- ರಿಲೀಸ್ ಆಯ್ತು ಕ್ಯೂಟ್ ಲವ್ ಸ್ಟೋರಿ “ಭುವನಂ ಗಗನಂ” ಟ್ರೈಲರ್
- ಪೃಥ್ವಿ ಅಂಬರ್, ಪ್ರಮೋದ್ ನಾಯಕತ್ವದ ಗಿರೀಶ್ ಮೂಲಿಮನಿ ನಿರ್ದೇಶನದ ಚಿತ್ರ
- ಪ್ರೇಮಿಗಳ ದಿನಕ್ಕೆ ಸಿದ್ಧವಾಗಿದೆ ಕ್ಯೂಟ್ ಲವ್ ಸ್ಟೋರಿ
ಪೃಥ್ವಿ ಅಂಬರ್ Prithvi Ambar ಹಾಗೂ ಪ್ರಮೋದ್ Pramod ಮುಖ್ಯಭೂಮಿಕೆಯಲ್ಲಿರುವ “ಭುವನಂ ಗಗನಂ” Bhuvanam Gaganam ಚಿತ್ರ ಪ್ರೇಮಿಗಳ ದಿನದಂದು ತೆರೆಗೆ ಬರಲು ರೆಡಿಯಾಗಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟರಾದ ಡಾರ್ಲಿಂಗ್ ಕೃಷ್ಣ, ನೀನಾಸಂ ಸತೀಶ್, ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ತ್ರಿವಿಕ್ರಮ್, ಅನುಷಾ ರೈ, ಹಾಸ್ಯನಟ ಶಿವರಾಜ್ ಕೆ ಆರ್ ಪೇಟೆ, ನಿರ್ದೇಶಕ ಚೇತನ್ ಕುಮಾರ್, ನಟಿಯರಾದ ಪವನ ಗೌಡ, ಸಾನ್ಯಾ ಅಯ್ಯರ್, ಸಂಭಾಷಣೆ ಬರಹಗಾರ ಮಾಸ್ತಿ ಮುಂತಾದವರುವಚಿತ್ರ ತಂಡಕ್ಕೆ ಶುಭಕೋರಿದ್ದಾರೆ.

ಮುಗ್ಧ ಮನಸ್ಸುಗಳ ಪಯಣದ ಕತೆ
ಗಿರೀಶ್ ಮೂಲಿಮನಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಎರಡು ಮುದ್ದಾದ ಮನಸ್ಸುಗಳ ನಡುವಿನ ಪ್ರೇಮಕಥೆಯಾಗಿದೆ. ಈ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ, ಎಮೋಷನ್ ಕಥಾಹಂದರ ಹೊಂದಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯನ್ನು ಹೊಂದಿದೆ.
ತಾರಾಗಣದಲ್ಲಿದ್ದಾರೆ ಇವರೆಲ್ಲಾ…
ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ಮುಂತಾದವರು ತಾರಾಬಳಗದಲ್ಲಿದ್ದಾರೆ. ದುಬೈನಲ್ಲಿ ಆಯೋಜಿತವಾಗಿದ್ದ ಪ್ರೀಮಿಯರ್ ಶೋನಲ್ಲಿ ಈ ಚಿತ್ರ ಈಗಾಗಲೇ ಚಿತ್ರ ಪ್ರೇಮಿಗಳ ಮನ ಗೆದ್ದಿದ್ದು, ಪ್ರೇಮಿಗಳ ದಿನದಂದು ಕೊಡುಗೆಯಾಗಿ ಈ ಚಿತ್ರ ಹೊರಬರಲಿದೆ.