- ಚಿತ್ರೀಕರಣ ಪೂರೈಸಿದ ದುನಿಯಾ ವಿಜಯ್ ಅಭಿನಯದ “ಮಾರುತ”
- ಕಲಾಸಾಮ್ರಾಟ್ ಡಾ. ಎಸ್ ನಾರಾಯಣ್ ನಿರ್ದೇಶನದ ಸಿನಿಮಾ “ಮಾರುತ”
- ಅಪಾರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿದೆ ಈ ಚಿತ್ರ
ಖ್ಯಾತ ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಈಶಾ ಪ್ರೊಡಕ್ಷನ್ಸ್ ಮೂಲಕ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಚಿತ್ರ “ಮಾರುತ”. Marutha Movie ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಡಾ. ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯಗೊಂಡಿದೆ.

ಅಪಾರ ವೆಚ್ಚದ ಅದ್ಧೂರಿ ಚಿತ್ರ
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ ಚಿತ್ರಕ್ಕೆ ಅಪಾರ ಖರ್ಚು ಮಾಡಿ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. “ಚಂಡ” ಹಾಗೂ “ದಕ್ಷ” ಚಿತ್ರಗಳು ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ Duniya Vijay ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದು ಬಹುಯಶಸ್ಸನ್ನು ಗಳಿಸಿದ್ದವು. ಅದೇ ರೀತಿ ಅವರಿಬ್ಬರ ಕಂಬಿನೇಷನ್ ನಲ್ಲೇ ಬರುತ್ತಿರುವ ಮೂರನೇ ಚಿತ್ರ “ಮಾರುತ”. ಇದು ಜನಸಾಮಾನ್ಯರ ಕಥೆಯಾಗಿದ್ದು, ಪ್ರತಿ ಮನೆಯಲ್ಲಿ ನಡೆಯುವ ಘಟನೆಗಳೇ ಚಿತ್ರವಾಗಿದೆ. ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲ ಅವರಿಸಿಕೊಂಡಿರುವ ಭೂತ ಈ ಮಾರುತ. ಅದರಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಶ್ರೇಯಸ್ ಕೆ ಮಂಜು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಬೃಂದಾ ಈ ಚಿತ್ರದ ನಾಯಕಿ. ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ ಮೊದಲಾದವರು ಚಿತ್ರದಲ್ಲಿದ್ದು, ವಿಶೇಷಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಚಿತ್ರಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನವಿದೆ.