ್ರವರ್ತಿಯ ಫ್ಯಾನ್ಸ್ ಗೆ ಹುಮ್ಮಸ್ಸು ನೀಡಿತ್ತು. ಈ ಮಧ್ಯೆ ಹೊಸ ಸಂತೋಷದ ಸುದ್ದಿಯೊಂದು ಹರಿದಾಡುತ್ತಿದೆ.

ಯಕ್ಷಗಾನ ಕಲಾವಿದನ ಪಾತ್ರದಲ್ಲಿ ಶಿವಣ್ಣ;
“ವೀರ ಚಂದ್ರಹಾಸ” Veera Chandrahasa Movie ಚಿತ್ರದ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಯಕ್ಷಗಾನ Yakshagana ವೈಭವ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ Shivaraj Kumar ಯಕ್ಷಗಾನ ಕಲಾವಿದನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವೀರ ಚಂದ್ರಹಾಸ ಚಿತ್ರವು ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಲ್ಲಿಗೆ, ಕನ್ನಡ ಸಿನಿಪ್ರೇಕ್ಷಕರು ನಟ ಶಿವಣ್ಣ ಅವರನ್ನು ಚಂದ್ರಹಾಸ Chandrahasa ಪಾತ್ರದಲ್ಲಿ ನೋಡಬಹುದು.
ಶಿವಣ್ಣ ಅವರು ಕೇವಲ ಕನ್ನಡ ನಟರಾಗಿ ಮಾತ್ರ ಉಳಿದಿಲ್ಲ. ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸಿ, ಅವರು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅಮೆರಿಕಾದಿಂದ ವಾಪಸ್ ಆದ ಬಳಿಕ ಅವರು ಜೈಲರ್ 2 ಸಿನಿಮಾಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಅಲ್ಲದೇ ಟಾಲಿವುಡ್ ಸ್ಟಾರ್ ನಟ, ಗ್ಲೋಬಲ್ ಖ್ಯಾತಿಯ ರಾಮ್ ಚರಣ್ ಅವರೊಂದಿಗೆ ಕೂಡ ನಟ ಶಿವರಾಜ್ಕುಮಾರ್ ಅವರು ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ‘ಎ ಫಾರ್ ಆನಂದ್’ ಎಂಬ ಮಕ್ಕಳ ಸಿನಿಮಾದಲ್ಲಿ ಸಹ ನಟ ಶಿವಣ್ಣ ನಟಿಸಲಿದ್ದು, ಅದನ್ನು ಸ್ವತಃ ಪತ್ನಿ ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಲಿದ್ದಾರೆ.