ಪ್ಯಾನ್ ಇಂಡಿಯಾ ಮೂವೀ Monk the Young ಫೆಬ್ರವರಿಯಲ್ಲಿ ತೆರೆಗೆ

Date:

  • ಪ್ಯಾನ್ ಇಂಡಿಯಾ ಮೂವೀ Monk the Young ಫೆಬ್ರವರಿಯಲ್ಲಿ ತೆರೆಗೆ
  • ಹೆಸರಿನಿಂದಲೇ ಕುತೂಹಲ ಹುಟ್ಟಿಸುತ್ತಿರುವ ಮೂವೀ Monk the Young
  • ಬೇರೆ ಬೇರೆ ರಾಜ್ಯಗಳ ಐದು ನಿರ್ಮಾಪಕರು ಸೇರಿ ಪ್ಯಾನ್ ಇಂಡಿಯಾ ಮೂವೀ ತರುವ ಪ್ರಯತ್ನ

ಪ್ಯಾನ್ ಇಂಡಿಯಾ ಮೂವೀ ತರುವ ಗುರಿಯನ್ನು ಹೊಂದಿರುವ, ಒಂದೊಂದು ರಾಜ್ಯವನ್ನು ಪ್ರತಿನಿಧಿಸುವ ಐದು ಜನ ನಿರ್ಮಾಪಕರ ತಂಡದ ಪ್ರಯತ್ನವೇ Monk the Young ಚಿತ್ರ. ಹೆಸರಿನಿಂದಲೇ ಸಿನಿಮಾಸಕ್ತರ ಕುತೂಹಲ ಹೆಚ್ಚಿಸುತ್ತಿರುವ ಈ ಚಿತ್ರವನ್ನು ಕರ್ನಲ್ ರಾಜೇಂದ್ರನ್, ಗೋಪಿಚಂದ್ ಮತ್ತು ಲಾಲ್ ಚಂದ್ ಖಟ್ಟರ್ ಇವರೊಂದಿಗೆ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ ಮತ್ತು ಸರೋವರ್ ಅವರು ಸಹ ನಿರ್ಮಾಪಕರಾಗಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಕೆ.ಆರ್.ಜಿ. ಸ್ಟುಡಿಯೋಸ್ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಚಿತ್ರಕ್ಕೆ ಮಾಸ್ಚಿತ್ ಸೂರ್ಯ ಆಕ್ಷನ್ ಕಟ್ ಹೇಳಿದ್ದು, “ಮಾಂಕ್ ದಿ ಯಂಗ್ ಸಿನಿಮಾ ವಿಂಟೇಜ್ ಫ್ಯಾಂಟಸಿ ಕಥಾಹಂದರವನ್ನು ಹೊಂದಿದೆ, ಚಿತ್ರದ ಪ್ರಯಾಣವು 1869 ರಲ್ಲಿ ಪ್ರಾರಂಭವಾಗುತ್ತದೆ ಮತ್ತು ವಿವಿಧ ಕಾಲಘಟ್ಟಗಳ ಕಥೆಯನ್ನು ಒಳಗೊಂಡಿದೆ. ಅದರ ಲೇಯರ್ಡ್ ಕಥಾಹಂದರವು ವೀಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ. ಆತ್ಮಾವಲೋಕನ ಮಾಡಿಕೊಂಡಾಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ” ಎಂದು ತಿಳಿಸಿದ್ದಾರೆ. ಸರೋವರ್ ನಾಯಕ ನಟನಾಗಿ ನಟಿಸಿದ್ದು, ನಾಯಕಿಯಾಗಿ ಸೌಂದರ್ಯ ಗೌಡ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಕೃತಿ, ರವಿಶಂಕರ್, ಸಾರಸ್ ಮಂಜುನಾಥ್, ರವಿ ಮಟ್ಟಿ, ಸುಮಂತ್ ಮತ್ತು ಶಿವಪ್ಪ ಇದ್ದಾರೆ.

“ಮಾಯೆ” ಹಾಡು ಬಿಡುಗಡೆ

ಎನ್ಜಿಒ ನಾಯಕಿ ಉಷಾ, ಇತ್ತೀಚೆಗಷ್ಟೇ “ಮಾಯೆ” Maaye Song ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಪ್ರತಾಪ್ ಭಟ್ ಅವರು ಸಾಹಿತ್ಯ ಬರೆದಿದ್ದು, ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಅವರ ಸಂಗೀತ ಸಂಯೋಜನೆಯಿದ್ದು, ಈ ಹಾಡಿಗೆ ಈಗಾಗಲೇ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೆಬ್ರವರಿ ಅಂತ್ಯದೊಳಗಾಗಿ ಚಿತ್ರ ಮುಖ್ಯ ಭೂಮಿಕೆಯಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...