- “ನೋಡಿದವರು ಏನಂತಾರೆ” ಅನ್ನೋ ಚಿಂತೆ ಬಿಡಿ… ಟ್ರೈಲರ್ ನೋಡಿ
- ನಾಗೇಶ್ ಗೋಪಾಲ್ ನಿರ್ಮಿಸಿರುವ ಕುಲದೀಪ್ ಕಾರಿಯಪ್ಪ ನಿರ್ದೇಶನದ ಚಿತ್ರ
- ನವೀನ್ ಶಂಕರ್, ಅಪೂರ್ವ ಭಾರದ್ವಾಜ್ ಜೋಡಿಯಾಗಿ ಮಿಂಚಿದ್ದಾರೆ.
ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭೆಗಳ ತಂಡದ ಚಿತ್ರ “ನೋಡಿದವರು ಏನಂತಾರೆ” Nodidavaru Enantare ಬಿಡುಗಡೆಗೆ ಸಜ್ಜಾಗಿದೆ. ಕುಲದೀಪ್ ಕಾರಿಯಪ್ಪ ನಿರ್ದೇಶಿಸಿ, ನವೀನ್ ಶಂಕರ್ Naveen Shankar ವಿಭಿನ್ನ ಪಾತ್ರದ ಮೂಲಕ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿಮಾದ ಬಗ್ಗೆ ಪ್ರೇಕ್ಷಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಸಿನಿಮಾ ಜನವರಿ 31 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಟ್ರೈಲರ್ ನೋಡಿದರು ಹೀಗಂತಾರೆ!
ಮೊದಲ ನೋಟಕ್ಕೇ ಟ್ರೈಲರ್ ಮನಮೆಚ್ಚಿಸಿ, ಚಿತ್ರದ ಬಗ್ಗೆ ಕುತೂಹಲ ಕೆರಳಿಸುವಂತಿದೆ. ತಮ್ಮ ಸಹಜವಾದ ಅಭಿನಯದ ಮೂಲಕ ನವೀನ್ ಶಂಕರ್ ಜನರ ಮೆಚ್ಚುಗೆ ಪಡೆಯೋದ್ರಲ್ಲಿ ಸಂಶಯವಿಲ್ಲ. ಸಮಾಜದಲ್ಲಿ ಎಲ್ಲರೂ ಸಾಮಾನ್ಯವಾಗಿ ಬಳಸುವ ಪದ, ಆಲೋಚನೆ ಎಲ್ಲದೂ “ನೋಡಿದವರು ಏನಂತಾರೆ”, ಅಂದರೆ ನೋಡುಗರಿಗಾಗೇ ನಾವು ಬದುಕೋದು ಎಂಬರ್ಥ. ಆದರೆ ಇದನ್ನೆಲ್ಲಾ ಮೆಟ್ಟಿ ನಿಂತು ನಮಗಾಗಿ ನಾವು ಬದುಕೋದನ್ನು ಹೇಳಿ ಕೊಡುತ್ತಾ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತಾ ಈ ಸಿನಿಮಾ ಕಾದು ನೋಡಬೇಕಿದೆ. ಟ್ರೈಲರ್ ಅಂತೂ ಎಲ್ಲರ ಮಹತ್ವಾಕಾಂಕ್ಷೆಗೆ ಕಾರಣವಾಗಿದೆ.
ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ, ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಸಾಹಿತಿ ಜಯಂತ್ ಕಾಯ್ಕಿಣಿ Jayant Kaykini ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮಯೂರೆಶ್ ಅಧಿಕಾರಿ ಸಂಗೀತ ಸಂಯೋಜನೆಯಿದೆ. ಜನವರಿ 31, 2025 ರಂದು ಬಿಡುಗಡೆಯಾಗ್ತಿರುವ ಈ ಚಿತ್ರವನ್ನು ನೋಡಿದವರು ಏನಂತಾರೆ ಕಾದು ನೋಡಬೇಕಿದೆ.